ತಾಲೂಕ ಮಟ್ಟದಲ್ಲಿ ಕನ್ನಡದ ಕಲೆ ಸಾಹಿತ್ಯದ ಸಂಭ್ರಮ

ಚಿಟಗುಪ್ಪ : ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪ
ಚಿಟಗುಪ್ಪ ಕನ್ನಡ ಭಾಷೆ ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬರಿಗೂ ಅಭಿಮಾನ ಇರಬೇಕು ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು. ಪಟ್ಟಣದಲ್ಲಿ ಮೂರನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರ ಕನ್ನಡ ಶಾಲೆಗಳು ಯಾವುದೇ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಮ್ಮಿ ಇಲ್ಲ ಕನ್ನಡ ಶಾಲೆ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಹೀಗಾಗಿ ಎಲ್ಲಾ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದಿಸಬೇಕು ಎಂದರು. ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಲಕ್ಷ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ್ ಮಾತನಾಡಿ ಚಿಟಗುಪ್ಪ ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಶಿಕ್ಷಕರು ಶಾಲೆಯ ಗುಣಮಟ್ಟವನ್ನು ಕಾಪಾಡಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು ಎಂದರು. ಸಾಹಿತಿ ಸಿದ್ದು ಯಾಪಲಪರವಿ ಮಾತನಾಡಿ, ಆಂಗ್ಲ ಭಾಷೆ ಕಲಿತರೆ ದೊಡ್ಡ ಸಾಧನೆ ಎಂಬ ಕಲ್ಪನೆ ಸರಿಯಲ್ಲ.
ಮುಖ್ಯಾಂಶಗಳು
ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದಿಸಿ.
ಭಾಷಾ ದ್ವೇಷ ಬೆಳೆಸಿದರೆ ಎಲ್ಲಾ ಭಾಷೆಗಳಿಗೆ ಉಳಿಗಾಲ ಇಲ್ಲ.
ಕನ್ನಡ ಭಾವನೆ ನಿರ್ಮಾಣಕ್ಕೆ ಅನುದಾನ ಭರವಸೆ.
ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇರಬೇಕು, ಆದರೆ ಬೇರೆ ಭಾಷೆಗಳ ಬಗ್ಗೆ ದುರಾಭಿಮಾನ ಸಲ್ಲದು ಬೇರೆ ಭಾಷೆಗಳನ್ನು ನಾವು ಪ್ರೀತಿಸಿ, ಗೌರವಿಸಬೇಕು ಭಾಷಾ ದ್ವೇಷ ಬೆಳೆಸಿದರೆ ಎಲ್ಲಾ ಭಾಷೆಗಳಿಗೆ ಉಳಿಗಾಲ ಇಲ್ಲ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಚೆನಶೆಟ್ಟಿ ಮಾತನಾಡಿ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ. ಕನ್ನಡ ಉಳಿಸಬೇಕು ಎಂದು ಕೇಳಿಕೊಳ್ಳುವುದು ಎಂಬುದು ನೋವಿನ ಸಂಗತಿಯಾಗಿದೆ ಹೀಗಾಗಿ ಹೆಚ್ಚಾಗಿ ಕನ್ನಡ ಭಾಷೆ ಬೆಳಸಬೇಕು ಎಂದರು. ಈ ಸಂದರ್ಭದಲ್ಲಿ ರೇಣುಕಾ ವೀರ ಗಂಗಾಧರ್ ಶಿವಾಚಾರ್ಯ, ತಾಲೂಕು ಪಂಚಾಯತ್ ಲಕ್ಷ್ಮಿ ಬಿರಾದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಗುಡಾಳ್, ಬಾಬುರಾವ್ ದಾನಿ, ಪ್ರೇಮಿಳ ಪಾಟೀಲ್, ಅಶೋಕ್ ರೆಡ್ಡಿ, ರಮೇಶ್ ಸಲಗರ್, ರವೀಂದ್ರ ರೆಡ್ಡಿ, ಮಾಲಿ ಪಾಟೀಲ್, ಶೇಕ್ ಮೆಹಬೂಬ್ ಪಾಟೀಲ್, ಅಶೋಕ್ ಕುಮಾರ್ ಮಹೇಂದ್ರಕಾರ್, ರಾಜು ಜಮಾದಾರ್, ಮಹಾರುದ್ರಪ್ಪ ಅಣದುರೆ, ರಾಜಶೇಖರ್, ಸಂಜೀವನ್ ಬೋಸ್ಲೆ, ಅನಿಲ್ ಕುಮಾರ್ ಸಿಂಧೆ, ಸೇರಿದಂತೆ ಇತರರು ಇದ್ದರು.
ಸೌಲಭ್ಯಗಳ ಕಲ್ಪಿಸಿ : ನೇಳಗಿ
ಸಮ್ಮೇಳನಾಧ್ಯಕ್ಷ ಮಾಣಿಕ್ ನೇಳಗಿ ಮಾತನಾಡಿ, ಚಿಟಗುಪ್ಪ ತಾಲೂಕು ಎಂದು ಘೋಷಣೆಯಾಗಿ ವರ್ಷಗಳೇ ಕಳೆದಿವೆ ಆದರೆ ತಾಲೂಕು ಕೇಂದ್ರದಲ್ಲಿ ಸಿಗುವ ಸೌಲಭ್ಯಗಳು ಲಭಿಸುತ್ತಿಲ್ಲ ಹೀಗಾಗಿ ಸರ್ಕಾರ ಎತ್ತೆತ್ತುಕೊಂಡು ಚಿಟಗುಪ್ಪ ತಾಲೂಕು ಅಭಿವೃದ್ಧಿ ಮಾಡುವುದಕ್ಕೆ ಶ್ರಮಿಸಬೇಕು. ಚಿಟಗುಪ್ಪಾ ಪಟ್ಟಣಕ್ಕೆ ಹೊಸ ಬಸ್ ಡಿಪೋ ಕಲ್ಪಿಸಬೇಕು. ತಾಲೂಕೂ ಆಡಳಿತದ ಕಟ್ಟಡ ಶೀಘ್ರದಲ್ಲೇ ಆರಂಭಿಸುವುದು ಪಟ್ಟಣದಲ್ಲಿಯೂ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು. ಚಿಟಗುಪ್ಪಾ ಪಟ್ಟಣದಿಂದ ಜಿಲ್ಲಾ ಕೇಂದ್ರಕ್ಕೆ ಬಸ್ ಸೌಲಭ್ಯ ಹೆಚ್ಚಿಸಬೇಕು. ಉನ್ನತ ಶಿಕ್ಷಣಕ್ಕಾಗಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸ್ಥಾಪನೆಗೆ ಮನವಿ ಮಾಡಿದರು.

error: Content is protected !!