ಸಚಿವರು ಆಗಮಿಸುವ ಹಿನ್ನೆಲೆ ಚಂದ್ರಪಳ್ಳಿ ಜಲಾಶಯಕ್ಕೆ ಭೇಟಿ ನೀಡಿದ ಸಂತೋಷಕುಮಾರ ಚವ್ಹಾಣ

ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ಜಲಾಶಯದಲಿ ಉದ್ಘಾಟನೆಗೊಳ್ಳುವ ಜಂಗಲ್ ಸಫಾರಿ ವಾಹನ, ದೋಣಿಗಳಿಗೆ ಚಾಲನೆ, ಟೆಂಟ್ ಹೌಸ್ ಉದ್ಘಾಟನೆ,ಹಾಗೂ ಪೋಲಕಪಳ್ಳಿಯ ಸಾಲುಮರದ ತಿಮ್ಮಕ್ಕ ಪಾರ್ಕ್ ಉದ್ಘಾಟನೆ ನೆರವೇರಲಿದ್ದು ಕಾರ್ಯಕ್ರಮಕ್ಕೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐ ಟಿ ಬಿಟಿ ಕಲ್ಬುರ್ಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಪರಿಸರ ಜೀವಿಶಾಸ್ತ್ರ
ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ, ಕಾಂಗ್ರೆಸ ಶಾಸಕರು,ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರು , ಜಿಲ್ಲಾಡಳಿತ, ಆಗಮಿಸುವ ಹಿನ್ನೆಲೆ ಚಂದ್ರಂಪಳ್ಳಿ ಜಲಾಶಯ ಮತ್ತು
ಪೋಲಕಪಳ್ಳಿ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಭೇಟಿ ನೀಡಿ, ಕಾರ್ಯಕ್ರಮವು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಲು ಕೆಲವೊಂದು ಸೂಚನೆ ಹಾಗೂ ಸಲಹೆಗಳನ್ನು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ
ಸಂತೋಷ ಕುಮಾರ ಚವ್ಹಾಣ ಅವರು ವಲಯ ಅರಣ್ಯ ಅಧಿಕಾರಿಗಳಾದ ಸಂಜೀವ ಕುಮಾರ ಚವ್ಹಾಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜ್ಯೋತಿ ಹಾಗೂ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!