ಸೌದಿ ಮರುಭೂಮಿಯ ಬಿಸಿಲಿನ ತಾಪಕ್ಕೆ ಆಹಾರ ಮತ್ತು ನೀರಿಲ್ಲದೆ ಪರದಾಡಿದ ಇಬ್ಬರು ಬಲಿ

ಸೌದಿ ಅರೇಬಿಯಾದ ದೂರಸಂಪರ್ಕ ಕಂಪನಿಯಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ತೆಲಂಗಾಣದ ಕರೀಂನಗರದ ನಿವಾಸಿ ಮೊಹಮ್ಮದ್ ಶೆಹಜಾದ್ ಖಾನ್ ರಬ್ ಅಲ್ ಖಲಿ ಮರುಭೂಮಿಯಲ್ಲಿ ಮೃತಪಟ್ಟಿದ್ದಾರೆ.

 

27 ವರ್ಷದ ಯುವಕ ಮೊಹಮ್ಮದ್ ಶೆಹಜಾದ್ ಖಾನ್ ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾದ ಮರುಭೂಮಿಯ ನಿರ್ಜನ ಪ್ರದೇಶದಲ್ಲಿ ನಿರ್ಜಲೀಕರಣ ಮತ್ತು ಬಳಲಿಕೆಯಿಂದ ಅಸು ನೀಗಿದ್ದಾನೆ ಎಂದು ತಿಳಿದು ಬಂದಿದೆ.

 

ಶೆಹಜಾದ್ ಖಾನ್ ಗೆ ಜಿಪಿಎಸ್ ಸಿಗ್ನಲ್ ಲಭಿಸದೆ ಆತ ಸುಡಾನ್ ಪ್ರಜೆಯೊಂದಿಗೆ ದಾರಿ ತಪ್ಪಿ ಮುಂದೆ ಹೋಗಿದ್ದಾನೆ. ಇಷ್ಟರಲ್ಲಿ ಮೊಬೈಲ್‌ ಬ್ಯಾಟರಿ ಖಾಲಿಯಾಗಿ ಆಫ್‌ ಆಗಿದೆ. ಇಬ್ಬರೂ ಸಹಾಯಕ್ಕಾಗಿ ಕರೆ ಮಾಡಲು ಸಾಧ್ಯವಾಗದೆ, ವಾಹನದ ಇಂಧನ ಖಾಲಿಯಾದ ಕಾರಣ ಮರುಭೂಮಿಯ ಬಿಸಿಲಿನ ತಾಪಕ್ಕೆ ಆಹಾರ ಮತ್ತು ನೀರಿಲ್ಲದೆ ಪರದಾಡಿದರು. ತೀವ್ರ ನಿರ್ಜಲೀಕರಣ ಮತ್ತು ಬಳಲಿಕೆಯಿಂದಾಗಿ ಇಬ್ಬರ ಪ್ರಾಣ ಹೋಗಿದೆ.

 

650 ಕಿಲೋಮೀಟರ್‌ಗಳಷ್ಟು ವಿಸ್ತರಿಸಿರುವ ರಬ್ ಅಲ್ ಖಲಿಯು ಸೌದಿ ಅರೇಬಿಯಾದ ದಕ್ಷಿಣ ಪ್ರದೇಶಗಳು ಕಠಿಣ ಹವಾಮಾನದಿಂದ ಪ್ರತಿಕೂಲಕರ ಪರಿಸ್ಥಿತಿಗಳಿಗೆ ಕುಖ್ಯಾತಿ ಪಡೆದಿವೆ.