ಕಲ್ಯಾಣ ನಾಡಿನ ಅಪರೂಪದ ಸಾಹಿತಿ ಅಕ್ಕಾ ಡಾ.ಜಗದೇವಿ ತಿಬಶೆಟ್ಟಿ

ಡಾ. ಜಗದೇವಿ ತಿಬಶೆಟ್ಟಿಯವರು ಸ್ತ್ರೀ ಪರ ಕಾಳಜಿಯುಳ್ಳ ಸಾಹಿತಿಗಳಾಗಿದ್ದು ಸ್ತ್ರೀಯರ ಬವಣೆಗಳ ಬಗ್ಗೆ ಬಂಧನ ಕಟ್ಟುಪಾಡುಗಳ ಬಗ್ಗೆ ಬರೆದಿರುವರು.

ಸ್ತ್ರೀಯರನ್ನು ಸಮಾಜದಲ್ಲಿ ಸಮಾಭಾವದಿಂದ ಕಾಣಬೇಕೆಂದು ಪ್ರತಿಪಾದಿಸುವ ಇವರು ಮಹಿಳಾ ಪರ ಬರಹಗಾರರಲ್ಲಿ ಅಪರೂಪದ ಸಾಹಿತಿ ಅಕ್ಕಾ ಡಾ.ಜಗದೇವಿ ತಿಬಶೆಟ್ಟಿಯವರು.

 

ಬಾಲ್ಯ ಜೀವನ

ಹುಮನಾಬಾದ ತಾಲೂಕಿನ ಅತೀ ದೊಡ್ಡ ಗ್ರಾಮ ಹಳ್ಳಿಖೇಡ.

ಶ್ರೀ ಕ್ಷೇತ್ರ ನಾಗೇಶ್ವರ ಮಂದಿರ ದಿಂದ ಪ್ರಸಿದ್ದಿ ಪಡೆದಿದೆ.

ಅದೇರೀತಿ ಪ್ರಪ್ರಥಮ ಶಿವಕೋಟಾಚಾರ್ಯ ವಡ್ಡರದಾನೆ ಕೃತಿ ಬರೆದವರು ಇದೆ ಉರಿನವರು.

 

ಜಗದೇವಿ ತಿಬಶೆಟ್ಟಿಯವರು ಕೂಡ ಹಳ್ಳಿಖೆಡ ಗ್ರಾಮದ ತಿಬಶೆಟ್ಟಿ ಪರಿವಾದವರು.

ಶರಣದಂಪತಿಗಳಾದ ತಂದೆ

ಬಸವಣ್ಣಪ್ಪಾ ತಾಯಿ ಗೋದಾವರಿಯವರ ಮಗಳು ಜಗದೇವಿ.(17.9.1972)

ತಂದೆ ತಾಯಿಯವರ ಸಂಸ್ಕಾರ, ಸಂಸ್ಕೃತಿ, ಅವರ ಆಚಾರ ವಿಚಾರಗಳನ್ನು ಬಳುವಳಿಯಾಗಿ ಬಂದವು.

ಅಪ್ಪಟ ಶರಣ ತತ್ವದ ನಡೆ ನುಡಿಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಇವರ ತಂದೆಯವರು ವೃತ್ತಿಯಲ್ಲಿ *

ಗ್ರಾಮಲೆಕ್ಕಿಗರು ತಮ್ಮ ವೃತಿ ಸೇವೆಯಲ್ಲಿ ನಿಷ್ಠೆಯಿಂದ ಸರಕಾರಿ ಸೇವೆ ಮಾಡಿಸಿಕೊಂಡು ಸೈ ಎನಿಸಿಕೊಂಡು ಸದ್ಯ ನಿವೃತ್ತಿ ಜೀವನ ನಡೆಸುತ್ತಿರುವ ಬಸವಣಪ್ಪನವರು ಕೆಲವು ದಿವಸ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಉಳಿದು ಶರಣರ ಸೇವೆಗೈದ ಶರಣರು.*

 

 

ಶಿಕ್ಷಣ

 

