ವಾರ್ಡ್ ನಂಬರ್ 32 ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ ನೇತೃತ್ವದಲ್ಲಿ ಜೋರಾಪುರ್ ಪೇಠ ಶ್ರೀ ಶಂಕರಲಿಂಗ ದೇವಸ್ಥಾನ ಆವರಣದಲ್ಲಿ ಕಾರ್ಮಿಕ ಇಲಾಖೆ, ಅ ಸಂಘಟಿತರಿಗೆ ಕಾರ್ಮಿಕರ ಕಾರ್ಡ್ ವಿತರಣಾ ಕಾರ್ಯಕ್ರಮ ಅಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ 300ಕ್ಕೂ ಹೆಚ್ಚು ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ರಾದ ಬಸಯ್ಯ ಹಿರೇಮಠ, ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ್ ಚೌಕಿಮಠ, ಮಹಾನಗರ ಪಾಲಿಕೆಯ ಸದಸ್ಯರಾದ ಶಿವರುದ್ರ ಬಾಗಲಕೋಟ, ಕಾರ್ಮಿಕ ನಿರೀಕ್ಷಕರಾದ ಮಲ್ಲಿಕಾರ್ಜುನ್ ಕಾಮಠಾಣ, ಡಾಟಾ ಆಪರೇಟರ್ ಅನಿಲ್ ರಾಠೋಡ್, ಮಹೇಶ್ ಹೇರಲಗಿ,ವಿರೂಪಾಕ್ಷಪ್ಪ ಶಾಬಾದಿ,ಸೂರಪ್ಪ ಮಿರ್ಜಿ, ವಿಶ್ವನಾಥ್ ಬೀಳಗಿ, ವೀರಭದ್ರ ಹೇರಲಗಿ, ರುದ್ರಗೌಡ ಪಾಟೀಲ, ಶಂಕರ್ ಬನ್ನೂರು, ಅಮರ ಗರುಡಕರ್, ಗೋಪಿ ಹೋಟ್ಕರ್, ಶ್ರೀನಿವಾಸ್ ಶಹಪುರ್, ರಾಮು ಭಜಂತ್ರಿ, ಸುಧೀರ್ ಪವಾರ್, ಶಶಿಕಾಂತ್ ಬೋವಿ, ದಾಕ್ಷಾಯಿಣಿ ಮಠಪತಿ, ದಾನಮ್ಮ ಮಹಾಜನ್ ಮುಂತಾದವರು ಉಪಸ್ಥಿತರಿದ್ದರು.
ವರದಿ : ಅಜೀಜ್ ಪಠಾಣ.
