2024-25ನೇ ಸಾಲಿನ ಶಾಸಕರ ಸಮಿತಿ ಉದ್ಯೋಗಿನಿ ಯೋಜನೆಯಡಿ ಸೇವಾ ಸಿಂಧು ಜಾಲತಾಣದಲ್ಲಿ ಆನ್ಲೈನ್ ಅರ್ಜಿಗಳ ಆಹ್ವಾನ 

ವ್ಯವಸ್ಥಾಪಕ ನಿರ್ದೇಶಕರು ಕ.ರಾ.ಮ.ಅ.ನಿಗಮ ಬೆಂಗಳೂರು ರವರ ನಿಗಮದ ಯೋಜನೆಗಳ ಪತ್ರಿಕಾ ಪ್ರಕಟನೆ ಅನ್ವಯ.

ಕಲಬುರ್ಗಿ :  2024-25 ನೇ ಸಾಲಿನ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು ರವರಿಂದ ಶಾಸಕರ ಸಮಿತಿ ಉದ್ಯೋಗಿನಿ ಯೋಜನೆಯಡಿ ಮತಕ್ಷೇತ್ರವಾರು ಅರ್ಜಿಗಳನ್ನು ರಾಜ್ಯ ಮಟ್ಟದಲ್ಲಿ ಸೇವಾ ಸಿಂಧು ಜಾಲತಾಣದಲ್ಲಿ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಮಹಿಳೆಯರು ದಿನಾಂಕ:21.08.2024 ರಿಂದ 21.09.2024 ರವರೆಗೆ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಸೇವಾಸಿಂಧು ಜಾಲತಾಣ https://sevasindhu.karnataka.gov.in website ನಲ್ಲಿ ಸಲ್ಲಿಸಬಹುದಾಗಿದೆ.

ಉದ್ಯೋಗಿನಿ ಯೋಜನೆಯಡಿ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದ ಬಗ್ಗೆ ಹಾಗೂ ಕೊನೆಯ ದಿನಾಂಕ ನಿಗದಿ ಕುರಿತು ತಮ್ಮ ತಾಲೂಕು ವ್ಯಾಪ್ತಿಗೊಳಪಡುವ ಶಾಸಕರನ್ನು ಹಾಗೂ ಎಲ್ಲಾ ಜನಪ್ರತಿನಿಗಳಿಗೆ ವೈಯುಕ್ತಿಕವಾಗಿ ಭೇಟಿ ಮಾಡಿ ಮಾಹಿತಿ ಸಲ್ಲಿಸತಕ್ಕದ್ದು ಹಾಗೂ ಸ್ವೀಕೃತಿಯನ್ನು ಜಿಲ್ಲಾ ಕಛೇರಿಗೆ ಸಲ್ಲಿಸುವುದು. “ಆನ್ಲೈನ್ ಅರ್ಜಿಗಳನ್ನು ಸಲ್ಲಿಸಿದವರೂ ಮಾತ್ರ ಆಯ್ಕೆಗೆ ಅರ್ಹರಾಗಿದ್ದು, ಯಾವುದೇ ಕಾರಣಕ್ಕೂ, ಆನ್ಲೈನ್ ಅರ್ಜಿ ಸಲ್ಲಿಸದಿರುವವರನ್ನು ಆಯ್ಕೆ ಮಾಡಲು ಅವಕಾಶವಿಲ್ಲ.

ಒಂದು ವೇಳೆ ಫಲಾನುಭವಿಗಳು ಸರ್ಕಾರದ ವಿವೇಚನಾಕೋಟಾ ಅಥವಾ ನಿಗಮದ ಕೋಟಾದಡಿಯಲ್ಲಿ ಸೌಲಭ್ಯ ಪಡೆಯಲ್ಲಿಚ್ಚಿಸಿದ ಅರ್ಜಿದಾರರು ಸಚಿವರು/ಶಾಸಕರು/ನಿಗಮದ ಅಧ್ಯಕ್ಷರು ಕ.ರಾ.ಮ.ಅ.ನಿಗಮ ರವರ ಶಿಫಾರಸ್ಸು ಪತ್ರವನ್ನು ಪಡೆದು ಸೇವಾ ಸಿಂಧು ಜಾಲತಾಣದಲ್ಲಿ ಅರ್ಜಿಸಲ್ಲಿಸುವುದು. ಬ್ಯಾಂಕ ಖಾತೆಗೆ ಆಧಾರ ಕಾರ್ಡ ಜೋಡನೆ ಕಡ್ಡಾಯವಾಗಿದೆ. ಹಿಂದಿನ ಸಾಲಿನಲ್ಲಿನ ಉದ್ಯೋಗಿನಿ ಮಾರ್ಗಸೂಚಿಯನ್ವಯ ಅನುಷ್ಟಾನಗೊಳಿಸುವುದು. ನಿಯಮಗಳಲ್ಲಿ ಯಾವುದೇ ಮಾರ್ಪಾಡುಗಳು ಇರುವುದಿಲ್ಲ.”ಆಧಾರ ಜೋಡನೆ ಕಡ್ಡಾಯ ಇರುವ ಕಾರಣ ಉದ್ಯೋಗಿನಿ ಯೋಜನೆಯಡಿ ಅರ್ಜಿದಾರರು 02 ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ”.

ಆಸಕ್ತ ಮಹಿಳೆಯರು ಉದ್ಯೋಗಿನಿ ಯೋಜನೆಡಿ ಅರ್ಜಿ ಸಲ್ಲಿಸಲು ಆಸಕ್ತರು ದಿನಾಂಕ: 21.08.2024 00 21.09.2024 ថ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರದಲ್ಲಿ ಸೇವಾಸಿಂಧು ಜಾಲತಾಣ https://sevasindhu.karnataka.gov.in ದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 2024-25 ನೇ ಸಾಲಿನ ಉದ್ಯೋಗಿನಿ ಯೋಜನೆಯ ಕ್ರಿಯಾ ಯೋಜನೆಯನ್ನು ಪತ್ರದೊಂದಿಗೆ ಲಗತ್ತಿಸಿ ಕಳುಹಿಹಿಸುತ್ತಿದ್ದು, ಪತ್ರಿಕಾ ಪ್ರಕಟನೆಯನ್ನು ತಾಲೂಕು ಪಂಚಾಯತ ಕಛೇರಿ, ತಹಸೀಲ್ದಾರರ ಕಛೇರಿ ಹಾಗೂ ಶಾಸಕರ ಕಛೇರಿ ಸೂಚನಾ ಫಲಕಗಳಲ್ಲಿ ಹಾಕುವುದರ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ಪ್ರಕಟಣೆ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರ್ಗಿ.

error: Content is protected !!