ಪಶು ಸಂಪತ್ತು ಉಳಿಸಿ ಬೆಳೆಸಬೇಕು – ಸಚಿವ ಈಶ್ವರ.ಬಿ ಖಂಡ್ರೆ

ಬೀದರ:- ಹೆಡಗಾಪೂರ ಸಮೀಪ ಮಾಂಜ್ರಾ ಮತ್ತು ಕಾರಂಜಾ ನದಿಗಳು ಹರಿಯುತ್ತಿವೆ. ಹಸು, ಎಮ್ಮೆ, ಆಡು, ಕುರಿ ಸಾಕಾಣಿಕೆಗೆ ಉತ್ತಮ ವಾತಾವರಣ ಇಲ್ಲಿದೆ. ಪಶು ಸಂಪತ್ತನ್ನು ಉಳಿಸಿ ಬೆಳೆಸಬೇಕಿದೆ ಎಂದು ಅರಣ್ಯ. ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.

ಅವರು ಬುಧವಾರ ಜಿಲ್ಲಾ ಪಂಚಾಯತ ಮತ್ತು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಬೀದರ ಸಹಯೋಗದಲ್ಲಿ ಔರಾದ ಬಿ. ತಾಲ್ಲೂಕಿನ ಹೆಡಗಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ದೇಶಿಯ ತಳಿಗಳ ಸಂರಕ್ಷಣೆ ಜೊತೆಗೆ ಆಧುನಿಕ ಪದ್ದತಿ ಮೂಲಕ ಕುರಿ, ಕೋಳಿ, ಮೇಕೆ, ಹಂದಿ ಸಾಕಾಣಿಕೆ ತರಬೇತಿ ರೈತರಿಗೆ ನೀಡಿದರೆ ಅವರ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ. ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಹೆಡಗಾಪೂರದಲ್ಲಿ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. 35 ಕೋಟಿ ವೆಚ್ಚದ ಈ ಕಾಮಗಾರಿ ಕಾಲಮಿತಿಯಲ್ಲಿ ಸುಸಜ್ಜಿತವಾಗಿ ಆಗುತ್ತದೆ ಇದಕ್ಕೆ ನಬಾರ್ಡನಿಂದ ಅನುದಾನ ಬರುತ್ತಿದೆ ಎಂದರು.

ಕೇವಲ ಕಟ್ಟಡ ಆದರೆ ಸಾಲದು ಜೊತೆಗೆ ಇದಕ್ಕೆ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ನೇಮಕಾತಿ ಆಗಬೇಕು. ಹೆಡಗಾಪೂರ ಗ್ರಾಮದ ಗೋಮಾಳ 33 ಎಕರೆ ಜಮೀನನ್ನು ಈ ಗ್ರಾಮಸ್ಥರು ನೀಡಿದ್ದಾರೆ. ಇದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿAದಲೂ ಅನುದಾನ ಒದಗಿಸಲಾಗುವುದು. ರೈತರು ಕೃಷಿ ಜೊತೆಗೆ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಮಾಡಿದರೆ ಅವರ ಆರ್ಥಿಕತೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಹಾಲು ಉತ್ಪಾದಕರ ಕಟ್ಟಡ ನಿರ್ಮಾಣ. ಟೆಸ್ಟಿಂಗ್ ಮಶೀನಗೆ ವೀರೇಂದ್ರ ಹೆಗಡೆ ಅವರು ಬೀದರ ಜಿಲ್ಲೆಗೆ 5 ಕೋಟಿ ಅನುದಾನ ಕೊಟ್ಟಿದ್ದಾರೆ. ಬೀದರ ಸಂಸದರ ನಿಧಿಯಿಂದಲೂ ಅನುದಾನ ನೀಡಲಾಗುವುದು. ಕೋಲಾರ ಜಿಲ್ಲೆಯಲ್ಲಿ 10 ಲಕ್ಷ ಹಾಲು ಉತ್ಪಾದನೆ ಮಾಡುತ್ತಾರೆ ಮನಸ್ಸು ಮಾಡಿದರೆ ನಮ್ಮ ಜಿಲ್ಲೆಯಲ್ಲಿ 5 ಲಕ್ಷ ಹಾಲು ಉತ್ಪಾದನೆ ಮಾಡಬಹುದು ಎಂದು ಹೇಳಿದರು.

60 ಕೋಟಿ ರೂ. ವೆಚ್ಚದಲ್ಲಿ ಬೀದರ ಜಿಲ್ಲಾ ಸಂಕೀರ್ಣದ ಕಟ್ಟಡ ಆರಂಭಿಸಲಾಗುವುದು. 15 ಕೋಟಿ ರೂ. ವೆಚ್ಚದಲ್ಲಿ ಇಕೋ ಟೂರಿಸಂ. ದೇವ ದೇವವನಕ್ಕೆ 15 ಕೊಟಿ ರೂ. ಅನುದಾನ ನೀಡಿದ್ದೆವೆ. ಎಲ್ಲರೂ ಸೇರಿ ಬೀದರ ಜಿಲ್ಲೆಯ ಅಭಿವೃದ್ಧಿಗೆ ಕಂಕಣಬದ್ದರಾಗೋಣ ಎಂದರು.

ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ ಮಾತನಾಡಿ, ಹೆಡಗಾಪೂರ ಜಾನುವಾರು ತಳಿ ಸಂಶೋಧನಾ ಕೇಂದ್ರ ಬೆಂಗಳೂರಿನ ಹೇಸರಘಟ್ಟ ಬಿಟ್ಟರೆ ಇದು ರಾಜ್ಯದಲ್ಲಿ ಎರಡನೇಯದು ಆಗಲಿದೆ. ನಂಜುAಡಪ್ಪ ವರದಿ ಪ್ರಕಾರ ಈ ಭಾಗ ಹಿಂದುಳಿದಿದೆ ಮತ್ತು ಇಲ್ಲಿ ಧನ, ಎಮ್ಮೆ ಬಹಳ ಇವೆ ಎಂದು ಪಶು ವಿಶ್ವವಿದ್ಯಾಲಯ ಬೀದರ ಜಿಲ್ಲೆಗೆ ಮಾಡಿದರು ಎಂದರು.

ಈ ತರಬೇತಿ ಕೇಂದ್ರಕ್ಕೆ ಗ್ರಾಮಸ್ಥರು ಜಮೀನು ನೀಡಿದ್ದಾರೆ. ಇದರ ಕೆಲಸ ಆರಂಭಿಸಲು 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇದರಿಂದ ಈ ಭಾಗದ ಜನರ ಬದುಕು ಸುಧಾರಣೆ ಆಗಲಿದೆ. ಸ್ಥಳೀಯ ಜಾನುವಾರುಗಳ ಅನೇಕ ತಳಿಗಳು ಇವೆ . ಇದರ ಜೊತೆಗೆ ಹೊಸ ತಳಿಗಳ ಸಂಶೋಧನೆ ಮಾಡಿ ರೈತರು ಕೃಷಿ ಜೊತೆಗೆ ಕುರಿ, ಕೋಳಿ, ಮೇಕೆ ಹಾಗೂ ಹೈನುಗಾರಿಕೆ ಮಾಡುವುದರಿಂದ ಅವರ ಆರ್ಥಿಕತೆ ಸುಧಾರಣೆ ಆಗಲಿದೆ ಎಂದು ಹೇಳಿದರು.

ಔರಾದ ಬಿ. ವಿಧಾನ ಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ. ಚವ್ಹಾಣ ಮಾತನಾಡಿ, ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರದಿAದ ಈ ಭಾಗದ ರೈತರಿಗೆ ಅನುಕೂಲವಾಗುವದರ ಜೊತೆಗೆ ಹೆಡಗಾಪೂರ ಗ್ರಾಮದ 50 ಜನರಿಗೆ ಉದ್ಯೋಗ ಸಿಗುತ್ತದೆ ಔರಾದ ಗಡಿ ಹಿಂದುಳಿದ ತಾಲ್ಲೂಕು ಆಗಿದೆ. ಈ ತರಬೇತಿ ಕೇಂದ್ರದ ಕೆಲಸ ಬಹಳ ತಡವಾಗಿ ಆರಂಭವಾಗುತ್ತಿದೆ. ಗೋ ರಕ್ಷಣೆ ಮಾಡಬೇಕು. ಪಶು ಸಂಜೀವಿನಿ ಅಂಬುಲೆನ್ಸ್ ದೇಶದಲ್ಲಿ ನಾನು ಮೊದಲು ಮಾಡಿದ್ದೆ. ಈ ಕಟ್ಟಡದ ಕೆಲಸ ಕಾಮಗಾರಿ ಸರಿಯಾಗಿ ಗುಣಾತ್ಮಕವಾಗಿ ಆಗಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆಯಲ್ಲಿ ಪಶು ಇಲಾಖೆಯಿಂದ ಸಹಾಯಧನ ಪಡೆದ ಫಲಾನುಭವಿಗಳಿಗೆ ಸಚಿವರು ಪ್ರಮಾಣ ಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಹೆಡಗಾಪೂರ ಗ್ರಾಮ ಪಂಚಾಯತ ಅಧ್ಯಕ್ಷರಾದ ಶೋಭಾವತಿ ಜೇಮ್ಸ್ ತಾರೆ, ಬೀದರ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ, ಬೆಂಗಳೂರು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ನಿರ್ದೇಶಕರಾದ ಡಾ.ಮಂಜುನಾಥ ಎಸ್.ಪಾಳೆಗಾರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಚಂದ್ರಕಾAತ ಪೂಜಾರಿ, ಬೀದರ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಕೆ.ಸಿ.ವೀರಣ್ಣ, ರಾಯಚೂರು ರಾಜ್ಯ ವಲಯ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ (ಪ್ರಭಾರಿ) ಡಾ.ಶರಣಬಸಪ್ಪ ಎಸ್.ಪಾಟೀಲ, ಬೀದರ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು (ಆಡಳಿತ) ಡಾ.ನರಸಪ್ಪ ಎ.ಡಿ. ಸೇರಿದಂತೆ ಪಶು ಇಲಾಖೆಯ ಇತರೇ ಅಧಿಕಾರಿಗಳು, ಹೆಡಗಾಪೂರ ಗ್ರಾಮಸ್ಥರು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!