———

ತಂದೆಯವರು ಗ್ರಾಮಲೆಕ್ಕಿಗ ಹುದ್ದೆಯಿಂದ ಮಗಳಾದ ಜಗದೇವಿಯವರ ಶಿಕ್ಷಣ ಒಂದೇ ಕಡೆಯಾಗದೆ ತಮ್ಮ ತಂದೆಯವರ ವರ್ಗಾವಣೆಯಿಂದ ಪ್ರಾಥಮಿಕ ಶಿಕ್ಷಣ ಹಳ್ಳಿಖೆಡ ಹಾಗು ಪ್ರೌಢ ಶಿಕ್ಷಣ ಸ್ವಗ್ರಾಮ ,puc ಬೀದರನಲ್ಲಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸವನ್ನು ಕಲಬುರಗಿ ವಿಶ್ವವಿದ್ಯಾಲಯದಲ್ಲಿ *

ಶರಣರಲ್ಲಿ ದಾಂಪತ್ಯ ದರ್ಶನ ವಿಷಯದ ಮೇಲೆ ಡಾ. ಪಿ. ಕೆ. ಖಂಡೊಬ ಅವರ ಮಾರ್ಗದರ್ಶನದಲ್ಲಿ ಪ್ರಭಂದ ಮಂಡಿಸಿ ಪಿ.ಎಚ್. ಡಿ. ಪಡೆದರು.

 

 

ಚಿಕ್ಕಂದಿನಿಂದಲೆ ಓದಿನಲ್ಲಿ ಚುರಕಾಗಿದ್ದ ಇವರ ಪ್ರೋತ್ಸಾಹಕ್ಕೆ ಬೆನ್ನೆಲುಬಾಗಿ ನಿಂತವರು ಬಾಳಸಂಗಾತಿ ಸಂಜಯ ಮೈನಾಳೆಯವರು.

ಬಸವಶ್ರೀ, ಹಾಗು ವಚನಶ್ರೀ ಇಬ್ಬರು ಮಕ್ಕಳು.

ಬಸವಶ್ರೀ ಸದ್ಯ ಬಿ. ಎ. ಎಂ. ಎಸ್. ಅನ್ನು ಬೀದರನ ಸಿದ್ಧಾರೋಡ ಕಾಲೇಜನಲ್ಲಿ ಓದುತ್ತಿದ್ದೂ, ವಚನಶ್ರೀ ಗುರುನಾನಕ ಪಬ್ಲಿಕ ಶಾಲೆಯಲ್ಲಿ ಓದುತ್ತಿರುವರು.

 

ವೃತಿ

——-

ಡಾ. ಜಗದೇವಿ ತಿಬಶೆಟ್ಟಿಯವರು ವೃತ್ತಿಯಲ್ಲಿ ಉಪನ್ಯಾಸಕಿಯಾಗಿದ್ದು.

1) ಹುಮನಾಬಾದನ ಪ್ರಥಮ ದರ್ಜೆ ಸರ್ಕಾರಿ ಕಾಲೇಜನಲ್ಲಿ ಅತಿಥಿ ಉಪನ್ಯಾಸಕರಾಗಿ (2007-2009).

2) ಬೀದರನ ಕರ್ನಾಟಕ ಕಾಲೇಜನಲ್ಲಿ ಮೂರುವರ್ಷ

3) ಸದ್ಯ ಸ್ನಾತಕೋತ್ತರ ಕೇಂದ್ರ ಹಾಲಹಳ್ಳಿಯಲ್ಲಿ ಕನ್ನಡ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರಿವರು.

 

ಸಾಹಿತ್ಯ ಸೇವೆ

——————–

ಡಾ. ಜಗದೇವಿ ತಿಬಶೆಟ್ಟಿಯವರು ಬಾಲ್ಯದಿಂದಲೆ ಗಂಭೀರ ಸಾಹಿತ್ಯ ವಿದ್ಯಾರ್ಥಿನಿ.

ನಿರಂತರ ಓದನ್ನು ಅವರ ಬದುಕಿನ ಭಾಗವನ್ನು ಮಾಡಿಕೊಂಡು ವೃತಿಯ ಜೊತೆ ಜೊತೆಗೆ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡಿರುವರು.

 

ಬಸವ ಪಥ, ಆಚಾರ ಸತಿ, ಅಕ್ಕಮಹಾದೇವಿ ಕುರಿತು ಲೇಖನಗಳು ಸಾಹಿತ್ಯ ಸಿಂಚನ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟಣೆಗೊಂಡಿವೆ.

