ರಾಮತೀರ್ಥ ದಾದಾ ಕುಬೋಟಾ ಟ್ರ್ಯಾಕ್ಟರ್ ಭರ್ಜರಿ ಸಾಧನೆ – ಅರ್ಧ ತೊಲಿ ಚಿನ್ನ, ಬೈಕ್ ಸೇರಿ ಲಕ್ಷಾಂತರ ಬಹುಮಾನ ವಶ!
ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಗ್ರಾಮದ *ರಾಮತೀರ್ಥ ದಾದಾ ಕುಬೋಟಾ ಟ್ರ್ಯಾಕ್ಟರ್* ರಾಜ್ಯದ ವಿವಿಧೆಡೆ ನಡೆಯುತ್ತಿರುವ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ.
ಸತತ ಸ್ಪರ್ಧೆಗಳಲ್ಲಿ ತನ್ನ ಶಕ್ತಿ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಟ್ರ್ಯಾಕ್ಟರ್, ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.
ಗೆದ್ದ ಬಹುಮಾನಗಳ ವಿವರ:
– ಸಾಲಾಪೂರ ಕಣ: ಪ್ರಥಮ ಬಹುಮಾನ – ಅರ್ಧ ತೊಲಿ ಬಂಗಾರ
– ನಿಡೋಣಿ ಕಣ: ಪ್ರಥಮ ಬಹುಮಾನ – HF 100 CC ಬೈಕ್
– ಗೊಲ್ಲಬಾವಿ ಕಣ: ಪ್ರಥಮ ಬಹುಮಾನ – ರೂ. 50,000 ನಗದು
– ಬಾಗೋಜಿಕೋಪ ಕಣ: ದ್ವಿತೀಯ ಬಹುಮಾನ – ರೂ. 40,000 ನಗದು
ವಿವಿಧ ಕಣಗಳಲ್ಲಿ ಸತತ ಯಶಸ್ಸು ಗಳಿಸುವ ಮೂಲಕ ರಾಮತೀರ್ಥ ಗ್ರಾಮದ ಹೆಸರನ್ನು ರಾಜ್ಯಮಟ್ಟದಲ್ಲಿ ಬೆಳಗಿಸಿದೆ. ಈ ಸಾಧನೆಗೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಭಾರೀ ಅಭಿನಂದನೆ ಸಲ್ಲಿಸಿದ್ದರು
