ಹೋಳಿ ಹಬ್ಬಕ್ಕೆ ಹಾನಿಕಾರಕ ಬಣ್ಣ ಬಳಸದೆ ಬೇರೆಯವರಿಗೆ ತೊಂದರೆ ಕೊಡದಂತೆ ಆಚರಿಸಿ : ಪಿಎಸ್ಐ ವಾತ್ಸಲ್ಯ ಬಿರಾದಾರ

ರೇವೂರ ಬಿ : ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿರುವ ಹೊಳಿ ಹಬ್ಬ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯು ಪಿಎಸ್ಐ ವಾತ್ಸಲ್ಯ ಬಿರಾದಾರ ನೇತೃತ್ವದಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ರೇವೂರು ಬಿ ಪಿಎಸ್ಐ ವಾತ್ಸಲ್ಯ ಬಿರಾದಾರ ಪಿಯುಸಿ ಪರೀಕ್ಷೆ ಇರುವುದರಿಂದ ಯಾರಿಗೂ ತೊಂದರೆಯಾಗದಂತೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ರ ವರೆಗೆ ಬಣ್ಣದ ಹಬ್ಬ ಆಚರಣೆ ಮಾಡಬೇಕು

ಶಾಂತಿಯುತವಾಗಿ ಸಂಭ್ರಮದಿಂದ ಹೊಳಿ ಹಬ್ಬ ಆಚರಿಸಿ ಆದರೆ ಬೆರೆಯವರಿಗೆ ತೊಂದರೆಯಾಗದಿರಲಿ.ವಿಶೇಷವಾಗಿ ಹಾನಿಕಾರಕ ರಾಸಾಯನಿಕ ಬಣ್ಣ ಬಳಕೆ ಮಾಡದಿರಿ.ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ.ಅದಲ್ಲದೇ ಮುಸ್ಲಿಂ ಭಾಂದವರು ರಂಜಾನ್ ಹಬ್ಬದ ಪ್ರಯುಕ್ತ ಉಪವಾಸವಿರುತ್ತಾರೆ.ಬಲವಂತವಾಗಿ ಯಾರೂ ಕೂಡಾ ಬಣ್ಣ ಹಚ್ಚಬಾರದು.ಶಾಂತಿ-ಸಹಬಾಳ್ವೆಯಿಂದ ಸಂಭ್ರಮದಿಂದ ಹೊಳಿ ಹಬ್ಬ ಆಚರಿಸಿ ಅನಾವಶ್ಯಕವಾಗಿ ಶಾಂತಿ ಕದಡುವ ಕೆಲಸ ಯಾರೂ ಕೂಡಾ ಮಾಡದಿರಿ ಎಂದು ಸೂಚನೆ ನೀಡಿದರು. ಹಾಗೂ ಎಲ್ಲರಿಗೂ ಹೊಳಿ ಹಾಗೂ ರಂಜಾನ್ ಹಬ್ಬದ ಶುಭಾಶಯ ತಿಳಿಸಿದರು.

ನಂತರ ಸಭೆಯನ್ನುದ್ದೆಶಿಸಿ ಕ್ರೈಂ ಪಿಎಸ್ಐ ಕಮರುಲ್ ರಾಠೋಡ್ ಎಲ್ಲಾ ಸಮುದಾಯದವರು ಎಲ್ಲಾ ಹಬ್ಬ ಹರಿ ದಿನಗಳನ್ನು ಸಂಭ್ರಮದಿಂದ ಒಟ್ಟಾಗಿ ಆಚರಿಸುತ್ತಾರೆ. ಅದಲ್ಲದೇ ರಂಜಾನ್ ಹಬ್ಬದಂದು ನಮ್ಮ ಸಹೋದರ ಸಮುದಾಯ ಮುಸ್ಲಿಂ ಭಾಂದವರು ಮನೆಗಳಿಗೆ ತೆರಳಿ ಶುಭಕೋರಿ ಸಿಹಿ ಸೇವನೆ ಮಾಡಿ ಬರುತ್ತಾರೆ.ಅವರು ಕೂಡಾ ಹೊಳಿ ಹಬ್ಬವನ್ನು ನಮ್ಮೊಂದಿಗೆ ಸಂತಸದಿಂದ ಆಚರಣೆ ಮಾಡುತ್ತಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಉಪಾಧ್ಯಕ್ಷರಾದ ಲತೀಫ್ ಪಟೇಲ್ ಮಲ್ಲಿನಾಥ ಪುಜಾರಿ (ASI), ಲಕ್ಷ್ಮಣ ASI, ರಾಜು SB ರೇವೂರ ಬಿ ಗ್ರಾಮದ ಗ್ರಾಮಸ್ಥರು ಮುಖಂಡರು ನ್ಯೂ
ಸಿದ್ದನೋರ ಲತೀಫ್ ಬಡೇಸಾಬ ಕಲಬುರ್ಗಿ
ದತ್ತಾತ್ರೇಯ ವಿ ಹೆರೂರ್
ಮಲ್ಲು ಅತನೂರ
ಸಿದ್ದಪ್ಪ ಪುಜಾರಿ
ಗೌಡಪ್ಪ ಗೌಡ ಪಾಟೀಲ್
ಭಾಷಾ ಪಟೇಲ್ ಶಾಂತಿ ಸಭೆಯಲ್ಲಿ ಉಪಸ್ಥಿತರಿದ್ದರು

ವರದಿ : ಸೈಫನ್ ಮುಲ್ಲಾ ಕಲಬುರ್ಗಿ

error: Content is protected !!