ಅನರ್ಘ್ಯ ರತ್ನ, ಕವನ ಸಂಕಲನ ಹಾಗು ಸೋಮನಾಥ ಏಳವಾರ ಸಾಹಿತಿಗಳು ಇವರ ಕುರಿತು ಹೊಂಗಿರಣ ಪುಸ್ತಕವನ್ನು ಹೊರತಂದಿರುವರು.

 

ಹತ್ತು ಹಲವು ವಿಷಯಗಳನ್ನು ಹೊತ್ತಿರುವ ಅನರ್ಘ್ಯ ರತ್ನ ಕೃತಿಯು, ಶರಣ ಧರ್ಮ, ತತ್ವ, ಆದರ್ಶಗಳ ಸುತ್ತಮುತ್ತ ಬರಹ ಮೂಡಿಬಂದಿದೆ. ಹಾಗು ಬೀದರ ಜಿಲ್ಲೆಯ ಜಾನಪದ ಶ್ರೀಮಂತಿಕೆ ಕುರಿತು ಲೇಖನಗಳು ಪ್ರಕಟವಾಗಿವೆ.

 

ಕ್ಯಾತ ವಿಮರ್ಶಕರಾದ ನಾಸಾ ಕವಿಗಳೆಂದು ಖ್ಯಾತನಾಮರಾದ ಯುವ ಬರಹಗಾರ *ನಾಗೇಶ ಸ್ವಾಮಿಗಳು ಅನರ್ಘ್ಯ ರತ್ನ ಕುರಿತು ತಮ್ಮ ಕೃತಿಬಿಂಬ ಪುಸ್ತಕದಲ್ಲಿ ವಿಮರ್ಶೆ ಮಾಡಿರುವರು.

 

ಸಾಹಿತ್ತಿಕ ಹಾಗು ಶೈಕ್ಷಣಿಕ ಚಟುವಟಿಕೆಗಳು

—————————————

ಡಾ. ಜಗದೇವಿಯವರು ಹಲವು ರಾಷ್ಟೀಯ ಸಂಕಿರಣ ಗೋಷ್ಠಿ ರಾಜ್ಯ ಮಟ್ಟದ ಕವಿಗೋಷ್ಠಿ, ಹಾಗು ಶಿಕ್ಷಣಕ್ಕೆ ಸಂಬಂಧ ಪಟ್ಟ, ಸಾಹಿತ್ಯಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರೆದಿರುವರು.

 

ರಾಷ್ಟ್ರೀಯ ಹಾಗು ರಾಜ್ಯಮಟ್ಟದ ವಿಚಾರ ಸಂಕಿರಣ ಇನ್ನಿತರ ಚಟುವಟಿಕೆಗಳು.

 

1) ನೆಷನ್ಲ ಲೆವಲ್ ಸಿಂಪೊಂಸಿಮ್ (ಶ್ರೀಮತಿ, ಚೆನ್ನಮ್ಮ ಬಸಪ್ಪ ಪಾಟೀಲ್ ಆರ್ಟ್ಸ್ ಮತ್ತು ಕಾಮರ್ಸ್ ಪದವಿ ವಿದ್ಯಾಲಯ.

2) ಅಖಿಲ ಭಾರತ ಜಾನಪದ ಸಮ್ಮೇಳನ 2011ಬೀದರ.

3) ಒಸ್ಮಾನಿಯ ಯುನಿವರ್ಸಿಟಿ (ಡಿಪಾರ್ಟ್ಮೆಂಟ್ ಆಫ್ ಕನ್ನಡ )ಹೈದ್ರಾಬಾದ. ಕನ್ನಡ ತತ್ವಪದ ಸಾಹಿತ್ಯ ಕುರಿತು ವಿಚಾರಗೋಷ್ಠಿ.

4) ಬಸವೇಶ್ವರರ ವಚನಗಳಲ್ಲಿ ಸಾಮಾಜಿಕ ಪರಿವರ್ತನೆ ವಿಷಯ ಕುರಿತು ಉಪನ್ಯಾಸ (ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಬಿವಿಬಿ ಕಾಲೇಜು ಬೀದರ)

 

5) ಜಾನಪದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವ್ಹಾನಿತರಾಗಿ ಭಾಗಿ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತಾಶ್ರಯದಲ್ಲಿ )

6) ಕನ್ನಡ ಸಂಶೋಧನ ವಿಧಾನ ಒಂದು ದಿನದ ರಾಜ್ಯ ಕಮ್ಮಟ. ಕರ್ನಾಟಕ ಕಾಲೇಜು ಬೀದರ.

