ಸುಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರೇವಗ್ಗಿ -ರಟಕಲ್ ಶ್ರೀ ವಿಶ್ವರಾಧ್ಯರ ಪುರಾಣ ಮಹಾಮಂಗಲ ಮತ್ತು ಧರ್ಮ ಸಭೆ ಕಾರ್ಯಕ್ರಮ

ಕಾಳಗಿ : ತಾಲೂಕಿನ ಶ್ರೀಕ್ಷೇತ್ರ ರೇವಣಸಿದ್ದೇಶ್ವರ ದೇವಸ್ಥಾನ ರೇವಗ್ಗಿ ರಟಕಲ್ ಗುಡ್ಡದಲ್ಲಿ ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರಾವಣ ಮಾಸದ ಪ್ರಯುಕ್ತ ದಿನಾಂಕ 24.07.2025 ರಿಂದ 29.8.2025 ರವರೆಗೆ 37 ದಿನಗಳ ಕಾಲ ಪ್ರತಿನಿತ್ಯ ರಾತ್ರಿ 8:30 ಕ್ಕೆ. ಸದ್ಗುರು ಅಬ್ಬೆ ತುಮಕೂರಿನ ಶ್ರೀ ವಿಶ್ವರಾಧ್ಯರ ಮಹಾಪುರಾಣವೂ ಜರುಗಿತು.
ದಿನಾಂಕ 29.08.2025 ರಂದು ಸಾಯಂಕಾಲ 7:00ಗೆ ಶ್ರೀ ವಿಶ್ವರಾಧ್ಯರ ಪುರಾಣ ಮಹಾಮಂಗಲ ಕಾರ್ಯಕ್ರಮ ಮತ್ತು ಧರ್ಮಸಭೆ ಜರುಗಿತು.
ಬೆಳಿಗ್ಗೆ 9:00 ಗಂಟೆಗೆ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಸಂಗೀತ ಮಹಾ ರುದ್ರಾಭಿಷೇಕ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿದ್ದರು.
ಅದೇ ರೀತಿಯಾಗಿ ಈ ಪುರಾಣ ಕಾರ್ಯಕ್ರಮದ ಮಹಾ ಮಂಗಲ ಹಾಗೂ ಧರ್ಮಸಭೆ ಭಾಗವಹಿಸಿ ಶ್ರೀ ಗಳು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಪ್ರತಿವರ್ಷ ಪುರಾಣ ಕಾರ್ಯಕ್ರಮದ ಸೇವೆ ಸಲ್ಲಿಸಿದ ಶ್ರೀ ವೀರಣ್ಣ ಎಸ್ ಗಂಗಾಣಿ ಮತ್ತು ಶ್ರೀ ಬಸವರಾಜ ಎಸ್. ಮಳಪ ರವರು ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಪ್ರತಿವರ್ಷವೂ ಪುಷ್ಪಾಲಂಕಾರ ಮಾಡುತ್ತಿರುವ ಸೇವೆಯನ್ನು ಗುರುತಿಸಿ ಅವರಿಗೆ ಹಾಗೂ ಪುರಾಣಿಕರಿಗೂ ಕೂಡಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳು ವಿರಕ್ತ ಮಠ ಮುಕರಂಬಿ ಹಾಗೂ ಹುಲಸುರ, ಪೂಜ್ಯಶ್ರೀ ವಿಜಯ ಮಾಂತೇಶ್ವರ ಶಿವಾಚಾರ್ಯರು ಹಿರೇಮಠ ಚಿಮ್ಮಾ ಇದಲ್ಲಾಯಿ, ಪೂಜ್ಯ ಶ್ರೀ ಶಾಂತ ಸೋಮಲಿಂಗ ಸೋಮನಾಥ ಶಿವಾಚಾರ್ಯರು ಮಂಗಲಿಗಿ ಹಾಗೂ ಟೆಂಗಳಿ, ಪೂಜ್ಯಶ್ರೀ ಚನ್ನ ರುದ್ರಮುನಿ ಶಿವಾಚಾರ್ಯರು ಸೂಗುರು,ಪೂಜ್ಯ ಶ್ರೀ ರೇವಣಸಿದ್ಧ ಶಿವಾಚಾರ್ಯರು ರೇವಣ ಸಿದ್ದೇಶ್ವರ ಹಿರೇಮಠ ರಟಕಲ್, ಶ್ರೀ ಶರಣ ಶಂಕರ ಲಿಂಗ ದಿಗಂಬರ್ ಮಹಾರಾಜ ತೀರ್ಥಕ್ಷೇತ್ರ ಕಲಮೂಡ, ಪೂಜ್ಯ ಶ್ರೀ ಶಿವಕುಮಾರ್ ಶಿವಾಚಾರ್ಯರು ನಿರ್ನಾಳ ಮತ್ತು ಸಂತ ಪೂಜ್ಯ ಶ್ರೀ ನೀಲಕಂಠ ದೇವರು ರಟಕಲ್, ಪೂಜ್ಯ ಶ್ರೀ ರೇವಣಸಿದ್ಧ ಶರಣರು ಗೌರಿಗುಡ್ಡ ರಟಕಲ್, ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಸದಾಶಿವ ವಗ್ಗೆ ಕಾರ್ಯದರ್ಶಿಗಳು ಮತ್ತು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಏಳು ಊರಿನ ಚಾಜದಾರಿಗಳಾದ ರುದ್ರಶೆಟ್ಟಿ ಗುರುಮಿಠಕಲ್ ರಟಕಲ, ರೇವಣಸಿದ್ದಪ್ಪ ದೇವರಮನಿ ರೇವಗಿ, ಗಂಗಾಧರ್ ಬಸವನಗುಡಿ ರೇವಗಿ, ಶಾಂತಪ್ಪ ಗೌಡ ಪಾಟೀಲ್ ರೇವಗಿ, ಸುಬ್ಬಣ್ಣ ಗೌಡ ಪಾಟೀಲ್ ರಟಕಲ್, ದಯಾಸಾಗರ ಪಾಟೀಲ್ ಬೇಡಸೂರ್, ರೇವಣಸಿದ್ಧ ಪಾಟೀಲ್ ಗೋಣಿಗಿ, ರಾಜಶೇಖರ್ ಪಾಟೀಲ್ ಮುಕರಂಬಿ, ರೇವಣಸಿದ್ದ ಹಡಪದ್ ರೇವಗಿ ಮತ್ತು ವೀರಣ್ಣ ಗಂಗಾಣಿ ರೈತಸೇನೆ ತಾಲೂಕ ಅಧ್ಯಕ್ಷರು ಕಾಳಗಿ, ಬಸವರಾಜ್ ಎಸ್. ಮಳ್ಳಪ್ಪ, ಸುರೇಶ್ ಕಲಶೆಟ್ಟಿ, ನಿಂಗಪ್ಪ ಮಾಸ್ತರ್ ರಾಘ ಗುಂಡನೋರ, ಮಲ್ಲು ಹೂಗಾರ ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಈ ಪುರಾಣ ಕಾರ್ಯಕ್ರಮದ ಮಹಾಮಂಗಲ ಮತ್ತು ಧರ್ಮ ಸಭೆಯಲ್ಲಿ ಭಾಗವಹಿಸಿದರು.

ವರದಿ ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ

error: Content is protected !!