29-07-2026 ರಂದು ಲೋಕ ಕಲ್ಯಾಣ ಶಾಲೆಯ ಸಭಾಭವನ ವಿಜಯಪುರದಲ್ಲಿ ನಡೆದ ಪ್ರಥಮ ವಿಜಯಪುರ ಜಿಲ್ಲಾ ಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಅಂಕ ಪಡೆದ ಲೋಕ ಕಲ್ಯಾಣ ಶಾಲೆಯ ವಿದ್ಯಾರ್ಥಿಗಳು ವಿನ್ನರ ಟ್ರೋಫಿ ಪಡೆದು ಕೊಂಡರೆ , ಪೀ ಎಂ ಶ್ರೀ ಸರಕಾರಿ ಶಾಲೆಯ ಮನಗೂಳಿ ವಿದ್ಯಾರ್ಥಿನಿಯರು ರನ್ನರ ಟ್ರೋಫಿ ಪಡೆದುಕೊಂಡಿದ್ದಾರೆ ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ದಾನಪ್ಪ ಸುರಗೊಂಡ ರವರು, ಟ್ರೋಫಿಗಳನ್ನು ನೀಡಿದರು ಈ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ಪ್ರಭು ಕೋಟ್ಯಾಳ ರವರು, ಅಖಿಲ ಕರ್ನಾಟಕ ಸೂರ್ಯನಮಸ್ಕಾರ ಸಂಸ್ಥೆಯ, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಸವರಾಜ ನಂ ಬಾಗೇವಾಡಿ ಸಾ ಉತ್ನಾಳ ರವರು ಶಾಲೆಯ ಮುಖ್ಯ ಗುರುಗಳಾದ ದಯಾಸಾಗರ ಸುರಗೊಂಡರವರು, ಬೇರೆ ಬೇರೆ ಶಾಲೆಗಳಿಂದ ಆಗಮಿಸಿದ ಶಿಕ್ಷಕರು ಮತ್ತು ಶಿಕ್ಷಕಿಯರು ಭಾಗವಹಿಸಿದ್ದರು ಎಂದು ಸೂರ್ಯ ನಮಸ್ಕಾರ ಸಂಸ್ತೆಯ ರಾಜ್ಯ ಅಧ್ಯಕ್ಷರಾದ ಡಾ,ಮಂಜೇಗೌಡರ.
ವರದಿ : ಅಜೀಜ ಪಠಾಣ್
