ಮರೆಯದ ವೀರರು

ಕಣ್ಣುಗಳು ತೇವವಾಗದಿರಲಿ
ಬಂದ ಸ್ವಾತಂತ್ರ್ಯಾ
ನೆನೆಸಿಕೊಂಡು

ಈ ಸ್ವಾತಂತ್ರ್ಯಾ
ಹಾಗೆ ಬಂದದಲ್ಲ
ಎಷ್ಟೋ ವೀರರ
ತ್ಯಾಗ ಬಲಿದಾನಗಳ
ರಕ್ತದ ನಿಜ ಕಥೆಯಿದು

ಇದನ್ನು ಸುಳ್ಳು ಮಾಡದಿರಿ
ಅಪಮಾನ ಮಾಡದಿರಿ ಒಂದೊಂದು ಕ್ಷಣ
ಅವರು ಹೇಗೆ ಕಳೆದರು
ಅದು ಅವರಿಗೆ ಗೊತ್ತು

ಯ್ವೌನವಸ್ತೆಯಲ್ಲಿಯೇ ಗಲ್ಲಿಗೇರಿದರು, ಓ ನನ್ನ ದೇಶವಾಸಿಗಳೇ
ಅವರೇ ಈ ದೇಶದ
ಶೂರರು, ಅವರನ್ನ

ಹೆತ್ತವರು ಎಂತಹ
ತ್ಯಾಗಿಗಳು, ಅವರಿಗೆ
ಬೇಕಾಗಿತ್ತು ದೇಶ ಗುಲಾಮಗಿರಿಯಿಂದ ಮುಕ್ತ

ಅದಕ್ಕೆ ಪಣಕ್ಕಿಟ್ಟರು ಜೀವವನ್ನೇ, ಇಂದು
ನಾವು ಅಂತಹ
ಪ್ರಸಂಗದಲ್ಲಿಲ್ಲ,

ಆದರೂ ಉಸಿರುಗಟ್ಟಿಸುವ ವಾತಾವರಣ ನಮ್ಮವರೇ
ನಮಗೆ ಕೇಡು ಮಾಡುವ
ಭಯ, ಜೀವದೊಂದಿಗೆ
ಆಟ ಬೇಡ, ಬದುಕು ನಿಜ.

ಬದುಕೋಣ ಎಲ್ಲಾರೂ
ಮುಕ್ತವಾಗಿ, ಬೆಳೆಸೋಣ
ಪ್ರೀತಿ, ಪ್ರೇಮ,
ಮರೆಯೋಣ
ರಾಗ ದ್ವೇಷಗಳ
ಬಾಳೋಣ ಸೌಹಾರ್ದತೆಯಿಂದ
ಇದರಿಂದಲೇ ದೇಶದ
ಉನ್ನತಿ, ಬನ್ನಿ
ಎಲ್ಲಾರೂ ನಾವೆಲ್ಲರೂ
ಮಾನವರಿಂದ
ವಿಶ್ವ ಮಾನವರಾಗೋಣ
ನಮ್ಮ ಹಿರಿಯರು
ಕಂಡ ಕನಸು
ನನಸಾಗಿಸೋಣ

.. ✍️ ಸರಿತಾ ಬೇಬಿ ವಿ ಸಾಹಿತಿಗಳು ಬೀದರ.

error: Content is protected !!