ಹುಮನಾಬಾದ : ಮಹಾರಾಷ್ಟ್ರದ ರಾಮಗಿರಿ ಮಹಾರಾಜ್ ಹಾಗೂ ಉತ್ತರ ಪ್ರದೇಶದ ನರಸಿಂಗಾನಂದ ಸರಸ್ವತಿ ಎಂಬುವವರು ಇಸ್ಲಾಂ ಧರ್ಮದ ಪವಿತ್ರ ಪ್ರವಾದಿ ರವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದನ್ನು ವಿರೋಧಿಸಿ ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದು ಹಲವಡೆ ಪ್ರಕರಣ ದಾಖಲಾಗಿದ್ದು ಹಾಗೂ ಪ್ರತಿಭಟನೆಗಳು ನಡೆದಿವೆ ಇಂದು ಹುಮನಾಬಾದ ಪಟ್ಟಣದ ಜಾಮೀಯಾ ಮಸೀದಿ ಮೂಲಕ ಹಳೆ ತಹಸೀಲ್ ಕಚೇರಿ ಮಾರ್ಗವಾಗಿ ಅಂಬೇಡ್ಕರ್ ವೃತ್ತಕ್ಕೆ ತೆರಳಿ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಡಾ ಬಿ ಆರ್ ಅಂಬೇಡ್ಕರ್ ರವರಿಗೆ ಗೌರವ ಸಲ್ಲಿಸಿ ಪ್ರಮುಖ ಮುಖಂಡರು ಮಾತನಾಡಿದರು ಪ್ರವಾದಿ ರವರು ಜಗತ್ತಿಗೆ ಶಾಂತಿಧೂತ ರಾಗಿ ಬಂದವರು ಅವರು ಕೇವಲ ಒಂದು ಕುಲಕ್ಕೆ ಸೀಮಿತರಲ್ಲ ಅವರ ವಿರುದ್ಧ ಹೇಳಿಕೆ ನೀಡೋದು ನಿಲ್ಲಿಸಬೇಕು ಸರ್ಕಾರ ಇದಕ್ಕೆ ಕಠಿಣ ಕಾನೂನು ಜಾರಿ ಮಾಡಬೇಕು ನಮ್ಮ ನಮ್ಮ ತಂದೆ ತಾಯಿ ಬಗ್ಗೆ ಮಾತನಾಡಿದರೆ ನಾವು ಕ್ಷಮಿಸಬಹುದು ಆದರೆ ನಮ್ಮ ಪ್ರವಾದಿ ರವರ ವಿರುದ್ಧ ಹೇಳಿಕೆ ನೀಡಿದರೆ ನಾವು ಬೀದಿಗೆ ಇಳಿದು ಕಿಡಗೇಡಿ ಗಳಿಗೆ ಶಿಕ್ಷೆ ಯಾಗೋವರೆಗೂ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು,
ಪ್ರತಿಭಟನೆ ನಂತರ ಬೀದರ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ್ ಗುಂಟಿ ರವರಿಗೆ ದೂರು ಸಲ್ಲಿಸಿದರು ನಂತರ ಸರ್ಕಾರಕ್ಕೆ ಬರೆದ ಮನವಿ ಪತ್ರ ಸ್ಥಳೀಯ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಮೂಲಕ ಸಲ್ಲಿಸಿದರು ಪ್ರತಿಭಟನೆ ಯಲ್ಲಿ ಮುಸ್ಲಿಮ್ ಮತ್ತು ದಲಿತ ಸಮಾಜದ ಮುಖಂಡರು ಭಾಗವಹಿಸಿದರು ಪ್ರತಿಭಟನೆ ಶಾಂತಿಯುತವಾಗಿ ಪೂರ್ಣ ಗೊಂಡಿತು.