ಕಲಬುರಗಿ ಜಿಲ್ಲಾ ಆಳಂದ ತಾಲೂಕಿನಲ್ಲಿ ಕರ್ನಾಟಕ ಭೀಮ್ ಸೇನೆ ವತಿಯಿಂದ ಕರ್ನಾಟಕ ಸರಕಾರದ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಮತ್ತು ಐಟಿಬಿಟಿ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ಅವರಿಗೆ RSS ಕಾರ್ಯಕರ್ತರು ಜೀವ ಬೆದರಿಕೆ ಹಾಗೂ ಅವಾಚ್ಯ ಪದಗಳಿಂದ ನಿಂದನೆ ಮಾಡಿದವನು ಗಡಿಪಾರು ಮಾಡಬೇಕು. ದೇಶದಲ್ಲಿ ಎಲ್ಲರಿಗೂ ಒಂದೇ ಸಂವಿಧಾನ ಇದ್ದು ಒಬ್ಬ ದಲಿತ ಸಚಿವರಿಗೆ ಈ ರೀತಿಯ ಜೀವ ಬೆದರಿಕೆ ಮತ್ತು ಅವಾಚ್ಯ ಪದಗಳಿಂದ ನಿಂದನೆ ಮಾಡುತಾರೆ. ಸಾಮಾನ್ಯ ಜನರ ಗತಿ ಏನು?ಮತ್ತು ದೇಶದ ಗತಿ ಏನು?ಇಂತಹ ಮನುವಾದಿಗಳು ಸಂವಿಧಾನ ಅಡಿಯಲ್ಲಿ ಮಾತನಾಡದೆ ತಮ ಮನಬಂದಂತೆ ಸಂವಿಧಾನ ವಿರೋಧಿ ಕೆಲಸ ಮಾಡುತಿದ್ದಾರೆ ಅಂತವರಿಗೆ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಸಚಿವರಿಗೆ ಸೂಕ್ತ ವಾದ ರಕ್ಷಣೆ ನೀಡಬೇಕು ಎಂದು ಕರ್ನಾಟಕ ಭೀಮ್ ಸೇನೆ ವತಿಯಿಂದ ಸನ್ಮಾನ್ಯ ಶ್ರೀ ಜಿ ಪರಮೇಶ್ವರ್ ಮಾನ್ಯ ಗ್ರಹ ಸಚಿವರಿಗೆ ಮಾನ್ಯ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಸಂಜಯ್ ಭೋಸಲೆ ಕರ್ನಾಟಕ ಭೀಮ್ ಸೇನೆ ಕಲಬುರಗಿ, ನಾಗರಾಜ್ ಸಿಂಗೆ ತಾಲೂಕ್ ಅಧ್ಯಕ್ಷರು ಕರ್ನಾಟಕ ಭೀಮ್ ಸೇನೆ ಆಳಂದ, ಜೈಭೀಮ್ ಮೇಲಿನಕರಿ,, ಶಿವ ಪ್ರಸನ್, ಜೈಭೀಮ್ ಸುಳ್ಳದ, ಮಹೇಶ್ ಪೋತೆ, ಮಹಾವೀರ್ ಕಾಂಬಳೆ, ಅಮರ್ ಸಿಂಗೆ, ನಿತಿನ್ ದೊರೆ, ರವಿಕುಮಾರ್ ಅರೆ, ಪ್ರಜ್ವಲ್ ಡೊಲ್, ಅಭಿಷೇಕ್ ಕಟ್ಟಿಮನಿ, ಹಾಗೂ ಕರ್ನಾಟಕ ಭೀಮ್ ಸೇನೆ ತಾಲೂಕ್ ಪದಾಧಿಕಾರಿಗಳು ಹಾಗೂ ಗ್ರಾಮ ಶಾಖೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