ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ಕಾರ್ಯಾಲಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ಮಹಾಪರಿ ನಿರ್ವಾಣ ದಿನ ಆಚರಿಸಲಾಯಿತು

ಮಾಜಿ ಸಚಿವರಾದ ಅಪ್ಪಾ ಸಾಹೇಬ್ ಪಟ್ಟಣಶೆಟ್ಟಿ ಅವರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವ ಹಂಗಿಗೂ ಒಳಗಾಗದ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ಮಾತು ಕೃತಿ ಭಾಷಣಗಳಿಂದ ಸೂರ್ಯನ ಕಿರಣಗಳಿಗಿಂತಲೂ ಪ್ರಕರವಾಗಿದ್ದು. ಅವರು ಅಂದುನಡೆದ ಬಂದಂತ ಕಲ್ಲು ಮುಳ್ಳಿನ ದಾರಿ ಇಂದು ನಮಗೆಲ್ಲ ರಾಜ್ಯಮಾರ್ಗವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರಅವರು 1939 ರಲ್ಲಿ ವಿಜಯಪುರ ನಗರಕ್ಕೆ ಆಗಮಿಸಿ ಸೋಮನಗೌಡ ಪಾಟೀಲ್ ಬೀಳಗಿ ಅವರ ಕೇಸ್ ಅನ್ನು ಗೆಲ್ಲಿಸಿದ್ದನ್ನ ಈ ಸಂದರ್ಭದಲ್ಲಿ ಸ್ಮರಣೆ ಮಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೂರ ದೃಷ್ಟಿ ವಿಚಾರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಇವತ್ತು ಭಾರತೀಯ ಜನತಾ ಪಾರ್ಟಿ ಅನುಷ್ಠಾನಕ್ಕೆ ತರುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತಾ ಇದೆ ಹೇಳಿದರು.
ಎಸ್ ಸಿ ಮೋರ್ಚ ರಾಜ್ಯ ಉಪಾಧ್ಯಕ್ಷರಾದ ಗೋಪಾಲ ಘಟಕಾಂಬಳೆ ಅವರು ಮಾತನಾಡಿ ಅಂಬೇಡ್ಕರ್ ಅವರ ಆದರ್ಶ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಪ್ರಸ್ತಾವಿಕವಾಗಿ ಮಾತನಾಡಿದ ನಗರ ಮಂಡಲ ಅಧ್ಯಕ್ಷರಾದ ಸಂದೀಪ್ ಪಾಟೀಲ್ ಅವರು ಮಾತನಾಡಿ ಅಂಬೇಡ್ಕರ್ ಅವರ ಅಪಾರಜ್ಞಾನ ಅವರ ಪಡೆದಂತ ಪದವಿ ಅಸ್ಪೃಶ್ಯ ಸಮಾಜದ ಪರವಾಗಿ ಅವರ ನಿಲುವು ಕುರಿತು ಮಾತನಾಡಿದರು. ಚಿದಾನಂದ ಚಲವಾದಿ ಅವರು ಮಾತನಾಡಿ ಅಂಬೇಡ್ಕರ್ ಅವರ ಜೀವನ ಆದರ್ಶ ಅವರ ಜೀವನದ ಕುರಿತಾಗಿ ಮಾತನಾಡಿದರು. ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್ ಮೀಸಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟಿದಂತ ಸಂದರ್ಭದಲ್ಲಿ ಭಾರತ ದೇಶ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಅವರ ಹುಟ್ಟಿದಂತಹ ಜಾತಿ ಗುಲಾಮಗಿರಿಯಲ್ಲಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಗಳನ್ನು ಇವತ್ತು ಭಾರತೀಯ ಜನತಾ ಪಾರ್ಟಿ ಸರ್ಕಾರ ಅನುಷ್ಠಾನಕ್ಕೆ ತರುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದರು. ಸಂಜು ಐಹೊಳೆ ಮಾತನಾಡಿ ಕಾಂಗ್ರೆಸ್ ಹಾಗೂ ಗಾಂಧಿ ಅವರು ಅಸ್ಪೃಶ್ಯತೆ ತೊಡೆದು ಹಾಕಲು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ ಹಾಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಗಾಂಧೀಜಿಯವರನ್ನು ಹಾಗೂ ಕಾಂಗ್ರೆಸ್ಸಿನ ಕಟುವಾಗಿ ಟೀಕಿಸಿದರು ಎಂದು ಹೇಳಿದರು. ಮಹೇಂದ್ರ ಕುಮಾರ್ ನಾಯಕ್ ಮಾತನಾಡಿ ವಿಜಯಪುರ ನಗರದಲ್ಲಿ 1976ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸುವಲ್ಲಿ ಮಾಜಿ ಶಾಸಕರಾದ ಲಕ್ಷ್ಮಣ್ ನಾಯಕರ ಪಾತ್ರದ ಕುರಿತು ಮಾತನಾಡಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಸಪ್ನಾ ಕಣ್ಮುಚನಾಳ ಮಾತನಾಡಿ ಮಹಿಳಾ ಸ್ವಾತಂತ್ರ್ಯದ ಕುರಿತು ಅಂಬೇಡ್ಕರ್ ಅವರ ವಿಚಾರಗಳನ್ನು ಮತ್ತು ಹಿಂದು ಕೋಡ್ ಬಿಲ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಾರಿಗೆ ತರುವುದರ ಹಿನ್ನೆಲೆ ಕುರಿತು ಮಾತನಾಡಿದರು. ಕಾರ್ಯಕ್ರಮದ ವೇದಿಕೆ ಮೇಲೆ ಬಿಜೆಪಿ ಬೆಳಗಾವಿ ವಿಭಾಗ ಪ್ರವಾದಿಗಳಾದ ಶ್ರೀ ಚಂದ್ರಶೇಖರ್ ಕೌಟಿಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾಹುರ, ಮಲ್ಲುಗೌಡ ಪಾಟೀಲ್,ಎಸ್. ಸಿ ಮೋರ್ಚಾ ನಗರ ಮಂಡಲ ಅಧ್ಯಕ್ಷರಾದ ಸದಾನಂದ ಚಲವಾದಿ, ಪ್ರತಿ ಮೋರ್ಚ ಉಪಾಧ್ಯಕ್ಷದ ಶ್ರೀಮತಿ ಶಾಂತಾಬಾಯಿ ವೋ ತ್ಲಾಸ್ಕರ್, ವಿನೋದ್ ಕೋಳರು, ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟೆ, ರಾಹುಲ್ ಜಾದವ್, ರಾಜೇಶ್ ದೇವಗೀರ್ ಕರ್, ರಾಜಶೇಖರ್ ಮಗಿಮಠ, ಮಹೇಶ್ ಒಡಿಯರ್, ಹಾಗೂ ಹನುಮಂತ ಭಜಂತ್ರಿ, ಎಸ್ ಎ ಪಾಟೀಲ್, ಉಮೇಶ್ ಕೊಳಕುರ್, ದಿಶಾ ಚೆಕನಾದ, ರಮೇಶ್ ಬಿದ್ನೂರ್, ಭೀಮಶಂಕರ್ ಹದನೂರು, ಅನುಸೂಯ ಮಾದರಿ, ಸಂತೋಷ್ ದೊಡ್ಮನಿ, ಪ್ರದೀಪ್ ಚಲವಾದಿ, ಉಮೇಶ್ ವೀರ ಕರ್ ರಾಜಕುಮಾರ್ ಸಗಾಯಿ, ಕಾಂತು ಸಿಂಧೆ, ರಾಜೇಶ್ ತಾವಸೆ, ಸಿದ್ಧಗೊಂಡ ಬಿರಾದರ ಭಾರತಿ ಬುಯಾರ, ವಿನಾಯಕ ದ್ಯಯ ಹಿಂಡಿ, ಸುಶ್ಮಿತಾ, ಹಾಗು ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಜಯಪೂರ ಜಿಲ್ಲಾ ವರದಿಗಾರ ಅಜೀಜ ಪಠಾಣ.

error: Content is protected !!