ಮಾನ್ವಿ ನಗರದ ಕಲ್ಮಠದ ವತಿಯಿಂದ ಮಹಾಶಿವರಾತ್ರಿಯ ಗಾರಿಗೆ ಜಾತ್ರಾ ಮಹೋತ್ಸವ

ಮಾನ್ವಿ ನಗರದ ಕಲ್ಮಠದ ವತಿಯಿಂದ ಮಹಾಶಿವರಾತ್ರಿಯ ಗಾರಿಗೆ ಜಾತ್ರಾ ಮಹೋತ್ಸವದಲ್ಲಿ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಲ್ಮಠ ಮಾನ್ವಿ ಅಭಿನವ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಶಾಂಭವಿ ಸುಕ್ಷೇತ್ರ ನೀಲಗಲ್ ಹಾಗೂ ಎನ್. ಗಣೇಕಲ್.ಕಲ್ಯಾಣ ಮಹಾಸ್ವಾಮಿಗಳು ಕಲ್ಯಾಣ ಮಠ ಬಳ್ಳಾರಿ ಕಮ್ಮರಚೇಡು. ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಂಗಳವಾರಪೇಟೆ ರಾಯಚೂರು ಇವರುಗಳ ದಿವ್ಯ ಸಾನಿಧ್ಯದಲ್ಲಿ ಅನುರಾಧ ಚಿಂತಕರು ಬಳ್ಳಾರಿ. ಪ್ರಭುರಾಜ ಕೊಡ್ಲಿ ಡಿ.ಎಸ್.ಎಸ್.ಮುಖಂಡರು ಮಾನ್ವಿ. ಹಲವಾರು ಗಣ್ಯಾತಿಗಣ್ಯರ ಸಮಕ್ಷಮದಲ್ಲಿ ಸಿಂಧನೂರಿನ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗು ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಸುಜಾತ ಹಿರೇಮಠ ಈ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿ ” ಸದ್ಗುರು ಶ್ರೀ ವಿರೂಪಾಕ್ಷೇಶ್ವರ ಕೃಪಾಭೂಷಣ ಪ್ರಶಸ್ತಿ ” ಪ್ರಧಾನ ಮಾಡಿ ಇಪ್ಪತ್ತೈದು ಸಾವಿರ ರೂಪಾಯಿಗಳ ನಗದು ವಿತರಿಸಿ ಸೇವೆಗೆ ಪ್ರೋತ್ಸಾಹಿಸಿ ಆಶೀರ್ವದಿಸಿದರು. ಈ ಸಮಯದಲ್ಲಿ ಕಾರುಣ್ಯಾಶ್ರಮದ ಸದಸ್ಯರಾದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್ ಇವರು ನಮ್ಮ ಕಾರುಣ್ಯ ಸಂಸ್ಥೆಗೆ ನಮ್ಮ ಈ ಸಮಾಜ ಸೇವೆ ಅನಾಥಪರ ಸೇವೆಗಳನ್ನು ಗುರುತಿಸಿ ಮಾನ್ವಿ ಕಲ್ಮಠದ ಶ್ರೀಗಳು ಸದ್ಗುರು ಶ್ರೀ ವಿರೂಪಾಕ್ಷೇಶ್ವರ ಕೃಪಭೂಷಣ ಪ್ರಶಸ್ತಿಯನ್ನು ವಿತರಿಸಿ ಆಶೀರ್ವದಿಸಿ ಇನ್ನೂ ಹೆಚ್ಚಿನ ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ಪ್ರೋತ್ಸಾಹಿದ್ದಾರೆ. ಈ ಪ್ರಶಸ್ತಿಗಳು ಸನ್ಮಾನಗಳು ಗೌರವಗಳು ಕಾರುಣ್ಯ ಆಶ್ರಮಕ್ಕೆ ಸಹಾಯ ಸಹಕಾರ ಮಾಡಿದ ಮತ್ತು ಮುಂದೆ ಮಾಡುವ ಎಲ್ಲಾ ಸಮಸ್ತ ದಾನಿಗಳಿಗೆ ಅರ್ಪಣೆ ನಾಡಿನ ಬಸವಾದಿ ಶರಣರ ಹರ-ಗುರು ಚರಮೂರ್ತಿಗಳ ಮತ್ತು ದಾನಿಗಳ ಆಶೀರ್ವಾದವೇ ಇಂದಿನ ಈ ಮಹಾತ್ಮರ ಆಶೀರ್ವಾದ ಪ್ರಶಸ್ತಿಗೆ ಮೂಲ ಕಾರಣವಾಗಿವೆ.ಕಾರುಣ್ಯ ಕುಟುಂಬದ ಪ್ರಾಮಾಣಿಕ ಸೇವೆಗೆ ಬೆಲೆ ತಂದುಕೊಡುತ್ತೀವೆ.ಮತ್ತು ನಮ್ಮ ಜೊತೆ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ನ ಸಂಸ್ಥಾಪಕರಾದ ಅಶೋಕ ನಲ್ಲ ಅವರ ನಿರಂತರ ಸಹಕಾರ ಮತ್ತು ಸಿಂಧನೂರು ಮತ್ತು ರಾಯಚೂರು ಜಿಲ್ಲೆಯ ಪ್ರತಿಯೊಂದು ಸಂಘ-ಸಂಸ್ಥೆಗಳ ಸಹಕಾರವೇ ಕರುಣೆಯ ಕಾರುಣ್ಯ ಕುಟುಂಬದ ಸೇವೆಗೆ ಮೂಲ ಶಕ್ತಿಯಾಗಿವೆ. ಇಂದಿನ ಸದ್ಗುರು ಶ್ರೀ ವಿರೂಪಾಕ್ಷೇಶ್ವರ ಕೃಪಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿ ಆಶೀರ್ವದಿಸಿದ ಮಾನ್ವಿ ಕಲ್ಮಠದ ಶ್ರೀಗಳಾದ ಪೂಜ್ಯ ವಿರೂಪಾಕ್ಷ ಪಂಡಿತಾರಾಧ್ಯ ಮಹಾಸ್ವಾಮಿಗಳಿಗೆ ಮತ್ತು ಗಾರಿಗೆ ಜಾತ್ರಾ ಮಹೋತ್ಸವದ ಸಮಸ್ತ ಸಮಿತಿಯ ಪದಾಧಿಕಾರಿಗಳಿಗೆ ಮತ್ತು ಮಾನ್ವಿ ಕಲ್ಮಠದ ಆಯುರ್ವೇದಿಕ್ ಕಾಲೇಜಿನ ಸಮಸ್ತ ಪದಾಧಿಕಾರಿಗಳು ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳು ಮತ್ತು ಅಪಾರ ಶಿಷ್ಯ ವೃಂದಕ್ಕೆ ಸಿಂಧನೂರಿನ ಕರುಣೆಯ ಕಾರುಣ್ಯ ಕುಟುಂಬದಿಂದ ಕೃತಜ್ಞತಾ ನಮನಗಳು ಎಂದು ಮಾತನಾಡಿದರು.

ವರದಿ : ಸದಾನಂದ ಎಮ್

error: Content is protected !!