ರಾಜ್ಯ ಸರಕಾರವು 101 ತಾಲೂಕುಗಳನ್ನು ಬರ
ಪೀಡಿತ ಪ್ರದೇಶಗಳೆಂದು ಘೋಷಿಸಿ ಕಲಬುರಗಿ ಜಿಲ್ಲೆಯನ್ನು ಬರಗಾಲ ಘೋಷಣೆಯಿಂದ ಕೈಬಿಟ್ಟಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ರೈತ ಮುಖಂಡರು ಗೌರಿ ಶಂಕರ್ ನವದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ತಾಲೂಕುಗಳ ಬರ ಪರಿಸ್ಥಿತಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನಿ ಆರಂಭದಲ್ಲಿ ಸತತ ಎರೆಡು ತಿಂಗಳು ಸಮರ್ಪಕವಾಗಿ ಮಳೆಯಾಗಿಲ್ಲ.
ನಂತರವು ಮಳೆ ಕೈಕೋಟ ಪರಿಣಾಮ ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯೊಡದೆ ಮತ್ತೆ ಬಿತ್ತನೆ ಮಾಡಬೇಕಾಯಿತು
ರೈತರು ಎರಡು ಮೂರು ಬಾರಿ ಬಿತ್ತನೆ ಮಾಡಿ ಬಿಜಾ ಗೊಬ್ಬರು ಕೂಲಿ ಹೇಗೆ ಬೆಳೆಗಳು ರೈತನಗೆ ಕೈ ಹಿಡಿಯುತದೆ ಅಂತ ಹಣವನ್ನು ಖರ್ಚು ಮಾಡಿದ್ದಾರೆ ಆದರೆ ಮಳೆ ಕೈ ಕೊಟ್ಟ ಕಾರಣ ಹೊಲಗಳಲ್ಲಿ ಮಳೆ ಯಿಂದ ಬೆಳೆಗಳಿಲ್ಲ ಮಳೆ ಕೊರತೆ ಯಿಂದ ತೆವಾಂಶ ಬಾಡಿ ಹೋಗಿದ್ದು ರೈತರು ಕಷ್ಟಕ್ಕೆ ಸಿಲಿಕಿದ್ದಾರೆ.
ಕುಂಠಿತಗೊಂಡಿದ್ದು, ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ರೈತರ ಸಂಕಷ್ಟವನ್ನು ಸಿಲಿಕಿದ್ದಾರೆ ವಾಸ್ತವವಾಗಿ ಪರಿಶೀಲಿಸಿ, ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ತಾಲೂಕುಗಳ ಹೆಸರುಗಳು ಬಹಿರಂಗಪಡಿ ಸರಕಾರದಿಂದ ದೊರೆಯಬೇಕಾದ ಪರಿಹಾರ ಮತ್ತು ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು.
ಬರಗಾಲ ಜಿಲ್ಲೆಯ ತಾಲೂಕಗಳು ಎಂದು ಘೋಷಿಸುವಂತೆ ಮನವಿ ಮಾಡಲಾಗಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸಿ ಸರಕಾರ ಮೌನ ವಹಿಸಿದರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆದ್ದರಿಂದ ಕೂಡಲೇ ಕಲಬುರಗಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಇಲ್ಲದಿದ್ದರೆ ಎಲ್ಲಾ ರೈತರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ರೈತರ ತಾಳ್ಮೆಯನ್ನು ಪರೀಕ್ಷಿಸದೆ, ತಕ್ಷಣವೇ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ವಾಸ್ತವ ಸಮೀಕ್ಷೆ ನಡೆಸಿ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆಗಳ ಪಟ್ಟಿಗೆ ಸೇರಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ರೈತ ಮುಖಂಡರು ಗೌರಿ ಶಂಕರ್ ನವದಾಗಿ ಆಗ್ರಹಿಸಿದ್ದಾರೆ.
