ಗೌರಿಬಿದನೂರು: ತಾಲ್ಲೂಕಿನ ಐತಿಹಾಸಿಕ ಕ್ಷೇತ್ರ ವಿದುರಾಶ್ವತ್ಥದ ‘ಪಾಯಸಂ ಕಲ್ಯಾಣ ಮಂಟಪ’ದಲ್ಲಿ ಎಐಸಿಸಿ (AICC) ವೀಕ್ಷಕರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರ ಉಪಸ್ಥಿತಿಯಲ್ಲಿ ನೂತನ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಸಮಿತಿ (DCC) ಅಧ್ಯಕ್ಷರ ಆಯ್ಕೆಗಾಗಿ ಸಮಾಲೋಚನೆ ಮತ್ತು ಅಭಿಪ್ರಾಯ ಸಂಗ್ರಹಣಾ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಸುದರ್ಶನ್ ಅವರು, ಬಿಜೆಪಿ ಆಡಳಿತಾವಧಿಯಲ್ಲಿ ಮತದಾರರ ಪಟ್ಟಿಯ ದುರ್ಬಳಕೆ ಹಾಗೂ ಹೆಸರುಗಳನ್ನು ಕೈಬಿಡುವ ಕೆಲಸ ನಡೆದಿತ್ತು ಎಂದು ಆರೋಪಿಸಿದರು. ಮುಂಬರುವ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ಎದುರಾಗಲಿದ್ದು, ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಲು ಮತ್ತು ನೂತನ ಅಧ್ಯಕ್ಷರ ನೇಮಕಕ್ಕೆ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ರಾಜ್ಯಾದ್ಯಂತ ಶರವೇಗದಲ್ಲಿ ನಡೆಯುತ್ತಿದೆ ಎಂದರು.
ಮಾಜಿ ಕೃಷಿ ಸಚಿವರಾದ ಎನ್. ಎಸ್. ಶಿವಶಂಕರ್ ರೆಡ್ಡಿ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಹಾಗೂ ಹೈಕಮಾಂಡ್ ತಳಮಟ್ಟದ ಮತ್ತು ಬೂತ್ ಮಟ್ಟದ ಕಾರ್ಯಕರ್ತರ ಧ್ವನಿಗೆ ಆದ್ಯತೆ ನೀಡುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಸೂಚನೆಯಂತೆ, ಸಾಮಾನ್ಯ ಕಾರ್ಯಕರ್ತರ ಮತ್ತು ಜನಪ್ರತಿನಿಧಿಗಳ ಇಷ್ಟದಂತೆ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲು ಈ ಪಾರದರ್ಶಕ ಪ್ರಕ್ರಿಯೆ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಐಸಿಸಿ ವೀಕ್ಷಕರು ಪಾಲಾಕ್ ವರ್ಮಾ
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮಂಜುನಾಥ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ (CUDA) ಅಧ್ಯಕ್ಷ ಕೇಶವರೆಡ್ಡಿ.ಪ್ರಮುಖ ಕಾರ್ಯಕರ್ತರು: ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ರೆಡ್ಡಿ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ್, ಅಬ್ಬಾಸ್ ಕನ್ನಡಿಗ.ಅರ್ಮ್.ಮುಜಾಮಿಲ್ ಪ್ರಮುಖರು ಭಾಗವಹಿಸಿದ್ದರು.
ವರದಿ : ನವೀನ್ ಕುಮಾರ್ ಗೌರಿಬಿದನೂರು
