ಶಿರಗುಪ್ಪಿಯಲ್ಲಿ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮ

ಶಿರಗುಪ್ಪಿ : ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಕುಂದಗೋಳ ವಲಯದ ಶಿರಗುಪ್ಪಿ ಗ್ರಾಮದಲ್ಲಿ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀ ಗುರುಪಾದೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು..
ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಚೈತ್ರಾ ಶಿರೂರ ಉದ್ಘಾಟಿಸಿದರು,
ದಿವ್ಯ ಸಾನಿಧ್ಯವನ್ನು ವಹಿಸಿಕೊಂಡಿದ್ದ ಪರಮಪೂಜ್ಯ ಶ್ರೀ ಅಭಿನವ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಕಾರ್ಯಕ್ರಮವನ್ನು ಉದ್ದೇಶಿಸಿ ಸದ್ವಿಚಾರ, ಸದಾಚಾರ, ಸಚ್ಚಿಂತನೆಗಳನ್ನು ಹೊಂದಿ ದೇವರು, ಧರ್ಮದಲ್ಲಿ ನಂಬಿಕೆ ಇಟ್ಟು ನಡೆಸುವ ಎಲ್ಲಪೂಜೆ, ಪುನಸ್ಕಾರ ಧಾರ್ಮಿಕ ಕಾರ್ಯಕ್ರಮಗಳಿಂದ ಜೀವನದಲ್ಲಿ ನೆಮ್ಮದಿ ದೊರೆಯುತ್ತದೇ ಎಂದು ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಗದಗ ನಿರ್ದೇಶಕರಾದ ಶ್ರೀ ಕೇಶವ್ ದೇವಾಂಗ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಯರಗುಪ್ಪಿ ಮುಖಂಡರಾದ ಶಂಕ್ರಪ್ಪ ನೆರ್ತಿ, ಮಹಾಬಳೇಶ್ವರ ಅಣ್ಣಿಗೇರಿ, ಜಾಫರ್ ಅಹಮದ್ ಅತ್ತಾರ್, ಗಂಗವ್ವ ನೀಲಪ್ಪ ನಾಯ್ಕರ, ಶಾಂತಯ್ಯ ಹೊಸಮಠ, ಶ್ರೀ ಗಣೇಶ, ವಲಯದ ಮೇಲ್ವಿಚಾರಕರು ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ವಲಯದ ಎಲ್ಲಾ ಕಾರ್ಯಕರ್ತರು, ಸಂಘಗಳ ಸದಸ್ಯರು ಭಾಗವಹಿಸಿದ್ದರು.

error: Content is protected !!