ಔರಾದ್ : ಸ್ತ್ರೀಯರು ಶಿಕ್ಷಣ ಪಡೆದಷ್ಟು ಸಮಾಜ ಸದೃಢವಾಗುತ್ತದೆ. ಎಲ್ಲಿ ಸ್ತ್ರೀಗೆ ಪೂಜಿಸಲ್ಪಡುವಳೋ ಆ ನಾಡು ಸಮೃದ್ಧ ಮತ್ತು ನೈತಿಕತೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ಪಟ್ಟಣ ಪಂಚಾಯತ ಅಧ್ಯಕ್ಷೆ ಸರುಬಾಯಿ ಘೂಳೆ ಹೇಳಿದರು. ಪಟ್ಟಣದ ಎಂ. ನಾಮದೇವರಾವ ತಾರೆ ಶಾಲೆಯಲ್ಲಿ ಈಚೇಗೆ ನಡೆದ 8ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಬೆಲೆ ಬಾಳುವ ವಸ್ತ್ರ ಹಾಗೂ ಒಡವೆ ಧರಿಸಿದರೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಲಭಿಸುವುದಿಲ್ಲ. ಸಾಧನೆಯಿಂದ ಮಹಿಳೆಯರಿಗೆ ಘನತೆ ಲಭಿಸುತ್ತದೆ. ಮಹಿಳೆಯರು ಜೀವನದಲ್ಲಿ ಯಾವುದೇ ಸಂಕಷ್ಟ ಎದುರಾದರೂ ಎದೆಗುಂದಬಾರದು. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುವ ಮನೋಬಲ ರೂಢಿಸಿಕೊಳ್ಳಬೇಕು’ ಎಂದರು.
ಹೆಣ್ಣು- ಗಂಡು ಎಂಬ ಭೇದಭಾವ ಮಾಡಬಾರದು. ಇಬ್ಬರು ಎರಡು ಕಣ್ಣುಗಳಿದ್ದಂತೆ, ಬಂಡಿಯ ಎರಡು ಗಾಲಿಗಳಿದಂತೆ ಆದ್ದರಿಂದ ಹೆಣ್ಣು ಮಕ್ಕಳಿಗೂ ಪಾಲಕರು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಎಮ್ ಎನ್ ಟಿ ಶಾಲೆ ಪಟ್ಟಣದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದೆ. ಇಲ್ಲಿಯ ಬಡವರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ ಮಾತನಾಡಿ, ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಗಳಿಸಲು ಶಿಕ್ಷಣ ಅತ್ಯವಶ್ಯ. ಆ ನಿಟ್ಟಿನಲ್ಲಿ ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮೀಬಾಯಿ ತಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಸಾಪ ತಾಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ನಾಗಸೇನ ತಾರೆ ಪ್ರಾಸ್ತವಿಕ ಮಾತನಾಡಿದರು. ಕು. ಅಂಜಲಿ ಉತ್ತಮ, ಕು. ಪುನಂ ಭೂತಾಳೆ ಶಾಲೆಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಸಂಸ್ಥೆಯ ಮುಖ್ಯಸ್ಥೆ ಜ್ಯೋತಿ ಎನ್. ತಾರೆ, ಎಂ.ಜಿ ಶಾಲೆಯ ಮುಖ್ಯಗುರು ಲಿಂಗರಾಜ ಭಾಲ್ಕೆ, ಸುನಿತಾ ಖರತ್, ಶಿಕ್ಷಕ ಗೌತಮ ತಾರೆ, ದಿಲೀಪ ತಾರೆ, ಮಹಾದೇವಿ, ಶಿಕ್ಷಕರಾದ ಚೈತನ್ಯ ಗಜರೆ, ಹೇಮಾ ಖರಾಬೆ, ಪಲ್ಲವಿ ಕಾಂಬಳೆ, ಅಂಬಿಕಾ ಸಿರಂಜೆ, ಸುಧೀರ್, ಐಶಾ ಸಬಾ, ಮುಸ್ಕಾನ್, ಸುಜತಾ, ಭಾಗ್ಯಶ್ರೀ ದ್ಯಾಡೆ, ಸುಧಾ ಚಿಮ್ಮಾ, ಸಚಿನ, ಸಂದೀಪ, ಬಾಲಾಜಿ ಗಜರೆ, ನಾಗಮೀಣಿ ಸ್ವಾಮಿ, ಸುರೇಖಾ ಸೇರಿದಂತೆ ಅನೇಕರಿದ್ದರು.
ಮುಖ್ಯಗುರು ದೀಪಕ ಕಾಂಬಳೆ ಸ್ವಾಗತಿಸಿದರು. ನೀಲಾವತಿ ರಂಜಿರೆ ನಿರೂಪಿಸಿದರು. ನಂದಿನಿ ಭಾಲ್ಕೆ ವಂದಿಸಿದರು. ಶಿಕ್ಷಕಿ ಜೈಶ್ರೀ ಸಣ್ಣಮಣೆ ಅವರು ಹಾಡಿದ ಹಾಡಿಗೆ ಚಪ್ಪಾಳೆ ಹಾಕುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಕಣ್ಮನ ಸೆಳೆಯಿತು.
ವರದಿ : ರಾಚಯ್ಯ ಸ್ವಾಮಿ