ಅಫಜಲಪುರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದ ಹೊರವಲಯದ ಹೊಲದಲ್ಲಿ 22 ವರ್ಷದ ಯುವಕನ ಶವ ಪತ್ತೆಯಾಗಿದೆ ಮೃತನನ್ನು ಕಲಿಮ್ ಮಹಮ್ಮದ್ ಪಟೇಲ್ ಹಸರಗುಂಡಗಿ ಎಂದು ಗುರುತಿಸಲಾಗಿದೆ ಗ್ರಾಮದ ರಸ್ತೆಯ ಸಮೀಪದ ಹೊಲದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದಿದ್ದು ಸ್ಥಳೀಯರಲ್ಲಿ ಆತಂಕ ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ ಮರಣೋತ್ತರ ಪರೀಕ್ಷೆ ಮತ್ತು ತನಿಖೆ ಮುಂದುವರಿದಿದೆ
ದೇವಲ ಗಾಣಗಾಪೂರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ವರದಿ ಸೈಫನ್ ಮುಲ್ಲಾ
