ಕರ್ನಾಟಕ ಗಡಿನಾಡಿಗೆ ಹೊಂದಿಕೊಂಡಿರುವಂತಹ ತೆಲಂಗಾಣದ ಕೊತ್ತಾಲಪುರ ಗ್ರಾಮದ ರೇಣುಕಾ ಎಲ್ಲಮ್ಮ ದೇವರ ಜಾತ್ರೆಗೆ ಜನಸಾಗರವೇ ಹರಿದು ಬರುತ್ತಿದೆ, ಸುಮಾರು ಒಂದು ತಿಂಗಳು ನಡೆಯುವ ಜಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ಹಾಗೂ ತೆಲಂಗಾಣದ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿ, ತಮ್ಮ ಹರಕೆಯನ್ನು ತೀರಿಸುತ್ತಾರೆ ಹಾಗೂ ಭಕ್ತಾದಿಗಳು ತಮ್ಮ ಆಸೆ ಈಡೇರಲು ರೇಣುಕಾ ಎಲ್ಲಮ್ಮ ದೇವಿಯ ಮೊರಗೆ ಹೋಗುತ್ತಾರೆ, ಈ ಒಂದು ತಿಂಗಳ ಜಾತ್ರೆಯಲ್ಲಿ ಸುಮಾರು ಲಕ್ಷದಷ್ಟು ಭಕ್ತಾದಿಗಳು ಆಗಮಿಸುತ್ತಾರೆ.
ರೇಣುಕಾ ಎಲ್ಲಮ್ಮ ದೇವಸ್ಥಾನದ ಪ್ರಧಾನ ಅರ್ಚಕರು ನಮ್ಮ ಸುದ್ದಿಗಾರರೊಂದಿಗೆ ಮಾತನಾಡಿ ದೇವಸ್ಥಾನವು ಅನೇಕ ಇತಿಹಾಸ ಹಾಗೂ ಪವಾಡ ಉಳ್ಳಂತಹ ದೇವಸ್ಥಾನ ಆಗಿದ್ದು, ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಆಸೆ ಈಡೇರಲು ಹಾಗೂ ಹರಿಕೆಯನ್ನು ಮುಟ್ಟಿಸಲು ಬಂದು ಹೋಗುತ್ತಾರೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣವೇನೆಂದರೆ ಇಲ್ಲಿ ಬೇಡಿಕೊಂಡಂತಹ ಆಸೆಗಳಾಗಲಿ, ಹರಿಕೆಗಳು ರೇಣುಕಾ ಎಲ್ಲಮ್ಮ ದೇವಿ ಅನುಗ್ರಹಿಸುತ್ತಾಳೆ ಅದಕ್ಕಾಗಿ ಲಕ್ಷಾಂತರ ಜನರು ಇಲ್ಲಿ ಬಂದು ದೇವಿ ದರ್ಶನ ಮಾಡಿಕೊಳ್ಳುತ್ತಾರೆ.
ತೆಲಂಗಾಣದ ಗೃಹಿಣಿ ಪ್ರತಿಕ್ರಿಯಿಸಿ ನನಗೆ ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆ ಇದ್ದು ನಾನು ಇಲ್ಲಿ ತಾಯಿಯ ಮುಂದೆ ಬೇಡಿಕೆ ಬೇಡಿಕೊಂಡಾಗ ಕೆಲವು ತಿಂಗಳುಗಳಲ್ಲಿ ಆರೋಗ್ಯ ಸಮಸ್ಯೆ ಪರಿಹಾರವಾಗಿದೆ ಅದಕ್ಕಾಗಿ ನಾನು ಇಂದು ನನ್ನ ಹರಕೆಯನ್ನು ತೀರಿಸಲು ಬಂದಿದ್ದೇನೆ ಎಂದು ಹೇಳಿದರು.
ನರಸಮ್ಮ ಚಿಂಚೋಳಿ ಪ್ರತಿಕ್ರಿಯಿಸಿ ನಾನು ಸುಮಾರು 40 ವರ್ಷಕ್ಕಿಂತ ಹೆಚ್ಚು ಸಮಯದಿಂದ ಪ್ರತಿವರ್ಷ ಜಾತ್ರೆಗೆ ಬರುತ್ತಿದ್ದು ನಮ್ಮ ಮನೆಯ ಎಲ್ಲಾ ಹರಕೆಯನ್ನು ದೇವಿಯು ನೆರವೇರಿಸಿದ್ದು ನನ್ನ ಹರಕೆಯನ್ನು ಮಾಡುತ್ತಿದ್ದೇನೆ. ನನ್ನ ಕೊನೆಯ ಸೊಸೆ ಸುಮಾರು ವರ್ಷಗಳಿಂದ ಮಕ್ಕಳ ಆಗದೆ ಇದ್ದಾಗ ದೇವಿಯ ಹತ್ತಿರ ಹರಕೆ ಹೊತ್ತಿದೆ,
ಈಗ ಗಂಡು ಮಗು ಆಗಿದ್ದು ಹರಕೆಯನ್ನು ತೀರಿಸಲು ಬಂದಿದ್ದೇನೆ ಎಂದು ಹೇಳಿದರು.
ವರದಿ : ರಾಜೇಂದ್ರ ಪ್ರಸಾದ್
