ಭೂ ದಾಖಲೆ ಇಲಾಖೆಯ ಭೂ ಮಾಪಕ ಸಂತೋಷ ಬೋಗಾರ ಅವರು ರೈತರೊಬ್ಬರಿಂದ ಲಂಚ ಪಡೆಯುವ ವೇಳೆ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಡಗಾಂವ ರೈತ ಮಹ್ಮದ್ ಶೌಕತ್‌ಅಲಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು,
ಜಮೀನು ಸರ್ವೆ ಮಾಡಿ ಫಾರಂ-10 ಕೊಡಲು ಭೂ ಮಾಪಕ ಸಂತೋಷ ಬೋಗಾರ ಅವರು ರೈತ ಶೌಕತಅಲಿ ಅವರ ಬಳಿ ₹ 1.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಪಟ್ಟಣದ ದತ್ತ ಮಂದಿರದ ಬಳಿ ಗುರುವಾರ ₹ 75 ಸಾವಿರ ಮುಂಗಡವಾಗಿ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ’ ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