ಭವ್ಯ ಭಾರತದ ಅಭಿವೃದ್ಧಿಯ ಜನಕ ಅಂಬೇಡ್ಕರ ಅವರು-ಡಾ.ಗಿರೀಶ ಬದೋಲೆ

ಬೀದರ, ಭವ್ಯ ಭಾರತದಲ್ಲಿ ಸಂವಿಧಾನ ಮೂಲಕ ಪ್ರತಿಯೊಬ್ಬರಿಗೂ ಹಕ್ಕುಗಳು, ಕರ್ತವ್ಯಗಳು, ಸಮಾನತೆ, ಭಾವೈಕ್ಯತೆ ಭ್ರಾತೃತ್ವ ನೀಡಿ ಅಸ್ಪೃಶ್ಯತೆ ನಿವಾರಣೆಗೆ ಪರಿಶ್ರಮ ಪಟ್ಟ ಅಂಬೇಡ್ಕರ್ ಅವರು ಮಹಾಮಾನವತಾವಾದಿ ಹಾಗೂ ಭವ್ಯ ಭಾರತದ ಅಭಿವೃದ್ಧಿಯ ಜನಕರಾಗಿದ್ದಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಹೇಳಿದರು.

ಅವರು ಇಂದು ನಗರದ ಅಂಬೇಡ್ಕರ್ ವೃತದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಪಂಚಶೀಲ ಧ್ವಜಾರೋಹಣ ನೆರೆವೆರಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಮಾತನಾಡಿ, ಭಾರತೀಯರಾದ ಪ್ರತಿಯೊಬ್ಬರೂ ಡಾ.ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಪ್ರೀತಿ, ವಿಶ್ವಾಸ ಭಾವೈಕ್ಯತೆ ಮತ್ತು ಶಾಂತಿ ಕಾಪಾಡಿಕೊಂಡು ಅಂಬೇಡ್ಕರ್ ರವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ತಿಳಿಸಿದರು

ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ಭಾರತದ ಪ್ರತಿಯೊಬ್ಬ ನಾಗರಿಕರನ್ನು ಅಂಬೇಡ್ಕರ್ ರವರ ಋಣದಲ್ಲಿ ಜೀವನ ಸಾಗಿಸುತ್ತಿದ್ದಾನೆ. ಅಂಬೇಡ್ಕರ್ ಅವರು ಜ್ಞಾನದ ಶಿಖರವಾಗಿದ್ದಾರೆ ಎಂದರು.

error: Content is protected !!