ಬೀದರನ ಶಿವ್ ನಗರ ಕಾಲೋನಿಯಲ್ಲಿ ಇರುವ ಉದ್ಯಮಿ ಅಶೋಕ್ ಬಿರಾದರ್ ಅವರ ಮನೆ
ರಾಜ್ಯ ರಾಷ್ಟ್ರದಲ್ಲಿ ಉನ್ನತ ಉದ್ಯಮಿಯ ಪ್ರಶಸ್ತಿ ಪುರಸ್ಕಾರರಾದರು, ಇಂದು ಪರಿಸರ ಪ್ರೇಮಿಯ ಹವ್ಯಾಸ ಅವರಿಗಿದೆ, ತನ್ನ ಜೀವನದಲ್ಲಿ ಎಷ್ಟೆಲ್ಲ ದೊಡ್ಡ ಕೆಲಸ ಕಾರ್ಯದಲ್ಲಿ ತೊಡಗಿದ್ದರು ಗಿಡ ಮರಗಳ ಜೊತೆ ತನ್ನದೇ ವೈಯುಕ್ತಿಕ ವಾಡನಾಟಗಳು ಪ್ರೀತಿ ಹೊಂದಿದ್ದಾರೆ
ಮನೆಯ ಅಂಗಳದಲ್ಲಿ ಗಿಡ ಮರಗಳಿಗೆ ಸೀಮಿತವಾಗಿಟ್ಟ ಜಾಗ ಇಂದು ಪ್ರತಿಯೊಬ್ಬರಿಗೂ ಪರಿಸರ ಉಳಿಸಿಕೊಳ್ಳುವ ಸಂದೇಶ ನೀಡಿದ್ದಾರೆ,
ದೇಶ ವಿದೇಶದಲ್ಲಿದ್ದರೂ ಕೂಡ ಗಿಡ ಮರಗಳಿಗೆ ನೀರು ತಪ್ಪಬಾರದು ಎಂದು ಕೆಲಸದವರಿಗೆ ಖಡಕ್ ಸೂಚನೆ ನೀಡುತ್ತಾರೆ ಜೊತೆಗೆ ವಿಡಿಯೋ ಕಾಲ್ ಮಾಡಿ ಪ್ರತಿಯೊಂದು ಗಿಡ ಮರ ವೀಕ್ಷಣೆ ಮಾಡುತ್ತಿರುತ್ತಾರೆ
ಇದು ಅವರ ಪ್ರತಿದಿನದ ಜವಾಬ್ದಾರಿಯಾಗಿದೆ ಎಂದು ಅಲ್ಲಿನ ಸ್ಥಳೀಯರು ತಿಳಿಸಿದರು,
ಇದರ ಕುರಿತು ವರದಿಗಾರರು ಅವರಿಗೆ ಕೆಲವು ಪ್ರಶ್ನೆ ಕೇಳಲು ತೊಡಗಿದ್ದಾಗ ಅವರ ಹೇಳಿಕೆಗಳು ಬಹಳ ಸುಂದರವಾಗಿದ್ದವು.
ಮನುಷ್ಯ ಇಂದು ಬದುಕುಳಿದಿರುವುದು ಉಸಿರಿನಿಂದ ಮಾತ್ರ ಉಸಿರು ಆಡಿದ್ರೆ ಮಾತ್ರ ನಮ್ಮ ದೇಹ ಚನಾಗಿರುವುದು ಇಲ್ಲವಾದಲ್ಲಿ ದೇಹ ಕುಸಿಯುವುದು ಗ್ಯಾರಂಟಿ,ಉಸಿರಾಡುವ ಸ್ವಾಸ ಕೂಡ ಮನುಷ್ಯನಿಗೆ ಆರೋಗ್ಯ ಹೆಚ್ಚಿಸುತ್ತದೆ,ತಂಗಾಳಿಯ ಸಂಜೆಯ ಮಧ್ಯನದ ಹೀಗೆ ಹತ್ತು ಹಲವಾರು ಗಾಳಿಯಲ್ಲಿ ಮನುಷ್ಯನಿಗೆ ರಾಸಾಯನಿಕ ದಿoದ ಬರುವ ಗಾಳಿ ಮತ್ತು ಮಾಲಿನ್ಯ ತಡೆದು ಇಂದು ಪರಿಸರ ಗಿಡ ಮರಗಳು ನಮಗೆ ಶುದ್ಧ ಗಾಳಿ ನೀಡುವುದು ಜೊತೆಗೆ ಸುಂದರ ವಾತಾವರಣ ನೀಡುತ್ತದೆ ಇದು ಪ್ರತಿಯೊಬ್ಬರು ಅವರ ಜೀವನದಲ್ಲಿ ಅರಿತುಕೊಳ್ಳಬೇಕು, ಒಂದು ಗಿಡ ಮರ ಒಣಗಿ ಹೋಗಿದ್ದಾರೆ ಅದರ ಬದಲು ಹತ್ತು ಗಿಡಗಳು ನಾವು ನೆಟ್ಟಿಸಬೇಕ್ಕೆನ್ನು ಗುರಿ ನಮ್ಮದಗಿಸಬೇಕು ಇದು ಮುಂದಿನ ಪೀಳಿಗೆಗೆ ಅತೀ ಉತ್ತಮ ಆರೋಗ್ಯಕರವಾಗಿದೆ ಇಲ್ಲವಾದಲ್ಲಿ ನಾನಾ ರೀತಿಯ ಗಾಳಿಯಲ್ಲಿ ಬರುವ ದ್ರವ್ಯಗಳು ರಾಸಾಯನಿಕ ವಿಷಕಾರಿ ಅನಿಲ ಮುಖಾಂತರ ಶ್ವಾಸಕೋಶದಲ್ಲಿ ವಿಷಕರಿಯಾಗಿ ಜನ ಜೀವಕರಿಗೆ ಆಯುಷ್ ಕಮ್ಮಿ ಆಗುವ ಸಾಧ್ಯತೆಗಳು ಉಂಟಾಗುತ್ತದೆ,
