ಮಹಾರಾಷ್ಟ್ರ ಕಳ್ಳಭಟ್ಟಿ ಸಾರಾಯಿ ಅಡ್ಡೆಗಳ ಮೇಲೆ ದಾಳಿ

ಔರಾದ್ : ತಾಲೂಕಿನ ಗಡಿಯಲ್ಲಿರುವ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ತಾಂಡ ಹಾಗೂ ಗ್ರಾಮಯೊಂದರಲ್ಲಿ ಕಳ್ಳಭಟ್ಟಿ ತಯಾರಿಕಾ ಕೇಂದ್ರಗಳ ಮೇಲೆ ಈಚೇಗೆ ಔರಾದ್ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಮಹಾರಾಷ್ಟ್ರದ ದೇಗಲೂರ್ ಅಬಕಾರಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದರು. ದೇಗಲೂರ್ ತಾಲೂಕಿನ ಪೂರ್ವ ಬೀಜಲವಾಡಿ ತಾಂಡ ಮತ್ತು ದಕ್ಷಿಣ ಬೀಜಲವಾಡಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆದಿದೆ.

 

ದಾಳಿ ವೇಳೆ ಸಂಗ್ರಹಿಸಿಟ್ಟಿದ್ದ ಸುಮಾರು 10 ಲೀಟರ್ ಕಳ್ಳಭಟ್ಟಿ ಸಾರಾಯಿ, ಭಟ್ಟಿ ಸಾರಾಯಿ ತಯಾರಿಕೆಗಾಗಿ ದಾಸ್ತಾನಿಸಿರುವ 800 ಲೀಟರ್ ಗಳಷ್ಟು ಹುಳಿ ರಸ, ಬೆಲ್ಲ ಹಾಗೂ ಭಟ್ಟಿ ತಯಾರಿಸಲು ಉಪಯೋಗಿಸುವ ಸಲಕರಣೆಗಳು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.

 

ಸ್ಥಳದಲ್ಲಿಯೇ ಬೆಲ್ಲದ ಕೊಳೆ ನಾಶಪಡಿಸಲಾಯಿತು. ಈ ಸಂಬಂಧ ಆರೋಪಿ ಇಬ್ಬರನ್ನು ಬಂಧಿಸಿದ್ದು, ದೇಗಲೂರ್ ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೀದರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಎನ್ . ಸಿ ಪಾಟೀಲ್ ರವರ ನಿರ್ದೇಶನದಂತೆ ಡಿವೈಎಸ್ಪಿ ಆನಂದ ಹುಕಲಿ ಅವರ ನೇತೃತ್ವದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಶಬ್ಬೀರ್ ಬಿರಾದಾರ್, ಡಿಸಿಐಬಿ ದವಲತ್ತರಾಯ, ಹಾಗೂ ಮಹಾರಾಷ್ಟ್ರ ದ ಅಬಕಾರಿ ಅಧಿಕಾರಿ, ಸಿಬ್ಬಂದಿಗಳೊಂದಿಗೆ ದಾಳಿ ಮಾಡಲಾಗಿದೆ.

 

ವರದಿ : ರಾಚಯ್ಯ ಸ್ವಾಮಿ 

error: Content is protected !!