3.27 ಕೋಟಿ‌ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರೆವೇರಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ನಿಪ್ಪಾಣಿ : ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನಿಪ್ಪಾಣಿ ನಗರಸಭೆ ಕಾರ್ಯಾಲಯ ವತಿಯಿಂದ‌ ಇಂದು ನಗರೋತ್ಥಾನ ಹಂತ–4 ಅನುದಾನದಡಿ ಅಂದಾಜು 3.27 ಕೋಟಿ‌ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದರು.

ಕಾಮಗಾರಿಗಳ ವಿವರ:
🔹 ಹರಿನಗರ, ಮಂಗಳವಾರ ಪೇಠ, ಮುನ್ಸಿಪಲ್ ಹೈಸ್ಕೂಲ್ ಹಿಂಬದಿ, ಕಿನೇಕರ ಗಲ್ಲಿ ಪ್ರದೇಶಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ – ₹70.00 ಲಕ್ಷ
🔹 ಸಂಭಾಜಿ ನಗರ ಆಶ್ರಯ ಕಾಲೋನಿ, ಭೀಮನಗರದಲ್ಲಿ ಪರಿಶಿಷ್ಟ ಜಾತಿ ಜನ ವಸತಿ ಪ್ರದೇಶಗಳಿಗೆ ಸಮುದಾಯ ಶೌಚಾಲಯ – ₹34.98 ಲಕ್ಷ
🔹 ಮಾಂಗವಾಡಾ ಜತ್ರಾಟ ವೇಸದಲ್ಲಿ ಪರಿಶಿಷ್ಟ ಪಂಗಡ ಜನ ವಸತಿ ಪ್ರದೇಶಗಳಿಗೆ ಸಮುದಾಯ ಶೌಚಾಲಯ – ₹14.17 ಲಕ್ಷ
🔹 ಇತರ ಬಡಜನ ವಸತಿ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯ – ₹18.48 ಲಕ್ಷ
🔹 ಪಾವತಿ ಗಲ್ಲಿಯಲ್ಲಿ ವಿಕಲಚೇತನ ಸ್ನೇಹಿ ಶೌಚಾಲಯ – ₹60.00 ಲಕ್ಷ
🔹 ಮಟನ್ ಮತ್ತು ಮೀನು ಮಾರುಕಟ್ಟೆ ನಿರ್ಮಾಣ – ₹100.00 ಲಕ್ಷ
🔹 ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನ ಪಕ್ಕದಲ್ಲಿರುವ ನಗರಸಭೆ ಜಾಗೆಯಲ್ಲಿ ತಿನಿಸು ಕಟ್ಟೆ ನಿರ್ಮಾಣ – ₹38.00 ಲಕ್ಷ

ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ. ಸ್ವಚ್ಛತೆ, ಸೌಲಭ್ಯ ಮತ್ತು ಸಮಗ್ರ ಅಭಿವೃದ್ಧಿಯತ್ತ ನಮ್ಮ ಬದ್ಧತೆ ಮುಂದುವರಿಯುತ್ತದೆ.

ವರದಿ : ಸದಾನಂದ ಎಮ್

error: Content is protected !!