ಅರುಂದತಿ ಕಲಗೌಡ ಪಾಟೀಲ ಚಾರ್ಟೆರ್ಡ ಅಕೌಂಟೆಂಟ್ ತೇರ್ಗಡೆ

ಅಥಣಿ ದೇಶದ ಪ್ರತಿಷ್ಠಿತ ವೃತ್ತಿಪರ ಕೋರ್ಸ್ ಗಳಲ್ಲಿ ಒಂದಾಗಿರುವ ಚಾರ್ಟೆರ್ಡ ಅಕೌಂಟೆಂಟ್ (ಸಿ ಎ) 2026ರ ಅಂತಿಮ ಹಂತದ ಪರೀಕ್ಷೆಯಲ್ಲಿ ಕುಮಾರಿ ಅರುಂದತಿ ಕಲಗೌಡ ಪಾಟೀಲ್ ಉತ್ತೀರ್ಣರಾಗಿ, ಅರ್ಹತೆ ಪಡೆದಿದ್ದಾರೆ. ಅರುಂಧತಿ ಪಾಟೀಲ್ ಅವರು ಅಥಣಿಯ ಸಾವಯವ ಕೃಷಿಕರಾದ ದಿ.ಎಸ್ ಎಮ್ ಪಾಟೀಲರ ಮೊಮ್ಮಗಳು. ಶ್ರೀ ಕಲಗೌಡ ಹಾಗೂ ಸರಿತಾ ಪಾಟೀಲ ದಂಪತಿಗಳ ಹಿರಿಯ ಸುಪುತ್ರಿಯಾಗಿದ್ದು ಮಗಳ ಸಾಧನೆಗೆ ಕುಟುಂಬ ವರ್ಗದವರು ಅಭಿನಂದಿಸಿದ್ದಾರೆ. ಅರುಂಧತಿ ಪಾಟೀಲ ಅವರು ಜೆ ಎ ಪದವಿಪೂರ್ವ ಮಹಾವಿದ್ಯಾಲಯದ ಹಿಂದಿನ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದು ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

ವರದಿ : ಭರತೇಶ್ ನಿಡೋಣಿ

error: Content is protected !!