ನಮಗೆ ಅಂಗನವಾಡಿಯೇ ಬೇಕು – ರಮೇಶ ಕಾಂಬಳೆ

ರಾಯಬಾಗ ತಾಲೂಕಿನ ಬಿರಡಿ ಗ್ರಾಮದ ಮೊದಲು ಅಂಗನವಾಡಿ ಇದ್ದ ಸ್ಥಳದಲ್ಲಿ ವ್ಯಾಪಾರ ಮಳಿಗೆಗಳನ್ನು ಕಟ್ಟಲು ಹೊರಟ ಬಿರಡಿ ಗ್ರಾಮ ಪಂಚಾಯಿತಿ. ಹೌದು ವೀಕ್ಷಕರೇ ಗ್ರಾಮ ಪಂಚಾಯತಿಯ ಆದಾಯದ ಉದ್ದೇಶಕ್ಕಾಗಿ ಇಂಥದೊಂದು ಘಟನೆ ರಾಯಬಾಗ ತಾಲೂಕಿನ ಬಿರಡಿ ಗ್ರಾಮ ಪಂಚಾಯಿತಿಯು ವ್ಯಾಪಾರ ಮಳಿಗೆಗಳನ್ನು ಸ್ಥಾಪಿಸಲು ಹೊರಟಿದೆ ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಎಂಬುದನ್ನು ಮರೆತುಬಿಟ್ಟಿದ್ದಾರೆ. ಹೌದು ವೀಕ್ಷಕರೆ ಈ ಅಂಗನವಾಡಿ ಇರುವುದಾದರೂ ಎಲ್ಲಿ ಅಂತೀರಾ ದಲಿತ ಜನರ ಕಾಲನಿಯಲ್ಲಿ ಈ ಅಂಗನವಾಡಿಯು ಸುಮಾರು ವರ್ಷಗಳಿಂದ ಇಲ್ಲೇಇದೆ ಅದು ಇತ್ತೀಚಿನ ದಿನಗಳಲ್ಲಿ ಕೃಷ್ಣಾ ನದಿಯ ಮಹಾಪೂರ ಬಂದಾಗ ಖುಷಿದು ಬಿದ್ದಿತ್ತು ನಂತರ ಈ ಅಂಗನವಾಡಿಯನ್ನು ಸುಮಾರು 8 ರಿಂದ 10 ವರ್ಷಗಳ ಕಾಲ ಬೇರೊಂದು ಕಡೆಗೆ ಸ್ಥಳಾಂತರಿಸಿ ದರು ಹಾಗೂ ಅದೇ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿ ಉಳಿದ ಜಾಗದಲ್ಲಿ ಅಂಗನವಾಡಿ ಕಟ್ಟಲು ಮೀಸಲಿಟ್ಟಿದ್ದರು ಅದನ್ನ ಮರೆತು ಅಧಿಕಾರಿಗಳು ಇವಾಗ ಆದಾಯದ ಉದ್ದೇಶಕ್ಕಾಗಿ ವ್ಯಾಪಾರ ಮಳಿಗೆಗಳನ್ನು ಕಟ್ಟಲು ಹೊರಟಿದ್ದಾರೆ ಎಂದು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ದಲಿತ್ ಕಾಲೋನಿಯ ಅಂಗನವಾಡಿ ನಮಗೆ ಬೇಕು ಡೆಮಾಲಿಶ್ ಮಾಡಿದ ಅಂಗನವಾಡಿ ಕೇಂದ್ರವನ್ನು ಪುನಹ ನಿರ್ಮಾಣ ಮಾಡಬೇಕು ಒಂದು ವೇಳೆ ಅಂಗನವಾಡಿ ಕೇಂದ್ರವನ್ನು ನಿರ್ಮಾಣ ಮಾಡದೆ ಹೋದ್ರೆ ಉಗ್ರ ಹೋರಾಟ ಮಾಡಲಾಗುವುದು ಎಂದು DSS ತಾಲೂಕ ಅಧ್ಯಕ್ಷರಾದ ರಮೇಶ್ ಕಾಂಬಳೆ ಹಾಗೂ ವಿಟೆಕರ್ ಸುದ್ದಿಗೋಷ್ಠಿ ಮಾಡಿ ಅಗ್ರಹಿಸಿದರು.

 

ನಮಗೆ ಕಾಂಪ್ಲೆಕ್ಸ್ ಬೇಡವೇ ಬೇಡ ಅಂಗನವಾಡಿಯೇ ಬೇಕು!!!!!!

 

ಅಕ್ಷರ ಜ್ಞಾನಕಿಂತ ಮಿಗಲಾದದ್ದು ಯಾವುದು ಇಲ್ಲ.

 

ವರದಿ /ಸದಾನಂದ ಎಚ್