ಭಕ್ತಿ ಭಾವದಿಂದ ಶ್ರೀ ರಾಮಲಿಂಗೇಶ್ವರ ರಥೋತ್ಸವ

ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ರಾಮಲಿಂಗೇಶ್ವರ ರಥೋತ್ಸವ ಜನಸಾಗರ ಮಧ್ಯೆದಲ್ಲಿಯೆ ಅದ್ದೂರಿಯಾಗಿ ಜರುಗಿತ್ತು.

ಶ್ರೀ ರಾಮಲಿಂಗ ರೆಡ್ಡಿ ದೇಶಮುಖ್ ಅವರ ಮನೆಯಿಂದ ರಥೋತ್ಸವಕ್ಕೆ ಕುಂಭವನ್ನು ಸಮರ್ಪಣೆ ಮಾಡಲಾಯಿತು. ಅವರ ಮನೆಯಿಂದ ಶ್ರೀ ರಾಮಲಿಂಗೇಶ್ವರ ರಥೋತ್ಸವ ಕಳಸವನ್ನು ಪಲ್ಲಕ್ಕಿಯಲ್ಲಿ ವಿರಾಮರಾಜವಾಗ ಗೊಳಿಸಿ, ಪೂಜ್ಯಶ್ರೀ ಮ. ನಿ. ಪ್ರ. ಚಿಕ್ಕ ಗುರು ನಂಜೇಶ್ವರ ಮಹಾಸ್ವಾಮಿಗಳು ಭರತನೂರ್ ಮತ್ತು ಪೂಜ್ಯಶ್ರೀ ಷ .ಬ್ರ ಬಸವಲಿಂಗ ಶಿವಾಚಾರ್ಯರು ಹಿರೇಮಠ ಕೋಡ್ಲಿ ಇವರುಗಳ ಸಾನಿಧ್ಯದಲ್ಲಿ ಶ್ರೀ ರಾಮಲಿಂಗೇಶ್ವರ ರಥೋತ್ಸವ ದಿನಾಂಕ 02 . 04. 2026ರಂದು ಸಾಯಂಕಾಲ 7: 30 ಗಂಟೆಗೆ ತೆರಿಗೆ ಖಾರಿಕ, ಬಾದಾಮ, ಉತ್ತತ್ತಿ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತ ಜನ ಸಾಗರ ಮಧ್ಯದಲ್ಲಿಯೆ ಶ್ರೀ ರಾಮಲಿಂಗೇಶ್ವರ ಮಹಾರಾಜಕಿ ಜೈ ಎಂಬ ಘೋಷಣೆಯನ್ನು ಕೂಗುತ್ತಾ ಅದ್ದೂರಿಯಾಗಿ ರಥೋತ್ಸವ ಕಾರ್ಯಕ್ರಮವು ಜರುಗಿತು.
ಈ ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀ ರಾಮಲಿಂಗ ರೆಡ್ಡಿ ದೇಶಮುಖ್, ರಾಜಕೀಯ ಗಣ್ಯರು, ಊರಿನ ಪ್ರಮುಖರು, ಹಿರಿಯರು, ಯುವಕರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದರು.

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!