ಮದಿಹಳ್ಳಿ SDMC ಶಾಲೆಯಲ್ಲಿ ನೇಮಕಾತಿ ವಿವಾದ


95.84% ಅಂಕ ಪಡೆದ ಅಭ್ಯರ್ಥಿಯನ್ನು ಕಡೆಗಣಿಸಿ ಕಡಿಮೆ ಅಂಕ ಪಡೆದವರಿಗೆ ಅವಕಾಶ?

BEO ಅಧಿಕಾರಿಗಳ ವಿರುದ್ಧ ಹಣ ಪಡೆದ ಆರೋಪ; ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಹುಕ್ಕೇರಿ: ತಾಲೂಕಿನ ಮದಿಹಳ್ಳಿ ಗ್ರಾಮದ SDMC ಶಾಲೆಯಲ್ಲಿ ಯುಕೆಜಿ ಹಾಗೂ ಎಲ್‌ಕೆಜಿ ಮಕ್ಕಳಿಗೆ ಸಂಬಂಧಿಸಿದ ನೇಮಕಾತಿ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.

ಸರ್ಕಾರದ ಆದೇಶದಂತೆ ಗ್ರಾಮಗಳ SDMC ಶಾಲೆಗಳಲ್ಲಿ ಯುಕೆಜಿ ಹಾಗೂ ಎಲ್‌ಕೆಜಿ ಮಕ್ಕಳಿಗೆ ಸಂಬಂಧಿಸಿದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಮದಿಹಳ್ಳಿ ಗ್ರಾಮದಲ್ಲಿ ಸುಮಾರು 17ರಿಂದ 18 ಮಹಿಳೆಯರು ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ.

ಅಭ್ಯರ್ಥಿಗಳ ಪೈಕಿ ಹೆಚ್ಚಿನ ಅಂಕ ಪಡೆದವರನ್ನು ಆಯ್ಕೆ ಮಾಡಬೇಕಾಗಿದ್ದರೂ, 95.84% ಅಂಕ ಪಡೆದಿದ್ದ ಶೈಲಾ ಸಿದ್ದಪ್ಪ ದುರ್ಗಾರ ಅವರನ್ನು ಕಡೆಗಣಿಸಿ, ಕಡಿಮೆ ಅಂಕ ಪಡೆದ ಅಭ್ಯರ್ಥಿಗೆ ನೇಮಕಾತಿ ನೀಡಲಾಗಿದೆ ಎಂದು ಸಿದ್ದಪ್ಪ ಪಂಡಲಿಕ ದುರ್ಗಾರ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿದ್ದಪ್ಪ ಪಂಡಲಿಕ ದುರ್ಗಾರ ಅವರು, ಬಿಇಒ ಅಧಿಕಾರಿ ಪ್ರಭಾವತಿ ಪಾಟೀಲ ಅವರ ಪ್ರಭಾವದಿಂದ ಹಾಗೂ ಹಣ ಪಡೆದು ನೇಮಕಾತಿ ಮಾಡಲಾಗಿದೆ ಎಂಬ ಅನುಮಾನವಿದೆ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಅಧಿಕೃತ ಸ್ಪಷ್ಟನೆ ಇನ್ನೂ ಲಭ್ಯವಾಗಿಲ್ಲ.

ಈ ನೇಮಕಾತಿ ಕುರಿತು 02-07-2026ರಂದು ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಸಮಗ್ರ ತನಿಖೆ ನಡೆದಿಲ್ಲ ಎಂದು ಸಿದ್ದಪ್ಪ ದುರ್ಗಾರ ತಿಳಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ಕಚೇರಿಗೆ ತೆರಳಿ ಮಾಹಿತಿ ಕೇಳಿದರೂ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ. ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಕರೆ ಸ್ವೀಕರಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀಗಾಗಿ, ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಲಾಗಲಿಲ್ಲ? ನೇಮಕಾತಿಗೆ ಯಾವ ಮಾನದಂಡ ಅನುಸರಿಸಲಾಯಿತು? ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲಾಗಿತ್ತೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮೇಲಧಿಕಾರಿಗಳು ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ ನಿಷ್ಪಕ್ಷಪಾತ ತನಿಖೆ

error: Content is protected !!