ಬೀದರ: ಸೆಪ್ಟೆಂಬರ್. 12: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ ಬೀದರ ಹಾಗೂ ಸಪ್ತಗಿರಿ ವಿಜ್ಞಾನ ಪದವಿ ಪೊರ್ವ ಕಾಲೇಜು ಬೀದರ ಇವರ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಆತ್ಮಹತ್ಯ ತಡೆಗಟ್ಟುವ ದಿನಾಚರಣೆ 2024” ಘೋಷವಾಕ್ಯ: “ಆತ್ಮಹತ್ಯೆಯ ನಿರೂಪಣೆಯನ್ನು ಬದಲಾಯಿಸೋಣ”ಎಂಬ ಘೋಷಣೆ ಮುಂಖಾತರ ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತ್ತು.
ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾg ಪ್ರಕಾಶ ಅರ್ಜುನ ಬನಸೊಡೆ ಗೌರವಾನ್ವಿತ ರವರು ದೀಪಾ ಬೆಳಗುವುದರ ಮುಖಾಂತರ ಕಾರ್ಯಕ್ರಮವನ್ನು ಚಾಲನೆ ನಿಡಲಾಯಿತ್ತು.
ಕಾರ್ಯಕ್ರಮ ಉದ್ದೇಶಿಸಿ ವಿದ್ಯಾರ್ಥಿಗಳಿಗೆ ಸಮಸ್ಯೆಗೆ ಒಳಾಗದ ನಂತರ ಆಪ್ತ ಸಮಾಲೋಚಕರ ಮತ್ತು ಮನೋವೈದ್ಯರ ಸಲಹೆ ಪಡೆದುಕೊಳ್ಳಬೇಕು ಯಾವುದೆ ಕಾರಣಕ್ಕೆ ಆತ್ಮಹತ್ಯಗೆ ಓಳಗಾಗಬಾರದೆಂದು ಸಲಹೆ ನಿಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಪ್ತಗಿರಿ ವಿಜ್ಞಾನ ಪದವಿ ಪೊರ್ವ ಕಾಲೇಜು ಪ್ರಾಂಶುಪಾಲರಾದ ಗೊವಿಂದ ಡಿ ತಾಂದಳೆ ಬೀದರ ರವರು ಕಾರ್ಯಕ್ರಮ ಉದ್ದೇಶಿಸಿ ವಿದ್ಯಾರ್ಥಿಗಳು ಪರಿಕ್ಷೆ ಬಂದಾಗ ಒತ್ತಡಕ್ಕೆ ಒಳಗಾಗದೆ ಪರಿಕ್ಷೆಗಳು ನಮ್ಮ ಜೀವನ ಎಂದು ತಿಳಿದುಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಲ್ಲಿ ತಾಳ್ಮೆ ಶಕ್ತಿ ಬಹಳ ಮುಖ್ಯವೆಂದು ಹೇಳಿದರು.
ಪ್ರಾಸ್ತವಿಕ ಹಾಗೂ ಮುಖ್ಯ ಅತಿಥಿಯಾಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿಗಳಾದ ಡಾ. ಕಿರಣ ಎಮ್ ಪಾಟೀಲ ರವರು ಕಾರ್ಯಕ್ರಮ ಉದ್ದೇಶಿಸಿ ವಿದ್ಯಾರ್ಥಿಗಳು ಸಮಸ್ಯೆಗಳಿಗೆ ಓಳಗಾದಾಗ ಟೋಲ್ ಫ್ರೀ ನಂ 14416 ಗೆ ಕರೆಯನ್ನು ಮಾಡಿ ಸಲಹೆ ಪಡೆದುಕೊಳ್ಳಬಹುದು ಎಂದು ಹೇಳಿದರು. ಮನಸ್ಸಿನಲ್ಲಿ ಯಾವಾಗಲೂ ಧನಾತ್ಮಕ ಯೋಚನೆಗಳನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅತಿಥಿ ಉಪನ್ಯಾಸಕರಾದ ಜಿಲ್ಲಾ ಮಾನಸಿಕ ಮನೋವೈದ್ಯರಾದ ಡಾ ಅಮಲ್ ಶರಿಫ್ ಬೀದರ ರವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ ಆಧುನಿಕ ಯುಗದಲ್ಲಿ ಯುವಜನತೆ ಅತಿಯಾಗಿ ಮೊಬೈಲ್ ಹಾಗೂ ಇಂಟರ್‌ನೆಟ್‌ದಿAದ ಅನೇಕ ವಿದ್ಯಾರ್ಥಿಗಳು ದುಶ್ಸಚಟಗಳಿಗೆ ಒಳಗಾಗುತ್ತಿದ್ದಾರೆ ಅದರಿಂದ ದೈಹಿಕ & ಮಾನಸಿಕ ಕಾಯಿಲೆಗಳಿಗೆ ಒಳಗಾಗಿ ತಮ್ಮ ಅಮೂಲ್ಯವಾದ ಜೀವನವನ್ನೆ ನಾಶಮಾಡಿಕೊಳ್ಳುತ್ತಿದ್ದಾರೆ. ಇದಕೆ ಸರಿಯಾದ ಮಾಹಿತಿ ಕೊರತೆಯಿಂದ ಯುವಜನತೆ ಆತ್ಮಹತ್ಯಗೆ ಬಲಿಯಾಗುತ್ತಿದ್ದಾರೆ ಆದರಿಂದ ಸರಿಯಾದ ಮಾಹಿತಿ, ಸಲಹೆ, ಆಪ್ತ ಸಮಾಲೋಚನೆ, ಚಿಕಿತ್ಸೆ ನೀಡಿದರೆ ಆತ್ಮಹತ್ಯ ತಡೆಗಟ್ಟಲು ಸರಿಯಾದ ಅರಿವು ಮೂಡಿಸುವುದರಿಂದ ಯುವಜನತೆಗಳನ್ನು ಆತ್ಮಹತ್ಯಗೆ ಬಲಿಯಾಗುವದನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ವಿರಶಟ್ಟಿ ಚನ್ನಶೇಟ್ಟಿ ಹಾಗೂ ಮನೊಶಾಸ್ತçಜ್ಞರು ಜಿಲ್ಲಾ ಮಾನಸಿಕ ವಿಭಾಗದ ಮಲ್ಲಿಕಾರ್ಜುನ ಗುಡ್ಡೆ ಅತಥಿಗಳಾಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಜಿಲ್ಲಾ ಮಾನಸಿಕ ವಿಭಾಗ ಭಾಷಣ ಆಪ್ತಸಮಾಲೋಚಕರಾದ ರೇಣುಕಾ ನಡೆಸಿಕೊಟ್ಟರೆ ನಿರೂಪಣೆಯನ್ನು ಸಪ್ತಗಿರಿ ವಿಜ್ಞಾನ ಪದವಿ ಪೊರ್ವ ಕಾಲೇಜಿನ ಉಪನ್ಯಾಸಕರಾದ ಅನಿಲಕುಮಾರ ಜಾಧವ ಹಾಗೂ ವಂದನಾರ್ಪಣೆಯನ್ನು ಜಿಲ್ಲಾ ಮಾನಸಿಕ ವಿಭಾಗದ ಆಪ್ತಸಮಾಲೋಚಕರಾದ ಸಿಮಪ್ಪಾ ಸರಕೂರೆ ಅವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಪರಶುರಾಮ, ರಾಠೋಡ್ ಪ್ರಮೋದ್,ಶ್ರೀಮತಿ ಜ್ಯೋತಿ,ಶ್ರೀಮತಿ ಬ್ರಮಾರಂಬಾದೇವಿ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕುರಿತು ಅರಿವು ಮೂಡಿಸುವ ಭಿತಿಪತ್ರಗಳು ಬಿಡುಗಡೆಗೊಳಿಸಲಾಯಿತ್ತು.