ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಮುಂದಾದ ಕರವೇ ಕಾರ್ಯಕರ್ತರು

ಅಥಣಿ ಈಗಾಗಲೆ ಬೇಸಿಗೆ ಕಾಲ ಪ್ರಾರಂಭವಾಗಿದ್ದು ಬಿಸಿಲಿನ ತಾಪಮಾನ ದಿನದಿನಕ್ಕೆ ಹೆಚ್ಚುತ್ತಿದೆ.
ಈ ಸಮಯದಲ್ಲಿ ಪ್ರತಿನಿತ್ಯ ಅಥಣಿ ಪಟ್ಟಣಕ್ಕೆ ವಿವಿಧ ಗ್ರಾಮಗಳಿಂದ ಆಗಮಿಸುವ ಜನರಿಗೆ ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ಉಪಯೋಗವಾಗಲೆಂದು ಪರಿಶುಧ್ಧವಾದ ಕುಡಿಯುವ ನೀರು ಒದಗಿಸಲು ಕರ್ನಾಟಕ ರಕ್ಷಣಾ ವೇದಿಕೆಯ ಹೆಚ್ ಶಿವರಾಮೇಗೌಡರ ಬಣದ ಕಾರ್ಯಕರ್ತರು ಮುಂದಾಗಿದ್ದಾರೆ.
ಸ್ವಂತ ಖರ್ಚಿನಲ್ಲಿ ಪಟ್ಣಣದ ಶೀವಯೋಗಿ ವೃತ್ತದಲ್ಲಿ ಗೂಡಂಗಡಿ ನಿರ್ಮಿಸಿ ಅದರಲ್ಲಿ ತಂಪು ತಂಪಾದ ನೀರನ್ನು ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲಮಾಡಿಕೊಟ್ಟಿದ್ದಾರೆ. ಕನ್ನಡಪರ ಹೋರಾಟದ ಜೋತೆಗೆ ಸಮಾಜಮುಖಿ ಕಾರ್ಯಕ್ಕೆ ಮುಂದಾದ ಕರವೇ ಕಾರ್ಯಕರ್ತರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದೆ ವೇಳೆ ಕರವೇ ತಾಲೂಕಾಧ್ಯಕ್ಷರಾದ ಉದಯ ಮಾಕಾನಿ, ಜಗನ್ನಾಥ್ ಬಾಮನೆ
,ಅನ್ನಸಾಹೇಬ ತೇಲಸಂಗ, ಸಿದ್ದು ಹಂಡಗಿ, ಅನಿಲ್ ಒಡೆಯರ್, ವಿನಯ್ ಪಾಟೀಲ್, ಕುಮಾರ್ ಬಡಿಗೇರ್, ರಾಜು ತಂಗಡಿ ಉಪಸ್ಥಿತರಿದ್ದರು.

ವರದಿ : ಭರತೇಶ್ ನಿಡೋಣಿ

error: Content is protected !!