ವೀರಯೋಧ ಮುರಳಿ ನಾಯಕ್ ವೀರಮರಣ ಹೊಂದಿದ ಪ್ರಯುಕ್ತ ಧರ್ಮ ನಾಗರ ತಾಂಡದ ಜನರು ಸೇರಿ ಕ್ಯಾಂಡಲ್ ಮಾರ್ಚ್ ಮುಖಾಂತರ ಭಾವಪೂರ್ಣ ಶ್ರದ್ಧಾಂಜಲಿ
ಚಿಂಚೋಳಿ ತಾಲೂಕಿನ ಧರ್ಮಸಾಗರ ತಾಂಡದಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ತೆಲಂಗಾಣದ ಗೋರಂಟ್ಲಿ ಮಂಡಲದ ಪುಟ್ಟ ಗುಂಡ್ಲಪಲ್ಲಿಯ ತಾಂಡದ ಹೆಮ್ಮೆಯ ವೀರಯೋಧ ಮುರಳಿ ನಾಯಕ್ ವೀರಮರಣ ಹೊಂದಿದ ಪ್ರಯುಕ್ತ ತಾಂಡದ ಎಲ್ಲಾ ಜನರು ಸೇರಿ ಕ್ಯಾಂಡಲ್ ಮಾರ್ಚ್ ಮುಖಾಂತರ ಭಾವಪೂರ್ಣ ಶ್ರದ್ಧಾಂಜಲಿ ಕೋರಿದರು.
ಈ ಸಂದರ್ಭದಲ್ಲಿ ಗೋಪಾಲ ನಾಯಕ, ಚಂದ್ರ ಶೆಟ್ಟಿ ಕಾರಬಾರಿ, ರಮೇಶ ರಾಠೋಡ, ತೇಜು ಚೌಹಾನ, ಖೀರು ಪವಾರ, ಗೇಮು ಪವಾರ, ಅರುಣ ಕುಮಾರ ಪವಾರ, ತಾಂಡದ ಜನರು ಹಾಗೂ ಇತರರು ಉಪಸ್ಥಿತರಿದ್ದರು.