ವರಕವಿ ಸರ್ವಜ್ಞ ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷರಾಗಿ ಮಾಲತೇಶ್ ತಿರಕಪ್ಪನವರ್ ಆಯ್ಕೆ

ಹಿರೇಕೆರೂರು:

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆ.22ರಂದು ವರಕವಿ ಸರ್ವಜ್ಞ ಛಾಯಾಗ್ರಾಹಕರ ಸಂಘ, ಹಿರೇಕೆರೂರು ವತಿಯಿಂದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಶ್ರೀ ಕರಬಸಯ್ಯ ಬಸರೆಹಳ್ಳಿಮಠ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಸಂಘದ ಎಲ್ಲ ಛಾಯಾಗ್ರಾಹಕರ ಒಮ್ಮತದ ಮೇರೆಗೆ ಅಧ್ಯಕ್ಷರಾಗಿ ಶ್ರೀ ಮಾಲತೇಶ್ ತಿರಕಪ್ಪನವರ್ ಅವರನ್ನು ಆಯ್ಕೆ ಮಾಡಲಾಯಿತು.

ಅದೇ ರೀತಿ ಉಪಾಧ್ಯಕ್ಷರಾಗಿ ಭೋಜರಾಜ್ ಕಲನಗೌಡ, ಗೌರವಾಧ್ಯಕ್ಷರಾಗಿ ಸುಭಾಷ್ ಚಂದ್ರ ಗುಡ್ಡೆರ್ ಹಾಗೂ ಚೆನ್ನಪ್ಪ ಕಿಟ್ಟದ, ಪ್ರಧಾನ ಕಾರ್ಯದರ್ಶಿಯಾಗಿ ವೀರೇಶ್ ಪೂಜಾರಿ, ಸಹಕಾರ್ಯದರ್ಶಿಯಾಗಿ ನಿಜಗುಣಾನಂದ (ಎಸ್ಟುಡಿಯೋ, ಚಿಕ್ಕೇರೂರು) ಅವರನ್ನು ಆಯ್ಕೆ ಮಾಡಲಾಯಿತು.

ಸಂಘದ ನಿರ್ದೇಶಕರಾಗಿ ಬಸಯ್ಯ ಮಠದ, ಮಕ್ಬುಲ್ ಮನ್ನಂಗಿ, ಮಧುಕೇಶ್ವರ್ ಹುಲ್ಲಾಳದ, ರಾಜು ಹೆಚ್., ಯೋಗೇಶ್ ಹಂಸಭಾವಿ, ವೀರಭದ್ರಯ್ಯ ಮಠದ, ವಿಜಯಕುಮಾರ್ ಪತ್ತಾರ್, ಕೊಟ್ರೇಶ್ ಕಡೆ ನಂದಿಹಳ್ಳಿ, ವೀರೇಶ್ ಹೊಲಬಿಕೊಂಡ, ಅಭಿಲಾಶ್ ಬಡಿಗೇರ್, ಯುವರಾಜ್ ಮಾರ್ಕಳ್ಳಿ ಹಾಗೂ ಪ್ರವೀಣ್ (ಅಭಿಮಾನ್ ಸ್ಟುಡಿಯೋ) ಅವರನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳನ್ನು ಸಭೆಯಲ್ಲಿ ಅಭಿನಂದಿಸಿ, ಛಾಯಾಗ್ರಾಹಕರ ಹಿತಾಸಕ್ತಿ, ವೃತ್ತಿ ಅಭಿವೃದ್ಧಿ ಹಾಗೂ ಸಂಘದ ಬಲವರ್ಧನೆಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಲಾಯಿತು.

ವರದಿ : ಪವನ್ ಕುಮಾರ್

error: Content is protected !!