ಹುಕ್ಕೇರಿ ಶ್ರೀ ಲಕ್ಷ್ಮೀದೇವಿ ಜಾತ್ರೆಯ ಸುವ್ಯವಸ್ಥೆ ಕಾಪಾಡಿ ಶ್ರೀ ರಾಮ್ ಸೇನಾ ಮನವಿ

ಹುಕ್ಕೇರಿ ಶಹರದ ಸಾರ್ವಜನಿಕರ ಪರವಾಗಿ (ಶ್ರೀ ರಾಮಸೇನೆ ಹುಕ್ಕೇರಿ ವತಿಯಿಂದಾ ಹುಕ್ಕೇರಿ ತಹಶೀಲ್ದಾರ್ರ ಹಾಗೂ ವಿವಿಧ ಇಲಾಖೆಗೆಮನವಿಪತ್ರ ಸಲ್ಲಿಸಿದರು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತಾ ಬರುವ ಹುಕ್ಕೇರಿ ಲಕ್ಷ್ಮೀದೇವಿ ಜಾತ್ರೆಯ ನಿಮಿತ್ಯವಾಗಿ ಸಾರ್ವಜನಿಕರ ಸುರಕ್ಷತೆ ಹಾಗೂ ಸ್ವಚತೆ ಹಾಗೂ ಸಾರ್ವಜನಿಕರಿಗೆ ಜಾತ್ರೆಯಲ್ಲಿ ಆಗುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕೆಳಕಂಡ ಕ್ರಮಗಳನ್ನು ಕೈಗೊಂಡು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನುಕೂಲ ಆಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಇದೆ.

ಸಮಟ್ಪಾತದಲ್ಲಿ ಇರತಕ್ಕೆ ಎಲ್ಲ ಅಂಗಡಿ/ವ್ಯಾಪಾರಸ್ಥರ ಗಾಡಾಗಳನ್ನು ಜಾತ್ರಾ ಮುಗಿಯುವವರೆಗೆ ತೆರವುಗೊಳಿಸಬೇಕು. ರಸ್ತೆ ಸಂಚಾಗ ಹಾಗೂ ಪಾವಾಚಾರಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.
ಶ್ರೀ ದ್ಯಾಮವ್ವಾ ದೇವಸ್ಥಾನ/ಶ್ರೀ ಲಕ್ಷ್ಮೀ ದೇವಸ್ಥಾನ ಹಾಗೂ ಶ್ರೀ ರಥ ನಿಲ್ಲುವ ಸ್ಥಳದಿಂದ ಸುಮಾರು ಕರ್ಪೂರ, ಬಾಳೆಹಣ್ಣು, ಕಾಯಿ, ಉಡಿ ತುಂಬುವ ವಸ್ತುಗಳು, ಹಾಗೂ ಆಟಿಕೆ ಸಾಮಾನು ಮಾರಾಟ ಅಂಗಡಿಗಳನ್ನು ಕನಿಷ್ಟ 10೦ ಮೀಟರ್ ದೂರದಲ್ಲಿ ಮಾರಾಟ ಮಾಡಲು ಅವಕಾಶ ಮಾಡಿ ಕೊಡಬೇಕು
ಪ್ರತಿ ಅಂಗಡಿಯವರು ಹೊರಗಿನಿಂದ ಬಂದಂತವರು ಹಾಗೂ ಇಲ್ಲಿಯ ವ್ಯಾಪಾರಸ್ಥರು ತಮ್ಮ ಸುತ್ತ ಮುತ್ತಲಿನ ಸ್ಥಳವನ್ನು ಸ್ವಚ್ಛ ಇಟ್ಟುಕೊಳ್ಳಬೇಕು. ಕಸವನ್ನು ಪುರಸಭೆ ವಾಹನಕ್ಕೆ ಕಡ್ಡಾಯವಾಗಿ ಹಾಕಬೇಕು
ಹುಕ್ಕೇರಿ ಹಾಗೂ ವಿವಿಧ ಊರುಗಳಿಂದ ಜಾತ್ರೆಗೆ ಬರತಕ್ಕ ಜನರಿಗೆ ನೀರಿನ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಸರಿಯಾಗಿ ಮಾಡಿಸಬೇಕು. ವಿಶೇಷವಾಗಿ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.
ಜಾತ್ರೆಯಲ್ಲಿ ಯಾವುದೇ ರೀತಿ ಜನರಿಂದ ಹಣ ವಸೂಲಿ, ಮೋಸ ಮಾಡುವ ಜುಗಾರ, ಜೂಜಾಟ, ಹಣದ ಆಟಗಳನ್ನು ಆಡಿಸಲು ಕೊಡಬಾರದು.
ಆಯಕಟ್ಟಿನ ಸ್ಥಳ, ಹಾಗೂ ಜನ ಸಂಧನಿ, ಹಾಗೂ ಸೂಕ್ಷ್ಮ ಸ್ಥಳ ಹಾಗೂ ಭದ್ರತೆ ದೃಷ್ಟಿಯಿಂದ ಸಿ.ಸಿ. ಕ್ಯಾಮೇರಾ ಆಳವಡಿಸಬೇಕು. ವಾಹನ ನಿಲುಗಡೆಗೆ ವಿವಿಧ ಸ್ಥಳಗಳಲ್ಲಿ ವ್ಯವಸ್ಥೆ ಮಾಡಬೇಕು.
ಆರೋಗ್ಯ ಇಲಾಖೆಯವರು ಜನರ ಆರೋಗ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಆಹಾರ ಇಲಾಖೆ ಮತ್ತು ಆರೋಗ್ಯ ಇಲಾಖೆಯವರು ಜಾತ್ರೆಯಲ್ಲಿ ಹೋಟೇಲ ಹಾಗೂ ತಿಂಡಿ ತಿನಿಸು ಮಾರಾಟ ಅಂಗಡಿಗಳಲ್ಲಿ ಸ್ವಚ್ಛತೆ, ಕಲಬೆರಿಕೆ, ಗುಣಮಟ್ಟಗಳನ್ನು ಪರಿಶೀಲಿಸಬೇಕು.
ಜಾತ್ರೆಯಲ್ಲಿ ಕೆಮಿಕಲ್ ಮಿತ್ರೀತ ಭಂಡಾರವನ್ನು ಮಾರಾಟ ನಿಷೇಧಿಸಬೇಕು. ಇವುಗಳನ್ನು ಹೊರತುಪಡಿಸಿ ಜಾತ್ರೆಯು ಸುಭದ್ರವಾಗಿ ಹಾಗೂ ಸೂಸೂಕ್ತವಾಗಿ ನಡೆದುಬರುವ ನಿಟ್ಟಿನಲ್ಲಿ ತಮಗೆ ಸರಿ ಅನಿಸಿದ ಇನ್ನಿತರ ಎಲ್ಲ ರೀತಿಯ ಅವಶ್ಯಕ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.
ಈ ಸಂದರ್ಭದಲ್ಲಿ ವಿವೇಕಾನಂದ ಪುರಾಣಿ ರಾಹುಲ್ ಅಂಕಲಿ. ಶಿವಾಜಿ ಘಾಟಗೆ. ಪ್ರಶಾಂತ್ ನಾಗನೂರಿ. ಸುನಿಲ್ ಪೂಜಾರಿ. ವಿಜಯ್ ರಮೇಶ್ ಹಾಗೂ ಸರ್ವ ಶ್ರೀ ರಾಮ್ ಸೇನಾ ಪದಾಧಿಕಾರಿಗಳು ಉಪಸ್ಥಿತರಿದ್ದರು

error: Content is protected !!