ದೊಡ್ಡ ದೊಡ್ಡ ಟಿವಿ ಚಾನಲ್ ಗಳಲ್ಲಿ ಸಂಪಾದಕರಾಗಿ ನಿರೋಪರಾಗಿ ಸೇವೆ ಸಲ್ಲಿಸಿದ ಹೂಗಾರ್ ಈಗ ಒಬ್ಬ ಕೃಷಿಕ

ಇವರ ಹೆಸರು ಲಕ್ಷ್ಮಣ ಹೂಗಾರ್, ಹತ್ತು ವರ್ಷಗಳ ಹಿಂದೆ ಕನ್ನಡ ಸುದ್ದಿಲೋಕದಲ್ಲಿ ದೊಡ್ಡ ಹೆಸರು ಇದು. TV9 ನ್ಯೂಸ್, ಈ ಟಿವಿ ನ್ಯೂಸ್, ನ್ಯೂಸ್ ಕನ್ನಡ ಟಿವಿ ಹೀಗೆ ಅನೇಕ ಸುದ್ದಿವಾಹಿನಿಯಲ್ಲಿ ಸಂಪಾದಕರಾಗಿ, ವರದಿಗಾರರಾಗಿ ಉನ್ನತ ಮಟ್ಟದ ಹುದ್ದೆ ನಿರ್ವಹಿಸುತ್ತಿದ್ದರು. ಯಾವುದೇ ಪಕ್ಷದ ರಾಜಕಾರಣಿಯಾಗಲಿ ಅವರಿಗೆ ಖಡಕ್ ಆಗಿ ಒಂದು ಕ್ಷಣ ಯೋಚಿಸುವಂತೆ ಪ್ರಶ್ನೆ ಕೇಳುತ್ತಿದ್ದರು. ಇವರಿಗೆ ಎಸಿ ರೂಮ್, ಕಾರು, ಉನ್ನತ ಮಟ್ಟದ ರಾಜಕಾರಣಿ ಅಧಿಕಾರಿಗಳ ಸಂಪರ್ಕ ಎಲ್ಲವೂ ಇತ್ತು. ಇವರು ಏರಿದ ಎತ್ತರದಿಂದ ದಿಢೀರ್ ನೆ ಇಳಿದು ನೆಲದ ಮೇಲೆ ನಿಲ್ಲುವುದು ಕಷ್ಟ. ಮಾಧ್ಯಮ ಲೋಕಕ್ಕೆ ಗುಡ್ ಬೈ ಹೇಳಿದರು. ಕೃಷಿಕರಾದರು. ಸರಳಾತಿಸರಳ ಕೃಷಿಕನಾಗಿ ಜನಸಾಮಾನ್ಯರ ಮಧ್ಯೆ ಕಳೆದು ಹೋದರು. ಮಣ್ಣು, ಬೀಜ, ನೀರು ಗಾಳಿಯ ನಂಬಿ ಬಯಲಲ್ಲಿ ಬಯಲಾಗಿ ನಿಂತರು. ಮತ್ತೆಂದೂ ಈ ಸುದ್ದಿಲೋಕದ ಕಡೆ ತಲೆ ಹಾಕಲೇ ಇಲ್ಲ. ಇಂತಹ ಕಟು ನಿರ್ಧಾರ ತಾಳಲು ಮನುಷ್ಯ ಒಳಗಿನಿಂದ ಗಟ್ಟಿ ಇರಬೇಕು.

ಕೊನೆಯವರೆಗೂ ಭ್ರಮೆಗಳನ್ನು ನಂಬಿಕೊಂಡು ಬದುಕುವುದಕ್ಕಿಂತ ಒಮ್ಮೆಲೆ ಅವುಗಳ ಕಿತ್ತೊಗೆದು ಸತ್ಯಕ್ಕೆ ಹತ್ತಿರವಾಗುವುದು ಅಷ್ಟು ಸುಲಭದ ಮಾತಲ್ಲ. ಲಕ್ಷಣ್ ಹೂಗಾರ್ ಅವರ ಕೃಷಿಕ ಪಯಣ ನೆನೆದು ಹೆಮ್ಮೆ ಎನಿಸಿಸುತ್ತದೆ. ಇವರ ಕೃಷಿ ಕಡೆಯ ಪಯಣ ಮೆಚ್ಚಿಕೊಳ್ಳಲೇಬೇಕು.

error: Content is protected !!