ಕುಸಿದು ಬಿದ್ದ ಲಿಫ್ಟ್… ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿದ್ದ ಬಾಣಂತಿ ಸಾವು

ಉತ್ತರಪ್ರದೇಶ: ಆಸ್ಪತ್ರೆಯ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಕೆಲವೇ ಗಂಟೆಗಳ ಮೊದಲು ಮಗುವಿಗೆ ಜನ್ಮ ನೀಡಿದ ಬಾಣಂತಿ ಮೃತಪಟ್ಟ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ಗುರುವಾರ(ಡಿ.6) ನಡೆದಿದೆ.

 

ಲೋಹಿಯಾ ನಗರದ ಕ್ಯಾಪಿಟಲ್ ಆಸ್ಪತ್ರೆಯಲ್ಲಿ ಕರಿಷ್ಮಾ ಎಂಬ ಮಹಿಳೆ ಗುರುವಾರ ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನೇನು ಕರಿಷ್ಮಾ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಬೇಕು ಎಂದು ಆಸ್ಪತ್ರೆ ಸಿಬಂದಿಗಳು ಅವರನ್ನು ಲಿಫ್ಟ್ ಮೂಲಕ ಕರೆತರುವ ವೇಳೆ ಲಿಫ್ಟ್ ಕೇಬಲ್ ತುಂಡಾಗಿ ಕುಸಿದು ಬಿದ್ದಿದೆ ಪರಿಣಾಮ ಕರಿಷ್ಮಾ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಅಲ್ಲದೆ ಅವರ ಜೊತೆಗಿದ್ದ ಇಬ್ಬರು ಆಸ್ಪತ್ರೆ ಸಿಬಂದಿಗಳು ಗಾಯಗೊಂಡಿದ್ದು ಸುಮಾರು 45 ನಿಮಿಷಗಳ ಕಾರ್ಯಾಚರಣೆ ಬಳಿಕ ಲಿಫ್ಟ್‌ನ ಬಾಗಿಲು ಮುರಿದು ರಕ್ಷಿಸಲಾಯಿತು. ಘಟನೆ ನಡೆದ ತಕ್ಷಣ ಆಸ್ಪತ್ರೆ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ರೋಗಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

 

ಇತ್ತ ಅವಘಡದಿಂದ ಮಹಿಳೆ ಮೃತಪಟ್ಟ ವಿಚಾರ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಕರಿಷ್ಮಾ ಸಂಬಂಧಿಕರು ಆಸ್ಪತ್ರೆಯ ವಸ್ತುಗಳನ್ನು ಪುಡಿಗೈದು ಧ್ವಂಸಗೊಳಿಸಿದ್ದಾರೆ ಇದರಿಂದ ಆಸ್ಪತ್ರೆಯಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು.

error: Content is protected !!