ಕರ್ನಾಟಕ ಸರ್ಕಾರವು ದಿನಾಂಕ 10/08/2026 ರಂದು 15000 ಶಿಕ್ಷಕರ ನೇಮಕಾತಿ ಆದೇಶವನ್ನು ಹೊರಡಿಸಿದ್ದು, ಅದರಲ್ಲಿ ಉರ್ದು ಮಾಧ್ಯಮ ಶಿಕ್ಷಕರ ಹುದ್ದೆಗಳ ಇಲ್ಲದೆ ಇರುವುದು ಅಸಂವಿಧಾನಿಕವಾಗಿದೆ ಎಂದು *ಟಿಪ್ಪು ಕ್ರಾಂತಿ ಸೇನೆ ಕರ್ನಾಟಕ* ಆರೋಪಿಸಿದೆ.
ಈ ಕುರಿತು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದಸ್ತಗೀರ ಮುಲ್ಲಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂವಿಧಾನದ ಮೂಲಭೂತ ಆಶಯಗಳ ಪ್ರಕಾರ ಎಲ್ಲರಿಗೂ ಸಮಾನವಾದ ಅವಕಾಶ ಕಲ್ಪಿಸಿಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಸರ್ಕಾರವು ಶಿಕ್ಷಕರ ನೇಮಕಾತಿ ಆಧಿಸೂಚನೆಯಲ್ಲಿ ಕೇವಲ ಆಂಗ್ಲ ಮತ್ತು ಕನ್ನಡ ಮಾಧ್ಯಮಕ್ಕೆ ಅವಕಾಶ ನೀಡಿರುವುದು ಕಾನೂನು ಬಾಹಿರವಾಗಿದೆ. ರಾಜ್ಯದಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಜೊತೆಯಲ್ಲಿ ಉರ್ದು, ಮರಾಠಿ, ತೆಲುಗು ಮಾಧ್ಯಮ ಶಾಲೆಗಳು ಇವೆ. ಆದರೂ ಈ ರೀತಿ ನೇಮಕಾತಿ ಆದೇಶ ಏಕ ಮಾಡಿದ್ದು ಅಸಮಾಧಾನ ಉಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
*ಸಂಘಟನೆಯ ಪ್ರಮುಖ ಆರೋಪಗಳು ಮತ್ತು ಆಗ್ರಹಗಳು:*
– ರಾಜ್ಯದಲ್ಲಿ ಉರ್ದು ಮಾಧ್ಯಮ ಶಾಲೆಗಳು ಕಡೆಗಣಿಸಲ್ಪಡುತ್ತಿವೆ, ರಾಜ್ಯದ ಧೋರಣೆ ಅಲ್ಪಸಂಖ್ಯಾತ ಮುಸ್ಲಿಮರಿಗೆ ಮಾರಕದಂತಿದೆ.
– ಹೊರಾಟಿಕೆ, ಮನೇದ ರಾಜ್ಯ ಸರ್ಕಾರ ಕೇವಲ 800 ಶಿಕ್ಷಕರ ನೇಮಕಾತಿಗೆ ಸಚಿವ ಸಂಪುಟದಲ್ಲಿ ನಿರ್ಧರಿಸಿ ಅಂತಿಮವಾಗಿ ನಿಸಿದಿದೆ. ಆದರೆ ನಿಜವಾಗಿ 4 ರಿಂದ 5 ಸಾವಿರ ಉರ್ದು ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕೇವಲ 800 ಶಿಕ್ಷಕರ ನೇಮಕಾತಿ ಮಾಡುವುದರಿಂದ ನ್ಯಾಯ ಒದಗಿಸಲು ಸಾಧ್ಯವಿಲ್ಲ.
– ಒತ್ತಾಯಪೂರ್ವಕವಾಗಿ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಂದ ಉರ್ದು ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡದಿರುವುದು ನಮ್ಮ ಧಾರ್ಮಿಕ ಅಲ್ಪಸಂಖ್ಯಾತ ಮುಸ್ಲಿಮ ಸಮುದಾಯಕ್ಕೆ ಮಾಡಿದ ಮಹಾ ಮೋಸ. TET ಪರೀಕ್ಷೆಯಲ್ಲಿ ಉರ್ದು ಭಾಷೆಗೆ ಅವಕಾಶವಿರುವಾಗ CET ಪರೀಕ್ಷೆಯಲ್ಲಿ ಏಕೆ ಅವಕಾಶ ನೀಡಬಾರದು?
ಸರ್ಕಾರ ಕೂಡಲೇ ನಿಯಮಗಳನ್ನು ಮರುಪರಿಶೀಲಿಸಿ GPSTR, HSTR ಮತ್ತು PSTR CET ಪರೀಕ್ಷೆಗಳಲ್ಲಿ ಉರ್ದು ಭಾಷೆಗೆ ಪ್ರತ್ಯೇಕ ನೀರಡುವಂತೆ ನಿರ್ಧಾರ ಮಾಡಬೇಕು ಮತ್ತು ಉರ್ದು ಮಾಧ್ಯಮ ಶಾಲೆಗಳಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು,
ಸಾವಿರಾರು ಶಿಕ್ಷಕರು ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡದೆ ಇರುವುದರಿಂದ ಉರ್ದು ಮಾಧ್ಯಮ ಶಿಕ್ಷಣಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ಸಂಘಟನೆ ಕಳವಳ ವ್ಯಕ್ತಪಡಿಸಿದೆ.
ಒಂದು ವೇಳೆ ಸರ್ಕಾರವು ಉದ್ದೇಶಪೂರ್ವಕವಾಗಿ ಉರ್ದು ಮಾಧ್ಯಮ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೆ ಇದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು TKS ಸಂಘಟನೆ ಹೊರಾಟ ರಾಜ್ಯದ ಘಟಕದ ಸಂಘಟನೆಯ ಹೊರಾಟಗಾರರು ಎಚ್ಚರಿಕೆ ನೀಡಿದ್ದಾರೆ.
