ಅಮರೇಶ್ವರ ದೇವಸ್ಥಾನದಲ್ಲಿ ಶಾಸಕ ಪ್ರಭು ಚವ್ಹಾಣರಿಂದ ವಿಶೇಷ ಪೂಜೆ

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಫೆ.25ರಂದು ಔರಾದ(ಬಿ) ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ಹೋಮ-ಹವನಗಳನ್ನು ನೆರವೇರಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.

ಉತ್ತರ ಪ್ರದೇಶದ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಿAದ ತಂದಿರುವ ಪವಿತ್ರ ಗಂಗಾಜಲದಿAದ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಅಲ್ಲಿಂದ ತರಲಾದ ವಿಶೇಷ ಪ್ರವಾದವನ್ನು ದೇವಸ್ಥಾನಕ್ಕೆ ಸಮರ್ಪಿಸಿದರು. ಬಳಿಕ ಭಕ್ತಿಯಿಂದ ಹೋಮ-ಹವನಗಳನ್ನು ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳು ಕೂಡುವ ತ್ರೀವೇಣಿ ಸಂಗಮದಲ್ಲಿ ಪವಿತ್ರಸ್ನಾನ ಮಾಡಿದ್ದು, ತ್ರಿವೇಣಿ ಸಂಗಮದಿAದ ಪವಿತ್ರ ಗಂಗಾಜಲ ಮತ್ತು ವಿಶೇಷ ಪ್ರಸಾದವನ್ನು ತಂದಿದ್ದು, ದೇವರಿಗೆ ಸಮರ್ಪಿಸಿ ಪೂಜೆ ನೆರವೇರಿಸಿದ್ದೇನೆ. ನಾಡಿನ ಒಳಿತಿಗಾಗಿ, ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳ ಸಮೃದ್ಧಿ, ಜನತೆಯ ಸುಖ, ಶಾಂತಿ, ನೆಮ್ಮದಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ಔರಾದನ ಆರಾಧ್ಯದೈವ, ಉದ್ಭವಲಿಂಗ ಅಮರೇಶ್ವರ ಜಾತ್ರೆ ಐತಿಹಾಸಿಕ ಜಾತ್ರೆಯಾಗಿದೆ. ಪುಣ್ಯಕ್ಷೇತ್ರವಾಗಿರುವ ಅಮರೇಶ್ವರ ದೇವಸ್ಥಾನ ಪುರಾತನ ಮತ್ತು ಐತಿಹಾಸಿಕ ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿ ಪ್ರತಿ ವರ್ಷದಂತೆ ಜಾತ್ರಾ ಮಹೋತ್ಸವ ಆರಂಭಗೊAಡಿದ್ದು, ಈ ವರ್ಷವೂ ಅದ್ದೂರಿಯಾಗಿ ನಡೆಯಲಿದೆ. ಕರ್ನಾಟಕ ಸೇರಿದಂತೆ ತೆಲಂಗಾಣಾ, ಮಹಾರಾಷ್ಟçದಿಂದ ಬಹಳಷ್ಟು ಭಕ್ತಾದಿಗಳು ಆಗಮಿಸುತ್ತಾರೆ. ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳ ಅಸಂಖ್ಯಾತ ಭಕ್ತರು ಆಗಮಿಸಿ ಪುನೀತರಾಗುತ್ತಾರೆ.

ಜಾತ್ರೆ ಯಶಸ್ವಿಯಾಗಿ ನಡೆಸಲು ತಾಲ್ಲೂಕು ಆಡಳಿತದಿಂದ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಜಾತ್ರೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಕೊರತೆಗಳಾಗದಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅಮರೇಶ್ವರರ ಮೊರೆ ಹೋಗುವ ಭಕ್ತರ ಎಲ್ಲ ಸಂಕಷ್ಟಗಳು ನಿವಾರಣೆಯಾಗುತ್ತವೆ. ಇಷ್ಟಾರ್ಥಗಳೆಲ್ಲ ಈಡೇರುತ್ತವೆ. ಹಾಗಾಗಿ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸಬೇಕೆಂದು ಶಾಸಕರು ಕೋರಿದ್ದಾರೆ.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸರುಬಾಯಿ ಘೂಳೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಮಾರುತಿ ಚವ್ಹಾಣ, ಶಿವರಾಜ ಅಲ್ಜಾಜೆ, ದಯಾನಂದ ಘೂಳೆ, ಸಂತೋಷ ಪೋಕಲವಾರ, ಕೇರಬಾ ಪವಾರ್, ಸಂಜು ವಡೆಯರ್, ಗುಂಡಪ್ಪ ಮುಧಾಳೆ, ಬಸವರಾಜ ಹಳ್ಳೆ, ಸಂದೀಪ ಪಾಟೀಲ, ಸಿದ್ರಾಮಪ್ಪ ನಿಡೋದೆ, ಜೈಪಾಲ ರಾಠೋಡ, ಡಾ.ಬಾಬುರಾವ ಔರಾದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದೇವಸ್ಥಾನದ ಪೂಜಾರಿಗಳಾದ ರವೀಂದ್ರ ಸ್ವಾಮಿಯವರ ನೇತೃತ್ವದಲ್ಲಿ ಪೂಜೆ, ಅಭಿಷೇಕ, ಅರ್ಚನೆ ಮತ್ತು ಅಂತೇಶ್ವರ ಮಹಾರಾಜರ ನೇತೃತ್ವದಲ್ಲಿ ಹೋಮ-ಹವನಗಳನ್ನು ನಡೆದವು. ಬಳಿಕ ಶಾಸಕರು ದೇವಸ್ಥಾನದ ಆವರಣದಲ್ಲಿ ಪ್ರಸಾದ ವಿತರಣೆ ಸ್ಥಳಕ್ಕೆ ತೆರಳಿ ತಮ್ಮ ಕೈಯಿಂದ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.

error: Content is protected !!