ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಗೆ ಬೇಕಾಗಿದೆ ನಗರ ಸಾರಿಗೆ ಬಸ್

ಚಿಕ್ಕೋಡಿ : ಪಟ್ಟಣದಲ್ಲಿ ಸಂಚರಿಸಲು ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ಜನರು ಪರದಾಟ ಖಾಸಗಿ ವಾಹನಗಳ ಮೊರೆ ಅನಿವಾರ್ಯ ಆಡಳಿತಾತ್ಮಕ ಕೇಂದ್ರವಾಗಿ ಬೆಳೆಯುತ್ತಿರುವ ಶೈಕ್ಷಣಿಕ ಜಿಲ್ಲಾ ಕೇಂದ್ರ ಚಿಕ್ಕೋಡಿಯಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ ಆದರೆ ಬಸ್ ನಿಲ್ದಾಣದಿಂದ ಪಟ್ಟಣದೊಳಗೆ ಪ್ರಮುಖ ಸರ್ಕಾರಿ ಕಚೇರಿಗಳು ಶಾಲಾ-ಕಾಲೇಜುಗಳು ಆಸ್ಪತ್ರೆಗಳು ಬಂಡವಾಣಿಗಳಿಗೆ ತಲುಪಲು ಸಾರಿಗೆ ಇಲ್ಲದಿರುವುದರಿಂದ ಜನಸಾಮಾನ್ಯರು ವಿದ್ಯಾರ್ಥಿಗಳು ಹಾಗೂ ರೋಗಿಗಳು ಪಡುತಿರುವ ಪಾಡು ಹೇಳತೀರಾದಾಗಿದೆ ನಾನಾ ಭಾಗ ಗಳಿಂದ ಜನ ನಿತ್ಯ ತಾಲೂಕು ಆಡಳಿತ ಸೌದ ಪೊಲೀಸ್ ಠಾಣೆ ತಾಲೂಕ ಪಂಚಾಯಿತಿ ಬುದ್ಧ ನಗರ್ ಅಂಬೇಡ್ಕರ್ ನಗರ ವಿದ್ಯಾ ನಗರ ದಟ್ಟ ಪ್ರದೇಶಗಳು ನೂತನ ಬಡಾವನೆಗಳು ಬಸ್ ನಿಲ್ದಾಣದಿಂದ ಸುಮಾರು 2ಕಿಲೋ ಮೀಟರ್ ದೂರದಲಿವೆ.

ವಿದ್ಯಾರ್ಥಿಗಳು ವೃದ್ಧರು ಗರ್ಭಿಣಿಯರು ರೋಗಿಗಳು ತಾವು ತಲುಪಬೇಕಾದ ಸ್ಥಳಗಳಿಗೆ ಹೋಗಲು ಆಟೋ ಗಳಿಗೆ ನೂರಾರು ರೂಪಾಯಿ ತರಬೇಕಾಗಿದೆ ಆದಷ್ಟು ಬೇಗ ಸಾರಿಗೆ ಬಸ್ ಪ್ರಾರಂಭ ಮಾಡ್ತಾರ ಎಂಬುದು ಕಾದು ನೋಡಬೇಕಾಗಿದೆ.

“ಆಸ್ಪತ್ರೆಗೆ ಹೋಗುವುದು ಸಾಹಸದ ಕೆಲಸವಾಗಿದೆ ಬಿಸಿಲು ಮಳೆ ಲೆಕ್ಕಿಸಿದ ಅನಿವಾರ್ಯವಾಗಿ ಕಾಸಿಗೆ ವಾಹನಗಳಿಗೆ ಒಂದು ನೂರು ರೂಪಾಯಿ ನೀಡಿ ಸಂಚರಿಸಬೇಕಾಗಿದೆ ಮರಳಿ ಬರುವಾಗ ವಾಹನದ ವ್ಯವಸ್ಥೆ ಇರುವುದಿಲ್ಲ” :
ಮಹಾದೇವಿ ಚಿಂಚಣಿ ನಿವಾಸಿ

“ನಿತ್ಯ ಬಸ್ ಸಾರಿಗೆ ಸಮಯಕ್ಕೆ ಬಾರದೆ ತರಗತಿ ತಪಿಸಿಕೊಳುವಂತಾಗಿದೆ ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸುವುದರ ಗಮನ ಹರಿಸುತ್ತಿಲ್ಲ ಗೆದ್ದ ಕೆಲವು ಬಸ್ಸುಗಳು ಸರಿಯಾಗಿ ಸಮಯಕ್ಕೆ ಬರುತ್ತಿಲ್ಲ ನಾಲ್ಕು ಕಿಲೋಮೀಟರ್ ದೂರದ ಕಾಲೇಜಿಗೆ ಕೆಲವೊಮ್ಮೆ ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತದೆ”


:ಸುದೀಪ್ ಮಾದರ್ ಸರ್ಕಾರಿ ಕಾಲೇಜ್ ವಿದ್ಯಾರ್ಥಿ

error: Content is protected !!