ಶ್ರೀ ಹನುಮಾನ ದೇವಾಲಯ ಚಂದಾಪುರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಂಚೋಳಿ ತಾಲೂಕ ಘಟಕದ ವತಿಯಿಂದ ವಿಶೇಷ ಪೂಜೆ
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದ ಭಾರತೀಯರ ಸಾವಿನ ಪ್ರತಿಯಾಗಿ ಉಗ್ರವಾದಕ್ಕೆ ಉತ್ತೇಜನ ನೀಡುತ್ತಿರುವ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ನುಗ್ಗಿ ಯಶಸ್ವಿ ಕಾರ್ಯಾಚರಣೆ ಮಾಡಿದ ನಮ್ಮ ಭಾರತೀಯ ಸೈನ್ಯಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸಿ ನಮ್ಮ ಸೈನಿಕರ ಸುರಕ್ಷತೆಗೆ ಹಾಗೂ ಅವರ ಒಳಿತಿಗಾಗಿ ಶ್ರೀ ಹನುಮಾನ ದೇವಾಲಯ ಚಂದಾಪುರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಂಚೋಳಿ ತಾಲೂಕ ಘಟಕದ ವತಿಯಿಂದ ವಿಶೇಷ ಪೂಜೆ ಮಾಡಲಾಯಿತು. ಈ ಸಂಧರ್ಭದಲ್ಲಿ ಶರಣು ಪಾಟೀಲ ಮೋತಕಪಳ್ಳಿ, ಜಗದೀಶ ಸಿಂಗ್ ಠಾಕೂರ, ಮಲ್ಲಿಕಾರ್ಜುನ ಪಾಲಾಮೂರ, ನೀಲಕಂಠ ಸಿಳಿನ, ರಾಜೂ ಮುಸ್ತರಿ, ಶಿವು ಸ್ವಾಮಿ, ವೀರೇಶ ಯಂಪಳ್ಳಿ, ಆಕಾಶ ಕೊಳ್ಳುರು, ಸಂತೋಷ, ಇತರರು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್