ಹೌದು ಹುಮನಾಬಾದ ಯಿಂದ ಬೀದರ್ ಹೋಗುವ ಮುಖ್ಯ ರಸ್ತೆ ಇದು ಕೇವಲ ಪೌರಾಡಳಿತ ಸಚಿವರ ಕ್ಷೇತ್ರಕ್ಕೆ ಹೋಗುವ ರಸ್ತೆ ಅಲ್ಲ ಇದೆ ರಸ್ತೆ ಮೇಲಿಂದ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರ ಭಾಲ್ಕಿಗೆ ಪ್ರಯಾಣಿಕರು ಪ್ರಯಾಣ ಮಾಡ್ತಾರೆ,
ಯಾವ ಬ್ರಿಡ್ಜ್ ಮೇಲೆ ಬಸ್ ಬಂದರೆ ಪ್ರಯಾಣಿಕರು ಇತ್ತ ಮಾಣಿಕ್ ಪ್ರಭು ಮಹಾರಾಜ ಹಾಗೂ ಈ ಕಡೆ ಶ್ರೀ ವೀರಭದ್ರೇಶ್ವರ ದರ್ಶನ ಪಡೆಯುತ್ತಾರೆ ಬಸ್ ನಲ್ಲಿದ್ದೆ ನಮಸ್ಕರಿಸುತ್ತಾರೆ ಆ ಬ್ರಿಡ್ಜ್ ಪಕ್ಕದಲ್ಲೇ ಪ್ಲಾಸ್ಟಿಕ್ ಕಸ ಎಸೆದಿರುದಷ್ಟೇ ಅಲ್ಲದೆ ಸತ್ತ ಪ್ರಾಣಿಗಳಿಗೂ ಅಲ್ಲೇ ಎಸೆಯುವುದರಿಂದ ಹೋಗುವ ಬರುವ ವಾಹನ ಗಳಿಗೆ ತೊಂದರೆ ಯಾಗುತ್ತಿದೆ,
ಪ್ರಯಾಣಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇಲ್ಲಿ ನಿರ್ಮಾಣ ವಾಗಿದೆ, ಈ ಚರಂಡಿ ಯಿಂದ ಕೆಲವೇ ಅಂತರದಲ್ಲಿ ತಾಲೂಕು ದಂಡಾಧಿಕಾರಿಗಳ ಕಚೇರಿ ಇದ್ದರೆ ಶಾಸಕರ ಕಚೇರಿಯು ಹತ್ತಿರದಲ್ಲಿದೆ ಅಷ್ಟೇ ಅಲ್ಲ ಹುಮನಾಬಾದ ದಿಂದ ಬೀದರ್ ಪ್ರಯಾಣಿಸುವ ಜನಪ್ರತಿನಿದಿನಗಳು ಅಧಿಕಾರಿಗಳು ಇದೆ ಮಾರ್ಗವಾಗಿ ಹೋಗಬೇಕು,
ಇಷ್ಟಾದರೂ ಇಲ್ಲಿ ಕಸದ ತೊಟ್ಟೆ ನಿರ್ಮಾಣವಾಗಿದ್ದು ಹೇಗೆ ಒಂದು ಕಡೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ವಚ್ಛ ಭಾರತದ ಕರೆ ನೀಡಿದರೆ ಇಲ್ಲಿ ರಸ್ತೆ ಮೇಲೆಯೇ ಅಸ್ವಚ್ಛತೆ ಕಂಡು ಬರುತ್ತಿರುವುದು ಎಷ್ಟರ ಮಟ್ಟಿಗೆ ಸರಿ,
ಅಕ್ಟೊಬರ್ 2ಗಾಂಧಿ ಜಯಂತಿ ಬರುತ್ತಿದ್ದಂತೆ ಸ್ವಚ್ಛ ಭಾರತದ ಘೋಷಣೆ ಕೂಗಿ ಇದ್ದ ಸ್ವಚ್ಛ ರಸ್ತೆ ಗುಡಿಸುವ ಬದಲು ಕಸ ಪ್ಲಾಸ್ಟಿಕ್ ಡಂಪ್ ಮಾಡಲು ವ್ಯವಸ್ಥೆ ಮಾಡಿಕೊಳ್ಳಲು ಸರ್ಕಾರವೇ ದಾರಿ ತೋರಿಸುವ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ, ಇನ್ನೂ ಈ ಪ್ಲಾಸ್ಟಿಕ್ ಕಸ ಕಡ್ಡಿ ಪುರಸಭೆ ಯವರೇ ಎಸೆಯುತ್ತಿದ್ದಾರೆಯೇ ಅಥವಾ ಅಂಗಡಿ ಯವರು ಎಸೆಯುತಿದ್ದಾರೆ ಎಂಬ ಮಾಹಿತಿ ಇಲ್ಲ ಅದೇನೇ ಆಗಲಿ ಸಂಬಂಧ ಪಟ್ಟ ಅಧಿಕಾರಿ ಜನಪ್ರತಿನಿದಿನಗಳು ಈ ಕಡೆ ಗಮನ ಹರಿಸಿ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸ್ವಚ್ಛತೆ ಕಾರ್ಯಕ್ಕೆ ಮುಂದಾಗಬೇಕಿದೆ.