ವಡಗೇರಾ: ತಾಲೂಕಿನಾದ್ಯಂತ ಚರ್ಮಗಂಟು ರೋಗದಿಂದ ಜಾನುವಾರಗಳು ಸಾವನ್ನಪ್ಪುತ್ತಿದ್ದು ರೈತರು ತೀವ್ರ ಆತಂಕದಲ್ಲಿದ್ದಾರೆ ಇದಕ್ಕೆ ಪಶು ಇಲಾಖೆಯ ಅಧಿಕಾರಿಗಳು ಪಶು ವೈದ್ಯರ ನಿರ್ಲಕ್ಷವೆ ಪ್ರಮುಖ ಕಾರಣ ಎಂದು ಕರ್ನಾಟಕ ರಕ್ಷಣಾ ವೇದಿಕೆ ವಡಗೇರಾ ತಾಲೂಕು ಅಧ್ಯಕ್ಷ ಅಬ್ದುಲ್ ಚಿಗಾನೂರ ಆರೋಪಿಸಿದ್ದಾರೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಚರ್ಮಗಂಟು ರೋಗ ಲಕ್ಷಣ ಹೆಚ್ಚಾಗಿ ಕಾಡುತ್ತಿದೆ ಆದರೆ ಗ್ರಾಮೀಣ ಪ್ರದೇಶದಲ್ಲಿ ಪಶು ವೈದ್ಯರ ಕೊರತೆ ಇದೆ ಮತ್ತು ಕೆಲವು ಪಶು ವೈದ್ಯರಂತು ನೆಪ ಮಾತ್ರಕ್ಕೆ ಗ್ರಾಮೀಣ ಭಾಗಗಳಿಗೆ ತಮಗೆ ಇಚ್ಛೆ ಬಂದಾಗ ಮಾತ್ರ ಬಂದು ಹೋಗುತ್ತಾರೆ ಎಂದು ರೈತರು ಹೇಳುತ್ತಿದ್ದಾರೆ. ಕೆಲವು ಪಶು ಆಸ್ಪತ್ರೆಗಳಂತು ಪಾಳು ಬಿದ್ದಿವೆ ಯಾವುದೇ ಸೌಲಭ್ಯಗಳಿಲ್ಲದೆ ವಂಚಿತವಾಗಿವೆ ಸಮರ್ಪಕವಾದ ಔಷಧಿ ಚುಚ್ಚುಮದ್ದುಗಳು ಕೂಡಾ ಸರಬರಾಜು ಇಲ್ಲ ಸರಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿದರು ಕೂಡಾ ಗ್ರಾಮೀಣ ಭಾಗದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಪಶು ಪ್ರಾಣಿಗಳು ಸಾವನ್ನಪ್ಪುತ್ತಿವೆ ಇನ್ನು ಕೆಲವು ಜಾನುವಾರುಗಳು ಚರ್ಮ ಗಂಟು ರೋಗದಿಂದ ನರಳುತ್ತಿವೆ ಮೂಕ ಪ್ರಾಣಿಗಳ ರೋಧನೆ ಹೇಳತಿರದು ಕೆಲವು ಆಸ್ಪತ್ರೆಗಳಲ್ಲಿ ಡಿ. ಗ್ರೂಪ್ ಸಿಬ್ಬಂದಿಗಳೇ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕೂಡ ಹಿರಿಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಕಿಡಿ ಕಾರಿದ್ದಾರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗ್ರಾಮೀಣ ಪಶು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ತಪ್ಪಿಸ್ತ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಪಶು ವೈದ್ಯರ ಬೇಜವಾಬ್ದಾರಿತನದಿಂದ ಕುರಿ ಮೇಕೆ ದನಕರು ಎತ್ತುಗಳು ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿವೆ ಇದಕ್ಕೆ ಹೊಣೇಯಾರು ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಉತ್ತರ ಕೊಡಬೇಕು ಕೂಡಲೆ ಹಿಂದುಳಿದ ನೂತನ ತಾಲೂಕಿಗೆ ಹೆಚ್ಚಿನ ಪಶು ವೈದ್ಯರ ನೇಮಕ ಮಾಡಿ ಔಷಧಿ ಚುಚ್ಚುಮದ್ದುಗಳನ್ನು ಸಮರ್ಪಕವಾಗಿ ಸರಬರಾಜು ಮಾಡುವಂತೆ ಆಗ್ರಹಿಸಿದ್ದಾರೆ .ಒಂದು ವೇಳೆ ವಿಳಂಬ ಮಾಡಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ. ಸತೀಶ್ ಜಡಿ, ಶ್ರೀನಿವಾಸ್ ಮಡಿವಾಳ್, ಸುರೇಶ್ ಬಾಡದ, ಪೀರ್ ಸಾಬ್ ಮರಡಿ, ಮಲ್ಲು ಜಡಿ, ರಾಮು ದೇವರೆಡ್ಡಿ, ಬಸವರಾಜ್ ಕೂದ್ದಡ್ಡಿ, ಬಸ್ಸು ನಾಯಕ್ ಬಸ್ಸೇನಿ, ಸಾಹೇಬ್ ರೆಡ್ಡಿ ಹೊರಟೂರ, ಮೊಹಮ್ಮದ್ ಖತಾಲಿ, ಹಾಗೂ ಇನ್ನಿತರರು ಎಚ್ಚರಿಸಿದ್ದಾರೆ.
ವರದಿ : ಸಿದ್ದು ಪಾಟೀಲ್