ಘಟಪ್ರಭಾ: ಘಟಪ್ರಭಾ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಯಿಸಿ, ಒಂದು ಮಾದರಿ ಪುರಸಭೆಯನ್ನು ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿ ಹೇಳಿದರು.
ಅವರು ಪುರಸಭೆ ವ್ಯಾಪ್ತಿಯ ನೂತನ ಉನ್ನತೀಕರಿಸಿದ ಸರಕಾರಿ ಪ್ರೌಢ ಶಾಲೆ ಮತ್ತು ಕನ್ನಡ ಹಿರಿಯ ಪ್ರಾಥಮಿಕ ದುಪಧಾಳ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ನಿಮ್ಮ ಸಹಾಯ ಸಹಕಾರ ಬೇಕಾಗುತ್ತದೆ. ಮತ್ತು ಸರ್ಕಾರದ ಜಾಗವನ್ನು ಯಾರು ಅತಿಕ್ರಮಣವನ್ನು ಮಾಡಿರುತ್ತಾರೆ ಅಂತವರನ್ನು ಮುಲಾಜಿ ಇಲ್ಲದೆ ಅವರಿಂದ ಸರ್ಕಾರಿ ಜಾಗವನ್ನು ಮರಳಿ ಪುರಸಭೆಗೆ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಳೆದ ೨೫ ವರ್ಷಗಳಿಂದ ಶಾಸಕನಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ ಆದರೆ ಈಗ ಘಟಪ್ರಭಾ ಪುರಸಭೆ ಆದ ಬಳಿಕ ಕಾರಣಾಂತರಗಳಿಂದ ಎರಡು ವರ್ಷಗಳ ಕಾಲ ಅಭಿವೃದ್ಧಿಯಲ್ಲಿ ಸ್ವಲ್ಪ ವಿಳಂಬವಾಗಿರುತ್ತದೆ, ಅದಕ್ಕೆ ಇನ್ನೂ ಮಲ್ಲಾಪೂರ ಪಿ. ಜಿ ಹಾಗೂ ದುಪದಾಳ ಎರಡು ಕೂಡಿ ಘಟಪ್ರಭಾ ಪುರಸಭೆ ಆದ ಬಳಿಕ ಇನ್ನು ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಬೇಕಾಗಿದೆ ಇನ್ನು ದುಪದಾಳ ಕಮಾನದಿಂದ ಪಾಲ್ಸ್‌ದ ವರಿಗೆ ಡಬಲ್ ರಸ್ತೆ ಮಾಡುವುದಕ್ಕೆ ಚಾಲನೆ ನೀಡಿದ್ದೇನೆ. ದುಪದಾಳದ ಲಕ್ಷ್ಮೀದೇವಿ ದೇವರ ಗುಡಿಗೆ ಹೋಗುವ ರಸ್ತೆಯನ್ನು ಡಾಂಬರೀಕರಣ ಮಾಡುವುದಿದೆ. ಶಾಲೆಗೆ ಬೇಕಾಗುವ ಅನೇಕ ಸೌಲಭ್ಯಗಳನ್ನು ನಾನು ಒದಗಿಸಿಕೊಡುತ್ತೇನೆ ಎಂದು ಹೇಳಿದರು. ಮತ್ತು ಘಟಪ್ರಭಾ ಪುರಸಭೆ ವತಿಯಿಂದ 2025 26ನೇ ಸಾಲಿನ ಎಸ್ ಎಫ್ ಸಿ ಹಾಗೂ 2023 24 ಮತ್ತು 24 25 ನೇ ಸಾಲಿನ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದ ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರ ,ಸೋಲಾರ್ ಪೆನಲ್,ತ್ರಿ ಚಕ್ರ ಸೈಕಲ್, ವಿತರಣೆ ಮಾನ್ಯ ಶಾಸಕರು ಮಾಡಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ನವಿಲಮಾಳದ ಶ್ರೀ ಚಿದಾನಂದ ಮಹಾಸ್ವಾಮಿಗಳು ಹಾಗೂ ರೇಣುಕಾಚಾರ್ಯ ದೇವರು ವಹಿಸಿದರು. ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಮುತ್ತೇಪ್ಪಾ ಮಲ್ಲಾಪೂರೆ, ವಹಿಸಿದರು, ಎಂ.ಡಿ.ಎಂ ಅಧಿಕಾರಿ ಎ.ಬಿ. ಮಲಬನ್ನವರ, ಬಿಆರ್.ಸಿ ಎಸ್.ವಿ. ಕುಲಕರ್ಣಿ, ಡಿ.ಎಮ.ದಳವಾಯಿ, ಮುಖ್ಯಾಧಿಕಾರಿ ಶ್ರೀಮತಿ ಎಮ್.ಎಸ್. ಪಾಟೀಲ, ರಾಮಪ್ಪ ದೇಮನ್ನವರ, ಪರಶುರಾಮ ಗಡಿವಡ್ಡರ, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆಂಪಣ್ಣ ಚೌಕಾಶಿ, ಹಣಮಂತ ಗಾಡಿವಡ್ಡರ, ಮದಾರಸಾಬ ಜಗದಾಳ, ಅಶೋಕ್ ಪರಪ್ಪನವರ, ಶೆಟ್ಟೆಪ್ಪ ಗಾಡಿ ವಡ್ಡರ್, ಮಹೇಶ ಪಾಟೀಲ, ಶಾನೂರ ಕೋತವಾಲ್, ಲಗಮಣ್ಣಾ ನಾಗನ್ನವರ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ರವಿ ನಾವಿ, ಭರತೇಶ ಪರಪ್ಪನವರ, ಬಾಹುಬಲಿ ಕಡಹಟ್ಟಿ, ರಾಜಕುಮಾರ ಚಿಗತಮ್ಮನವರ, ಶ್ರೀಮಂತ ಬೇಳವಿ, ರಾಜಶೇಖರ ರಜಪೂತ, ಚಂದ್ರಕಾಂತ ಭೋಸಲೆ, ಜಿನ್ನಪ್ಪ ಕಮತೆ, ಅಪ್ಪಾಸಾಬ್ ಮುಲ್ಲಾ, ಸಲೀಂ ಕಬ್ಬೂರ್, ಮಲ್ಲು ಕೋಳಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಈರಣ್ಣ ಕಲಕುಟಗಿ, ಸಿದ್ದಪ್ಪ ತಳಗೇರಿ, ಶ್ರೀಕಾಂತ್ ಮಾಜನ್ ಸೇರಿದಂತೆ ಮಲ್ಲಾಪುರ ಪಿಜಿ ದುಫದಾಳ್ ಮುಖಂಡರು ಹಿರಿಯರು.ಯುವಕರು ಅನೇಕರು ಇದ್ದರು.
ವರದಿ : ಸದಾನಂದ ಎಮ್
