ದೇವಲ್ ಗಾಣಗಾಪುರ್ : ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿರುವ ಹೊಳಿ ಹಬ್ಬ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯು ಪಿಎಸ್ಐ ಸಂಗೀತಾ ಸಿಂಧೇ ನೇತೃತ್ವದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಎಸ್ಐ ಸಂಗೀತಾ ಸಿಂಧೇ ಪಿಯುಸಿ ಪರೀಕ್ಷೆ ಇರುವುದರಿಂದ ಯಾರಿಗೂ ತೊಂದರೆಯಾಗದಂತೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಬಣ್ಣದ ಹಬ್ಬ ಆಚರಣೆ ಮಾಡಬೇಕು
ಶಾಂತಿಯುತವಾಗಿ ಸಂಭ್ರಮದಿಂದ ಹೊಳಿ ಹಬ್ಬ ಆಚರಿಸಿ ಆದರೆ ಬೆರೆಯವರಿಗೆ ತೊಂದರೆಯಾಗದಿರಲಿ ವಿಶೇಷವಾಗಿ ಹಾನಿಕಾರಕ ರಾಸಾಯನಿಕ ಬಣ್ಣ ಬಳಕೆ ಮಾಡದಿರಿ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ ಅದಲ್ಲದೇ ಮುಸ್ಲಿಂ ಭಾಂದವರು ರಂಜಾನ್ ಹಬ್ಬದ ಪ್ರಯುಕ್ತ ಉಪವಾಸವಿರುತ್ತಾರೆ.
ಬಲವಂತವಾಗಿ ಯಾರೂ ಕೂಡಾ ಬಣ್ಣ ಹಚ್ಚಬಾರದು ಶಾಂತಿ-ಸಹಬಾಳ್ವೆಯಿಂದ ಸಂಭ್ರಮದಿಂದ ಹೊಳಿ ಹಬ್ಬ ಆಚರಿಸಿ ಅನಾವಶ್ಯಕವಾಗಿ ಶಾಂತಿ ಕದಡುವ ಕೆಲಸ ಯಾರೂ ಕೂಡಾ ಮಾಡದಿರಿ ಎಂದು ಸೂಚನೆ ನೀಡಿದರು. ಹಾಗೂ ಎಲ್ಲರಿಗೂ ಹೊಳಿ ಹಾಗೂ ರಂಜಾನ್ ಹಬ್ಬದ ಶುಭಾಶಯ ತಿಳಿಸಿದರು.
ನಂತರ ಸಭೆಯನ್ನುದ್ದೆಶಿಸಿ ಮಾತನಾಡಿದ ತಮ್ಮರಾಯ ಪಾಟೀಲ ಆರಕ್ಷಕ ಉಪಾಧಿಕ್ಷಕರು ಆಳಂದ ಉಪ -ವಿಭಾಗ ಆಳಂದ ಎಲ್ಲಾ ಸಮುದಾಯದವರು ಎಲ್ಲಾ ಹಬ್ಬ ಹರಿ ದಿನಗಳನ್ನು ಸಂಭ್ರಮದಿಂದ ಒಟ್ಟಾಗಿ ಆಚರಿಸುತ್ತಾರೆ. ಅದಲ್ಲದೇ ರಂಜಾನ್ ಹಬ್ಬದಂದು ನಮ್ಮ ಸಹೋದರ ಸಮುದಾಯ ಮುಸ್ಲಿಂ ಭಾಂದವರು ಮನೆಗಳಿಗೆ ತೆರಳಿ ಶುಭಕೋರಿ ಸಿಹಿ ಸೇವನೆ ಮಾಡಿ ಬರುತ್ತಾರೆ.ಅವರು ಕೂಡಾ ಹೊಳಿ ಹಬ್ಬವನ್ನು ನಮ್ಮೊಂದಿಗೆ ಸಂತಸದಿಂದ ಆಚರಣೆ ಮಾಡುತ್ತಾರೆ.
ಕೆಲವು ಕೀಡಿಗೇಡಿಗಳು ಅನಾವಶ್ಯಕ ವಿಚಾರಗಳ ಬುದ್ದಿಹೀನರು ದ್ವೇಷ ಸೃಷ್ಟಿಸುವ ಕೆಲಸಕ್ಕೆ ತೆರಳುತ್ತಾರೆ ಅಂತಹ ವ್ಯಕ್ತಿಗಳ ಮೇಲೆ ಕಾನೂನು ಕಠಿಣ ಕ್ರಮ ಕೈಗೊಳ್ಳಲಾಗಿವುದು ಎಂದು ಹೇಳಿದರು,
ಈ ಸಂದರ್ಭದಲ್ಲಿ. ಸಂಗೀತಾ ಶಿಂಧೇ ಪಿಎಸ್ಐ (L&O).
ದೇವಲ್ ಗಾಣಗಾಪೂರ ಠಾಣೆ, ಬಸವರಾಜ.(ASI), ಬಂದೇನವಾಜ್, ಶಿವು ಮಲ್ಲಾಬಾದ್, ವಿಠಲ್ ಹೂಗಾರ, ರಮೇಶ್, ಸಂತೋಷ್, ಕಾಶಿಲಿಂಗ್, ಗಿರಿಮಲ್ಲ. ಗ್ರಾಮದ ಹಿರಿಯ ಮುಖಂಡರು ಎಲ್ಲಾ ಸಮುದಾಯದ ಮುಖಂಡರು ಈ ಶಾಂತಿ ಸಭೆಯಲ್ಲಿ ಭಾಗವಹಿಸಿ ಉಪಸ್ಥಿದರು
ವರದಿ : ಸೈಫನ್ ಮುಲ್ಲಾ ಕಲಬುರ್ಗಿ
