ಬಸವಣ್ಣ ನವರು ಎಲ್ಲ ಮಠಗಳ ಸ್ವತ್ತಾಗಿದ್ದಾರೆ – ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು

ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದ ಮಡಿವಾಳೇಶ್ವರ ಮಠದ ಆವರಣದಲ್ಲಿ  ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ವೀರಶೈವ ಲಿಂಗಾಯತ ಧರ್ಮ ಪಸರಿಸಿದರು. ಜಾತಿ, ಮತ, ಪಂಥವೆಂದು ಕಚ್ಚಾಡದೆ ಸಮಾಜವನ್ನು ಸುಧಾರಿಸಿರಿ ಎಂದು ಬಸವಾದಿ ಶರಣರು ಹೇಳಿದರು. ಆದರೂ ಈಗ ಜಾತಿ, ಉಪಜಾತಿ, ಒಳ ಪಂಗಡವೆಂದೆಲ್ಲ ಹೇಳಿ ಸಮಾಜದಲ್ಲಿ ದೊಡ್ಡ ಕಂದಕವನ್ನೇ ಸೃಷ್ಟಿಸಲು ಹೊರಟಿದ್ದಾರೆ. ಲಿಂಗ ಧರಿಸಿದವರೆಲ್ಲರೂ ಲಿಂಗಾಯತರೇ ಎಂಬುದನ್ನು ಶರಣರು ಹೇಳಿದರು. ಸ್ವಾಮೀಜಿಗಳಿಂದ, ರಾಜಕಾರಣಿಗಳಿಂದ

ದರ್ಮಸಭೆ ಹಾಗೂ ಇಂಥ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಧರ್ಮ ಜಾಗೃತಿ ಹಾಗೂ ಸಮಾಜ ವಿಭಾಗವಾಗುವ ಕೆಲಸ ಆಗಬಾರದು ಎಂದರು.

ಬಸವನಬಾಗೇವಾಡಿಯ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯರು, ದೇವರ ಹಿಪ್ಪರಗಿಯ ವೀರಗಂಗಾಧರ ಶಿವಾಚಾರ್ಯರು, ಕರಿಭಂಟನಾಳದ ಶಿವಕುಮಾರ ಸ್ವಾಮೀಜಿಯವರು
ಶಾಸಕ ರಾಜುಗೌಡ ಪಾಟೀಲ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಶರಣಮ್ಮ ಕುಂಬಾರ, ಉಪಾಧ್ಯಕ್ಷ ಸಂಗಪ್ಪ ಸಜ್ಜನ, ಶಂಕರಗೌಡ ಬಿರಾದಾರ, ರಾಜಶೇಖರ ಹುಲ್ಲೂರ, ಜಿ.ಕೆ. ದಿನ್ನಿ, ಸಂಗಮೇಶ ಹಳ್ಳೂರ, ಶಿವಾನಂದ ಹುಲ್ಲೂರ, ಕಾಶಿನಾಥ ಸಜ್ಜನ, ಶಿವಪ್ಪ ದಿನ್ನಿ ಊರಿನ ಗಣ್ಯಮಾನ್ಯರು ಉಪಸ್ಥಿತರಿದ್ದರು.

ವರದಿ ಮಹಿಬೂಬ್ ಗುಂತಕಲ್