ಯಾದಗಿರಿ ಜಿಲ್ಲೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ — UPSC ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಯ ನಾಲ್ವರು ಉತ್ತೀರ್ಣ

ಸ್ಥಳ : ಯಾದಗಿರಿ

ದೇಶದ ಅತ್ಯಂತ ಕಠಿಣ ಪರೀಕ್ಷೆ ಎಂದು ಪರಿಗಣಿಸಲ್ಪಡುವ UPSC ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಯ ನಾಲ್ವರು ಯುವಕರು ಯಶಸ್ಸು ಸಾಧಿಸಿದ್ದಾರೆ.

ಈ ಬಾರಿ ನಡೆದ UPSC ಫಲಿತಾಂಶದಲ್ಲಿ
ಸಂದೀಪ್ ಬಾದದ ಅವರು All India Rank ನಲ್ಲಿ 82 ಸ್ಥಾನ ಪಡೆದು ರಾಜ್ಯದಲ್ಲೇ ಗಮನ ಸೆಳೆದಿದ್ದಾರೆ.

ಅದೇ ರೀತಿಯಾಗಿ
ನಿವೇದಿತಾ ಭಾಮಿನಿ ಅವರು AIR 469,
ಬಸವರಾಜ ಜವಳಿ ಅವರು AIR 664,
ಚಂದ್ರಶೇಖರ್ ಅವರು AIR 880 ಪಡೆದು ಯಶಸ್ಸು ಸಾಧಿಸಿದ್ದಾರೆ
ಇವರು ಯಾದಗಿರಿ ಜಿಲ್ಲೆಗೆ ಗೌರವ ತಂದ ಕೊಟ್ಟ ಮಹಾನ್ ಸಾಧಕರಲ್ಲಿ ಗುರುತಿಸಿಕೊಂಡಿದ್ದಾರೆ

ಹಿಂದುಳಿದ ಜಿಲ್ಲೆ ಎಂದು ಕರೆಯಲ್ಪಡುವ ಯಾದಗಿರಿ ಜಿಲ್ಲೆಯಿಂದ ಈ ಸಾಧನೆ ಹೊರಬಂದಿರುವುದು ಜಿಲ್ಲೆಯ ಜನರಿಗೆ ಹೆಮ್ಮೆ ತಂದಿದೆ.
ನಾವು ಯಾದಗಿರಿ ಜಿಲ್ಲೆ ಅವರು ಯಾವುದಕ್ಕೂ ಕಡಿಮೆ ಇಲ್ಲಾ ಅನ್ನೋದಕ್ಕೆ ಇದೆ ಸಾಕ್ಷಿ ಆಗಿದೆ
ಕಠಿಣ ಪರಿಶ್ರಮದಿಂದ ಏನ್ ಬೇಕಾದ್ರೂ ಸಾಧನೆ ಮಾಡಬಹುದೆಂದು ಇವರು ತೋರಿಸಿಕೊಟ್ಟಿದ್ದಾರೆ

ಸ್ಥಳೀಯರು, ಶಿಕ್ಷಕರು ಮತ್ತು ಸಾರ್ವಜನಿಕರು ಈ ನಾಲ್ವರು ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

UPSCನಲ್ಲಿ ಯಶಸ್ಸು ಸಾಧಿಸಿರುವ ಈ ಯುವಕರು ಮುಂದಿನ ದಿನಗಳಲ್ಲಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತವಾಗಿದೆ.

ವರದಿ : ಸಿಎಂ ಮಕಾಂದಾರ

error: Content is protected !!