7) ಭಾಷೆ ಕಮ್ಮಟ ಕುರಿತು ಉಪನ್ಯಾಸ(ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ)

8) ಉಪನ್ಯಾಸ (ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಬೀದರ 2011)

8) ನವೋದಯ ವಿಷಯ ಕುರಿತು ಉಪನ್ಯಾಸ (ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಬೀದರ 2013)

9) ಬಸವಣ್ಣನವರ ಸಾಮಾಜಿಕ ಕ್ರಾಂತಿ ಉಪನ್ಯಾಸ(ಬಸವಶ್ವರ ಜಾತ್ರೆ ಮಹೋತ್ಸವ ಬಸವಕಲ್ಯಾಣ2012)

 

10) ಮಹಿಳಾ ಜಾಗೃತಿ ಚಿಂತನೆ ಉಪಸ್ಥಿತಿ (ರಂಗಮಂದಿರ 2013ರ ಘಗು ಹಳಕಟ್ಟಿ ವಚನತ್ಸವ ಸಮ್ಮೇಳನ)

 

11) ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಗಡಿನಾಡು ಘಟಕ ಕನ್ನಡ ರಾಜ್ಯೋತ್ಸವದ ಕಾರೆಕ್ರಮದಲ್ಲಿ ಉಪನ್ಯಾಸ ರಾಷ್ಟ್ರ ಕವಿ ಗೋವಿಂದ ಪೈಯವರ ಕುರಿತು 2013ರಲ್ಲಿ ಸ್ಥಳ :-ಹಾವಗಿ ಸ್ವಾಮಿ ಮಠ ಉದ್ದಗೀರ.

12) ಕರ್ನಾಟಕ ಯಕ್ಷಗಾನ ಬೆಂಗಳೂರನಲ್ಲಿ ಉಪನ್ಯಾಸ.

ಹಾಗು ಬೀದರ ಜಿಲ್ಲೆಯಲ್ಲಿ ನಡೆಯುವ ಎಲ್ಲ ಸಾಹಿತ್ಯದ ಕಾರೆಕ್ರಮದಲ್ಲಿ ಭಾಗಿಯಾಗಿ ಸೈ ಎನಿಸಿಕೊಂಡ ಇವರಿಗೆ ಅನೇಕ ಸಂಘ ಸಂಸ್ಥೆಗಳು ಇವರಿಗೆ ಗೌರವ ಪುರಸ್ಕಾರ ನೀಡಿ ಸನ್ಮಾನಿಸಿವೆ.

ಪ್ರಶಸ್ತಿಗಳು

1) ಸಮಾಜ ಕಲಾ ರತ್ನ ಪ್ರಶಸ್ತಿ (ದೇಶಪಾಂಡೆ ಪ್ರತಿಷ್ಠಾನ 2018)

2) ಕಾವ್ಯ ಕಮಲ ರಾಜ್ಯ ಪ್ರಶಸ್ತಿ

3) ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ (2011)

4) ಕಾವ್ಯ ಶಾರದೆ ರಾಜ್ಯಪ್ರಶಸ್ತಿ (2019 ಕಾಸರಗೋಡು )

5) ಡಾ. ಸರೋಜನಿ ಚೆಲವ ಪ್ರಶಸ್ತಿ (ಚೇತನ ಪ್ರಕಾಶನ ಬೆಂಗಳೂರು )

6) ಸಾಹಿತ್ಯ ರತ್ನ ಪ್ರಶಸ್ತಿ (ಹೂವಿನ ಹಡಗಲಿ )

ಹೀಗೆ ಹಲವಾರು ಪ್ರಶಸ್ತಿ ಗೌರವ ಪುರಸ್ಕಾರಕ್ಕೆ ಪಾತ್ರರಾದ ಇವರು ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಇವರ ಸಾಹಿತ್ಯ ಸೇವೆ ನಿರಂತರ ಸಾಗಲಿ ಇನ್ನಷ್ಟು ಸಮಾಜ ಮುಖಿ ಪುಸ್ತಕಗಳು ಇವರಿಂದ ಪ್ರಕಟವಾಗಲೆಂದು ಹಾರೈಸುವೆ.

ಲೇಖನ ಬರೆದವರು..

ಓಂಕಾರ ಪಾಟೀಲ

ಕಾರ್ಯದರ್ಶಿ :–ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.