ಕಾನೂನಿನ ಅರಿವು ಅಗತ್ಯ,ಪಿಎಸ್ಐ ಯತೀಶ್ ಉಪ್ಪಾರ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಕೂಡಗಿ ಎನ್ ಟಿ ಪಿ ಸಿ ಪೊಲೀಸ್ ಠಾಣೆಯ ಪಿಎಸ್ಐ ಯಾದ ಯತೀಶ್ ಉಪ್ಪಾರರವರು ತೆಲಗಿ ಹತ್ತಿರದ ಹದಿನೆಂಟನೆಯ ಕ್ರಾಸ್ ನಲ್ಲಿ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಮಾತನಾಡಿ ಅನಾವಶ್ಯಕ ಪೊಲೀಸ್ ಅಧಿಕಾರಿ ನಾವು, ನೀವು ಅರೆಸ್ಟ್ ಆಗಿದ್ದೀರಾ ಎಂದು ವಿಡಿಯೋ ಕರೆಗಳು ಬಂದರೆ ಯಾರು ಹೆದರುವ ಅವಶ್ಯಕತೆ ಇಲ್ಲ,ಕೂಡಲೇ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿ ಮತ್ತು ಯಾರಾದರೂ ಅನುಮಾಸ್ಪದ ವ್ಯಕ್ತಿಗಳ ಓಡಾಟ ಕಂಡು ಬಂದರೆ 112 ಕರೆಮಾಡಿ,ನಮಗೆ ಸಂಪರ್ಕ ಮಾಡಿ ಹಾಗೂ ಚಾಲಕರು ಅತಿಯಾದ ವೇಗವಾಗಿ ವಾಹನ ಚಲಾವಣೆ ಮಾಡಬೇಡಿ, ಎಲ್ಲರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಹಾಗೂ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕ್ಕೊಂಡು ಪ್ರಯಾಣ ಬೆಳೆಸಿ ಎಂದು ಸಂಚಾರಿಗಳಿಗೆ ಹಾಗೂ ಅಲ್ಲಿನ ಸಾರ್ವಜನಿಕರಿಗೆ ತಿಳಿಹೇಳಿದರು.

error: Content is protected !!