ಬಸವಕಲ್ಯಾಣ: ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಮದರ್ ತೆರೇಸಾ ಶಾಲೆಯಲ್ಲಿ ಫುಲೇ ಶಾಹು ಅಂಬೇಡ್ಕರ್ ವಿಚಾರ ಮಂಚದಿಂದ ವಿದ್ಯಾರ್ಥಿ ದಿವಸವನ್ನು ಆಚರಿಸಲಾಯಿತು.
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1900ರಲ್ಲಿ ಮೊಟ್ಟ ಮೊದಲನೇ ಬಾರಿಗೆ ಸರ್ಕಾರಿ ಶಾಲೆಗೆ ವಿದ್ಯಾರ್ಥಿಯಾಗಿ ಕಾಲಿಟ್ಟ ದಿನ. ಅದಕ್ಕಾಗಿ ಈ ದಿನವನ್ನು ಮಹಾರಾಷ್ಟ್ರ ರಾಜ್ಯದಲ್ಲಿ ವಿದ್ಯಾರ್ಥಿ ದಿವಸ ಎಂದು ಆಚರಣೆ ಮಾಡಲಾಗುತ್ತದೆ.
ಈ ದಿನದ ಅಂಗವಾಗಿ ವಿಚಾರ ಮಂಚದ ಸಂಸ್ಥಾಪಕರಾದ *ನರ್ಸಿಂಗ್ ರೆಡ್ಡಿ ಗದ್ಲೆಗಾವ್* ಅವರು ಮದರ್ ತೆರೇಸಾ ಶಾಲೆಯ ಮಕ್ಕಳಿಗೆ ಬಿಸ್ಕೆಟ್ ನೀಡಿ ವಿದ್ಯಾರ್ಥಿ ದಿವಸ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನರಸಿಂಹ ರೆಡ್ಡಿ ಅವರು, “ಇದು ಹೆಮ್ಮೆಯ ದಿನ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಲ್ಲದಿದ್ದರೆ ನಾನು ಈ ಸ್ಥಾನಕ್ಕೆ ಬರುತ್ತಿರಲಿಲ್ಲ. ನನಗೆ ಸ್ಫೂರ್ತಿದಾಯಕರು ಬಾಬಾ ಸಾಹೇಬ್ ಅಂಬೇಡ್ಕರ್. ಬಾಬಾ ಸಾಹೇಬರು ಕೊಟ್ಟ ಸಂವಿಧಾನದಿಂದಲೇ ಈ ದೇಶ ನಡೆಯುತ್ತಿದೆ. ಅದಕ್ಕೋಸ್ಕರ ನಾವೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವವನ್ನು ಪಾಲಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಆದಿತ್ಯ ಗಾಜರೆ, ಪತ್ರಕರ್ತರಾದ ಶೇಖ್ ಅಸ್ಲಂ, ಮದರ್ ತೆರೇಸಾ ಶಾಲೆಯ ಪ್ರಿನ್ಸಿಪಾಲ್ ಶೀಲಾ ಮೇಡಂ ಸೇರಿದಂತೆ ಅನೇಕರು ಹಾಜರಿದ್ದರು.