ಮನುಷ್ಯನ ಆಯುಷ ಬರುತ್ತಾ ಬರುತ್ತಾ ಕಮ್ಮಿ ಆಗ್ತಿರುವುದು ನಾವು ಪರಿಸರದ ಕಾಳಜಿ ಕಮ್ಮಿ ಮಾಡಿರುವುದರಿಂದ, ಇಂದು ಎಲ್ಲಂದರಲ್ಲಿ ಬೆಟ್ಟ ಗುಡ್ಡ ಒಡೆದು ಗಿಡ ಮರಗಳು ಕಡಿತಿರುವುದು ಸುದ್ದಿ ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ ಒಳ್ಳೆ ಭೂಮಿಗಳನ್ನು ಅಗಳಿ ಆಲ್ಲಿ ದೊಡ್ಡ ದೊಡ್ಡ ಹಿಮರಾತ್ ಗಳು ಕಟ್ಟುತ್ತಿದ್ದಾರೆ ಅದರ ಜೊತೆಗೆ ಪರಿಸರಕೆ ಹಾನಿಯಾಗುತ್ತಿದ್ದೆ, ಬರುವ ದಿನಗಳಲ್ಲಿ ಶುದ್ಧ ಗಾಳಿ ಸಿಗುವುದು ಬಹಳ ಅಪರೂಪ ಎನ್ನುವುದರಲ್ಲಿ ಎರಡನೇ ಮಾತೇ ಇಲ್ಲ, ಮುಂದೊದು ದಿನ ಪರಿಸರ ಹಾಳಗುವುದರಿಂದ ಮನುಷ್ಯನಿಗೆ ಉಸಿರಾಡುವುದು ಬಹಳ ಕಷ್ಟಕರವಾಗುತ್ತದೆ ಇಂದು ಈಶ್ವರ ಬಿ ಖಂಡ್ರೆ ಸನ್ಮಾನ್ಯ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಕರ್ನಾಟಕ ಸರ್ಕಾರ ಹಾಗೂ ಬೀದರ್ ಉಸ್ತವರಿಗಳು ಅವರು ಕೂಡ ಪ್ರತಿಯೊಂದು ಕಾರ್ಯಕ್ರಮದಲ್ಲಿ ಗಿಡ ಮರಗಳ ಉಳಿವಿನ ಹಾಗೂ ನೆಡುವ ಸಂರಕ್ಷಣೆಯ ಬಗ್ಗೆ ಹೇಳುತ್ತ ಇದ್ದಾರೆ ಗಿಡ ಮರ ಪರಿಸರ ಎಷ್ಟು ಮುಖ್ಯ ಎಂಬುವುದು ಕಾಳಜಿ ವಹಿಸಿ ಸರ್ಕಾರದ ಏನೆಲ್ಲಾ ಅನುದಾನ ಅದಕ್ಕೆ ಬೇಕಾಗುತ್ತದೆ ಅದನೆಲ್ಲಾ ಅವರು ಇಂದು ತೊಂದರೆಯಾಗದ ಹಾಗೆ ನೀಡುತ್ತಿದ್ದಾರೆ. ಆದರೆ ಪರಿಸರ ಸಂರಕ್ಷಣೆ ಕೆಲಸ ಬರಿ ಸರ್ಕಾರದ ಅಲ್ಲಾ ನಾವು ನೀವು ಎಲ್ಲೇ ಗಿಡ ಮರಗಳು ಹಾಳಾಗುವುದನ್ನು ಕಂಡರೆ ಅದಕ್ಕೆ ಸಂಭಂಧಿಸಿದ ಕಚೇರಿಗೆ ಮಾಹಿತಿ ನೀಡಿ ಮತ್ತು ಅನಧಿಕೃತವಾಗಿ ಗಿಡಗಳನ್ನು ನಾಶ ಮಾಡುತ್ತಿದ್ದಾರೆ ಕಡಿತ ಇದ್ದಾರೆ ದೂರು ನೀಡಿ ಎಂದು ತಿಳಿಸಿ ಪ್ರತಿಯೊಬ್ಬರ ಧರ್ಮ ಹಾಗೂ ಜವಾಬ್ದಾರಿಯಾಗಿದೆ ಹತ್ತು ಗಿಡ ಹಚ್ಚುವ ಬದಲು ಒಂದು ಗಿಡ ಹಚ್ಚಿ ಅದನ್ನೇ ರಕ್ಷಣೆ ಮಾಡಿ ನೋಡಿಕೊಳ್ಳುವುದು ಬಹಳ ಉತ್ತಮ ಹೆಸರಿಗೆ ಮಾತ್ರ ಹತ್ತು ಗಿಡ ನೆಡುವ ಬದಲು ಒಂದು ಗಿಡನ ನೆಟ್ಟಿ ಅದನ್ನೇ ಬೆಳೆಯುವ ತನಕ ನೋಡಿಕೊಂಡು ಬೆಳಿಸಿದರೆ ನಮ್ಮ ಜೀವನ ಸಾರ್ಥಕ ಎಂದು ಹಿತ ನುಡಿ ನುಡಿದರು.
ವರದಿ : ಪ್ರದೀಪ್ ಕುಮಾರ್ ದಾದನೂರ್